`ಅಪ್ಪು ಹಬ್ಬ’ ಫಿಕ್ಸ್​! James ಸಿನಿಮಾ ರಿಲೀಸ್​ಗೆ 45 ದಿನಗಳು ಬಾಕಿ.. ಮಾರ್ಚ್​ 17ಕ್ಕೆ ಬಿಡುಗಡೆ

‘ಜೇಮ್ಸ್’   ಪವರ್ ಸ್ಟಾರ್  ಪುನೀತ್ ರಾಜ್​ಕುಮಾರ್ಅ ಭಿಮಾನಿಗಳ ಕಾತರ ಹೆಚ್ಚಿಸಿರುವ ಸಿನಿನಾ. ಜೇಮ್ಸ್ ಅಪ್ಪು ಹುಟ್ಟು ಹಬ್ಬ  ಕ್ಜೆ ರಿಲೀಸ್ ಆಗಲಿದ್ದು, ಮಾದಪ್ಪನ ಜಾತ್ರೆಯಂತೆ ಜೇಮ್ಸ್ ಯಾತ್ರೆ ಮಾಡಲು ಅಪ್ಪು   ಅಭಿಮಾನಿಗಳು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ.
ಬೆಂಗಳೂರಿನ 5 ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಬಿಗ್ ಕಟೌಟ್​ಗಳನ್ನು ನಿಲ್ಲಿಸಿ, ಅ ಕಟೌಟ್​ ಗಳಿಗೆ ಹೆಲಿಕಾಪ್ಟರ್    ಮೂಲಕ ಹೂಮಳೆ   ಸುರಿಸಲು ದೊಡ್ಮನೆ ಅಭಿಮಾನಿಗಳು ರೆಡಿಯಾಗುತ್ತಿದ್ದಾರೆ. ವಿಶೇಷ ಅಂದರೆ ಜೇಮ್ಸ್ ಚಿತ್ರದ ಬಿಡುಗಡೆಗೆ ಇನ್ನು 45 ದಿನಗಳು ಬಾಕಿ ಇರುವಗಲೇ ಅಪ್ಪು ಅಭಿಮಾನಿಗಳಲ್ಲಿ ‘ಜೇಮ್ಸ್’ ಫೀವರ್ ಹೆಚ್ಚಾಗಿದೆ. ಈ ಹಿಂದೆ ಯಾವ ಹೀರೋ ಸಿನಿಮಾವನ್ನು ಸ್ವಾಗತಿಸಿರದ ರೀತಿ ಜೇಮ್ಸ್ ಸ್ವಾಗತ ಮಾಡಲು ತಯಾರಿ ಮಾಡಿರುವ ಅಪ್ಪು ಫ್ಯಾನ್ಸ್  ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಐದು ಹೆಲಿಕಾಪ್ಟರ್​​ಗಳಲ್ಲಿ ಒಂದು ಹೆಲಿಕಾಪ್ಟರ್ ಅನ್ನು ದುಬಾರಿ ಬಾಡಿಗೆ ಕೊಟ್ಟು ಮಾರ್ಚ್ 17 ಕ್ಕೆ ಜೇಮ್ಸ್ ಸ್ವಾಗತ ಮಾಡಲು ರೆಡಿಯಾಗುವಂತೆ ಹೇಳಿದ್ದಾರೆ.
ಹೆಲಿಕಾಪ್ಟರ್​​ ಬುಕ್​ ಮಾಡಿದ ಅಪ್ಪು ಫ್ಯಾನ್ಸ್​!
ಮಾರ್ಚ್ 17 ರಂದು ಬೆಳಗ್ಗೆಯೇ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ. 10 ಗಂಟೆ ವೇಳೆಗೆ , ಆರು ಹೆಲಿಕಾಪ್ಟರ್​​ಗಳು ಬೆಂಗಳೂರು, ಚನ್ನಪಟ್ಟಣ, ಬಳ್ಳಾರಿಯ ಹೊಸಪೇಟೆ, ಶಿವಮೊಗ್ಗ, ಮೈಸೂರು, ಶಿರಾದಲ್ಲಿ ಏಕ ಕಾಲಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಟೌಟ್ ಗಳಿಗೆ ಹೂಮಳೆ ಸುರಿಸುವ ಮೂಲಕ ಅಪ್ಪುಗೆ ಅಭಿಮಾನದ ಅಭಿಷೇಕ ಮಾಡಲು ದೊಡ್ಮನೆ ಅಭಿಮಾನಿ ದೇವರುಗಳು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ ಜೇಮ್ಸ್ ಅಪ್ಪು ಅಭಿನಯದ 30ನೇ ಸಿನಿಮಾವಾಗಿರುವ ಕಾರಣ ಕೆಜಿ ರಸ್ತೆಯ ಚಿತ್ರಮಂದಿ ರದ ಬಳಿ ಅಪ್ಪು ಅಭಿನಯದ 30ಚಿತ್ರಗಳ ಕಟೌಟ್ ನಿಲ್ಲಿಸುವ ಯೋಜನೆ ಹಾಕಿಕೊಂಡಿದ್ದಾರೆ. ಜೊತೆಗೆ ಮಾರ್ಚ್ 17 ರಂದು ಇಡೀ ದಿನ ಅನ್ನದಾನ ಮಾಡಲು ಸಿದ್ದತೆ ಮಾಡಿಕೊಂಡಿರುವ ಅಪ್ಪು ಫ್ಯಾನ್ಸ್, ರಾಜ್ಯಾದ್ಯಂತ ಚಿತ್ರಮಂದಿರಗಳ ಬಳಿ, ನೇತ್ರದಾನದ ವ್ಯವಸ್ಥೆಯನ್ನು ಮಾಡಲಿದ್ದಾರೆ‌.ಇದನ್ನು : ಕಿಚ್ಚನ ಸಿನಿ ಪಯಣಕ್ಕೆ 26 ವರ್ಷ, ಇಂದೇ 50ನೇ ಸಿನಿಮಾ ಅನೌನ್ಸ್​ ಮಾಡ್ತಾರಾ ಅಭಿನಯ ಚಕ್ರವರ್ತಿ?ಹಬ್ಬ ಮಾಡೋಕೆ ಸಜ್ಜಾದ ದೊಡ್ಮನೆ ಅಭಿಮಾನಿಗಳು!
ಒಟ್ಟಿನಲ್ಲಿ ಜೇಮ್ಸ್ ರಿಲೀಸ್, ಪವರ್ ಸ್ಟಾರ್ ಹುಟ್ಟುಹಬ್ಬ ಒಂದೇ ದಿನ ಆಗಿರೋ ಕಾರಣ ದಸರಾ ಉತ್ಸವದಂತೆ ದೊಡ್ಮನೆ ರಾಜಕುಮಾರ ಹುಟ್ಟು ಹಬ್ಬ ಮತ್ತು ಜೇಮ್ಸ್ ಸೆಲಬ್ರೇಷನ್​ ಮಾಡಲು ದೊಡ್ಮನೆ ಅಭಿಮಾನಿ ದೇವರುಗಳು ದೊಡ್ಡ ಪ್ಲ್ಯಾನ್​ ಮಾಡಿದ್ದಾರೆ. ವಿಶೇಷ ಅಂದ್ರೆ ಇಷ್ಟು ಅದ್ದೂರಿ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಪವರ್ ಸ್ಟಾರ್ ಅಭಿಮಾನಿಗಳೆ ಅಭಿಮಾನದಿಂದ ಭರಿಸಲಿದ್ದಾರೆ. ಇದು ಅಭಿಮಾನಿಗಳ ಅಬ್ಬರ, ಆದರೆ, ಫಸ್ಟ್ ಟೈಂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಪ್ಯಾನ್ ಇಂಡಿಯಾ ಚಿತ್ರವಾಗಿ ಬೆಳ್ಳಿ ತೆರೆ ಮೇಲೆ ಅರಳಲಿದೆ. ಇದು ಅಪ್ಪು ಅಭಿಮಾನಿಗಳ ಸಂಭ್ರಮವನ್ನು ಡಬಲ್ ಮಾಡಿದೆ.ಇದನ್ನು : `ಜೇಮ್ಸ್​’ ಸಿನಿಮಾದ ಸ್ಪೆಷಲ್​ ಪೋಸ್ಟರ್​ ರಿಲೀಸ್​, ಯೋಧನ ಅವತಾರದಲ್ಲಿ ಅಪ್ಪುನ ಕಂಡು ಫ್ಯಾನ್ಸ್​ ಥ್ರಿಲ್​!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತ್ರಿಪುರಾ, ಬೆಂಗಳೂರಿನಲ್ಲಿ ಶಾಲೆಗಳು ಪುನರಾರಂಭ; ಇತರ ರಾಜ್ಯಗಳು;

