ಹೈಸ್ಕೂಲ್ ಮಕ್ಕಳಿಗೆ ಸ್ಮಾರ್ಟ್ ಪೋನ್ ಒದಗಿಸಿಕೊಡಿ- ಸಿಎಂಗೆ ಶಾಸಕ ಬಂಡೆಪ್ಪ ಕಾಶೆಂಪುರ್ ಮನವಿ

ಕೊರೊನಾದಿಂದ ಲಾಕ್‌ಡೌನ್ ಉಂಟಾದ ಪರಿಣಾಮ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ನಡೆಸಲು ಸರ್ಕಾರ ಮುಂದಾಗಿದೆ. ಅದರಂತೆಯೇ ಸರ್ಕಾರ ಕನಿಷ್ಟ ಪಕ್ಷ ಹೈಸ್ಕೂಲ್ ವಿದ್ಯಾರ್ಥಿಗಳಿಗಾದರು ಸ್ಮಾರ್ಟ್ ಫೋನ್ ಒದಗಿಸಿಕೊಡಬೇಕೆಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಸಿ.ಎಂ ಬಿಎಸ್ವೈಗೆ ಮನವಿ ಮಾಡಿದ್ದಾರೆ. ಬೀದರ್‌ನಲ್ಲಿ ಮಾತನಾಡಿದ ಅವರು, ಆನ್‌ಲೈನ್ ಕ್ಲಾಸ್ ಜಾರಿಗೊಳಿಸಲು ಶಿಕ್ಷಣ ಇಲಾಖೆ ಯಾವ ರೀತಿ ಸಿದ್ದತೆ ಮಾಡಿಕೊಂಡಿದೆ. ಯಾವ ರೀತಿಯ ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂಬ ಸಲಹೆ ನೀಡಿದರು. ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಖರೀದಿಸಲು ಕಷ್ಟವಾಗಲಿದ್ದು, ಸರ್ಕಾರವೇ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಒದಗಿಸಿಕೊಡಬೇಕು ಎಂದು ಹೇಳಿದರು.

 

 

 

 

ಈ ಸಂದರ್ಭದಲ್ಲಿ ಬೀದರ್ ಡಿಡಿಪಿಐ ಎಚ್.ಸಿ ಚಂದ್ರಶೇಖರ, ಹುಮನಾಬಾದ್ ಬಿಇಒ ಶಿವಗುಂಡಪ್ಪ ಎಸ್ ಸಿದ್ದಗೋಳ, ಬೀದರ್ ಬಿಇಒ ಸೂರ್ಯಕಾಂತ ಮಹಾನೆ, ಬೇಮಳಖೇಡ ಸಿಆರ್ಪಿ ರಾಜಪ್ಪ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಆಶಾಕಾರ್ಯಕರ್ತೆಯರ ಪ್ರತಿಭಟನೆ

Fri Jul 10 , 2020
ಪ್ರತಿ ತಿಂಗಳ ಗೌರವ ಧನವನ್ನು 12 ಸಾವಿರಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕೊರೊನಾ ಸಂಬಂಧಿದಸಿದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತೆಯರಿಗೆ ಅಗತ್ಯ ರಕ್ಷಣಾ ಸಾಧನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ಚಪ್ಪಾಳೆ ತಟ್ಡುವ ಮೂಲಕ ಗೌರವ ಸಲ್ಲಿಸುತ್ತಿರುವುದು ಸಂತಸ ತಂದಿದೆ. ಆದರೆ, ಜೀವ ಪಣಕ್ಕಿಟ್ಡು ಕೆಲಸ ಮಾಡುತ್ತಿರುವ ನಮಗೆ ಗೌರವ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ […]

Advertisement

Wordpress Social Share Plugin powered by Ultimatelysocial