೧೦ ಸಮಸ್ಯೆ ಪರಿಹಾರಕ್ಕೆ ಎಐ ಬಳಕೆ.

 

೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ್ದ ರಾಷ್ಟ್ರವಾಗುವ ಗುರಿಯನ್ನು ಭಾರತ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ನೆರವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಎಲ್ಲ ನಾಗರಿಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಚಿಸಲಾಗುತ್ತಿರುವ ಬೃಹತ್ ಮತ್ತು ಆಧುನಿಕ ಡಿಜಿಟಲ್ ಮೂಲಸೌಕರ್ಯ ವಿವರಣೆ ನೀಡುವ ವೇಳೆ ಪ್ರಧಾನಿ ನರೇಂದ್ರಮೋದಿ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನ್ಲಿಶಿಂಗ್ ದಿ ಪೊಟೆನ್ಷಿಯ್ ಈಸ್ ಆಫ್ ಲಿವಿಂಗ್ ಯೂಸಿಂಗ್ ತಂತ್ರಜ್ಞಾನ ಕುರಿತು ಬಜೆಟ್ ನಂತರದ ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಸರ್ಕಾರವು ಸಣ್ಣ ಉದ್ಯಮಗಳ ಅನುಸರಣೆ ವೆಚ್ಚವನ್ನು ಕಡಿಮೆ ಮಾಡಲು ಇಚ್ಛಿಸುತ್ತದೆ.ನಾವು ೪೦ ಸಾವಿರ ಅನುಸರಣೆಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದೇವೆ. ಭಾರತ ಆಧುನಿಕ ಡಿಜಿಟಲ್ ಮೂಲಸೌಕರ್ಯವನ್ನು ರಚಿಸುತ್ತಿದೆ ಮತ್ತು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದರು.ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ತಂತ್ರಜ್ಞಾನ ಬಳಸಲಾಗುತ್ತಿದೆ. ಭಾರತೀಯ ನಾಗರಿಕರ ಜೀವನದಲ್ಲಿ ಗುಣಾತ್ಮಕ ವ್ಯತ್ಯಾಸವನ್ನು ತರಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದರು.೫ಜಿ ಮತ್ತು ಕೃತಕ ಬುದ್ಧಿಮತ್ತೆನಂತಹ ತಂತ್ರಜ್ಞಾನಗಳು ಸಂಭಾಷಣೆಗಳನ್ನು ಮುನ್ನಡೆಸುತ್ತಿವೆ. ವೈದ್ಯಕೀಯ ಶಿಕ್ಷಣ, ಕಋಷಿ ಮತತು ಇತರ ಹಲವು ಕ್ಷೇತ್ರಗಳನ್ನು ಪರಿವರ್ತಿಸಲು ಸಿದ್ಧವಾಗಿವೆ. ಕೃತಕ ಬುದ್ಧಿಮತ್ತೆ ಬಳಸಿ ಸಾಮಾನ್ಯ ಜನರು ಎದುರಿಸುತ್ತಿರುವ ೧೦ ಸಮಸ್ಯೆಗಳ ಪ್ರದೇಶಗಳನ್ನು ಗುರುತಿಸಲು ಮೋದಿ ಸಲಹೆ ನೀಡಿದರು.೨೧ನೇ ಶತಮಾನ, ತಂತ್ರಜ್ಞಾನ ಚಾಲಿತವಾಗಲಿದ್ದು, ಕೇವಲ ಡಿಜಿಟಲ್ ಮತ್ತು ಇಂಟರ್‌ನೆಟ್ ತಂತ್ರಜ್ಞಾನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವುದನ್ನು ಸುದ್ದಿಸಂಸ್ಥೆ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವರಾಜ ಬೊಮ್ಮಾಯಿ ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ: ಚೇತನ್ ಅಹಿಂಸಾ!

Wed Mar 1 , 2023
ಪ್ರಧಾನಿ ನರೇಂದ್ರ ಮೋದಿಯವರು ಫೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಸಿಎಂ ಬೊಮ್ಮಾಯಿ ಅವರನ್ನು ನಟ ಚೇತನ್ ಅಹಿಂಸಾ ಅವರು ಟೀಕಿಸಿದ್ದಾರೆ. ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಫೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ […]

Advertisement

Wordpress Social Share Plugin powered by Ultimatelysocial