Mon Jan 31 , 2022
ತ್ರಿಪುರಾದಲ್ಲಿ ಶಾಲೆಗಳು ಸೋಮವಾರ ಪುನರಾರಂಭಗೊಂಡಿವೆ. ಬೆಂಗಳೂರಿನಲ್ಲಿ ಇಂದು ಶಾಲಾ ಕಾಲೇಜುಗಳು ಪುನರಾರಂಭಗೊಂಡಿವೆ. ರಾಜಸ್ಥಾನ ಮತ್ತು ಹರಿಯಾಣದಂತಹ ಇತರ ಹಲವು ರಾಜ್ಯಗಳು ನಾಳೆ, ಫೆಬ್ರವರಿ 1 ರಂದು ಶಾಲೆಗಳನ್ನು ಪುನಃ ತೆರೆಯಲಿವೆ. ತರಗತಿಗಳು ಹೈಬ್ರಿಡ್ ಮೋಡ್‌ನಲ್ಲಿ ಮುಂದುವರಿಯುತ್ತವೆ. ದೈಹಿಕವಾಗಿ ತರಗತಿಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿಗಳಿಗೆ ಹಾಜರಾಗುವ ಆಯ್ಕೆಯನ್ನು ಸಹ ಒದಗಿಸಲಾಗುತ್ತದೆ. ಆಫ್‌ಲೈನ್ ಮೋಡ್‌ನಲ್ಲಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪೋಷಕರು ಅಥವಾ ಪೋಷಕರಿಂದ ಲಿಖಿತ ಅನುಮತಿಯನ್ನು ಹೊಂದಿರಬೇಕು. ಇದು […]

Advertisement

Wordpress Social Share Plugin powered by Ultimatelysocial