ಅಧಿಕಾರಕ್ಕೆ ಬಂದ ಮರುದಿನವೇ 1800 ಕೋಟಿ ರೂ. ರೈತರ ಸಾಲ ಮನ್ನಾ!

ಬೆಂಗಳೂರು- ಸ್ವಂತ ಶಕ್ತಿಯ ಮೇಲೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಮರುದಿನವೇ ಬಾಕಿ ಉಳಿದಿರುವ 1800 ಕೋಟಿ ರೂ. ರೈತರ ಸಾಲವನ್ನು ಬಡ್ಡಿಸಹಿತ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಜೆಪಿ ಭವನದಲ್ಲಿ ನಡೆದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವತಂತ್ರ ಸರ್ಕಾರ ರಚನೆಯಾದರೆ ಪಂಚರತ್ನ ಯೋಜನೆಗಳ ಭರವಸೆಗಳನ್ನು ಈಡೇರಿಸುತ್ತೇನೆ ಎಂದರು.

ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಯಾವುದೇ ಮಹತ್ವವಿಲ್ಲ. ಬರೀ ಘೋಷಣೆಗಳನ್ನು ಮಾಡಿದ್ದಾರೆ ಎಂದ ಅವರು, ನಾಡಿನ ಜನರು ರಾಷ್ಟ್ರೀಯ ಪಕ್ಷಗಳನ್ನು ದೂರವಿಡುವುದಾಗಿ ತಾವು ಕೈಗೊಂಡಿದ್ದ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರಾದೇಶಿಕ ಪಕ್ಷದತ್ತ ಅವರ ಒಲವು ವ್ಯಕ್ತವಾಗಿದೆ ಎಂದರು.
ವಿಧಾನಸಭೆ ಚುನಾವಣೆಗೂ ಮುನ್ನ ಮೈಸೂರು-ಹಾಸನ ಭಾಗದಲ್ಲಿ ಪಕ್ಷದ ವತಿಯಿಂದ ದೊಡ್ಡ ಸಮಾವೇಶ ನಡೆಸಲಾಗುವುದು. ಈಗಾಗಲೇ 75 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಮೊಣಕೈಗೆ ತುಪ್ಪ ಸವರಿದಂತಾಗಿದೆ. ಅದನ್ನು ತಿನ್ನಲು ಆಗುವುದಿಲ್ಲ. ಇನ್ನೊಂದುವರೆ ತಿಂಗಳ ಅವಯಲ್ಲಿ ಬಜೆಟ್ ಭರವಸೆಗಳನ್ನು ಈಡೇರಿಸಲು ಎಷ್ಟು ಸಾಧ್ಯ ಎಂದು ಪ್ರಶ್ನಿಸಿದರು.

ನಮ್ಮ ಮೇಲೆ ಯಾವುದೇ ಆಪಾದನೆ ಇಲ್ಲ. ನಾವು ಕೆಎಂಎಫ್ ಹಾಲಿನ ರೀತಿ ಪರಿಶುದ್ಧರು . ಜೆಡಿಎಸ್ ಪಕ್ಷಕ್ಕೆ ದೇವರ ಅನುಗ್ರಹವಿದೆ. ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಮಾತನಾಡಿ, ಯಾವುದೇ ಆಸೆಯಿಟ್ಟುಕೊಂಡು ಜೆಡಿಎಸ್ ಸೇರಿಲ್ಲ. ಉತ್ತರ ಕರ್ನಾಟಕ ಭಾಗದ ಹಲವು ಸಮಸ್ಯೆಗಳು ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈಡೇರಬೇಕಿದೆ. ರಾಜ್ಯದಲ್ಲಿ ಪರ್ಯಾಯ ರಾಜಕಾರಣವನ್ನು ಜನರು ಬಯಸುತ್ತಿದ್ದು, ಅದಕ್ಕೆ ಕುಮಾರಸ್ವಾಮಿಯವರು ಸೂಕ್ತ ಎಂದರು.

ಜಿಪಂ ಮಾಜಿ ಅಧ್ಯಕ್ಷ ವಡಗೂರು ಹರೀಶ್‍ಗೌಡ ಮಾತನಾಡಿ, ಇತ್ತೀಚಿನ ಕಾಂಗ್ರೆಸ್ ಧೋರಣೆಯಿಂದ ಬೇಸತ್ತು ಹಾಗೂ ಬಿಜೆಪಿಯ ಭ್ರಷ್ಟಾಚಾರ ಸಹಿಸದೆ ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಕುಮಾರಸ್ವಾಮಿ ಅವರು ಅಧಿಕಾರಾವಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳು ಸೂರ್ತಿಯಾಗಿವೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಸೇನಾ ಪಕ್ಷ ಹಾಗೂ ಬಿಲ್ಲು ಬಾಣದ ಚಿಹ್ನೆಯನ್ನ ಡೀಲ್ ಮಾಡಲಾಗಿದೆ.

Sun Feb 19 , 2023
ಮುಂಬೈ: ಶಿವಸೇನಾ ಪಕ್ಷ ಹಾಗೂ ಬಿಲ್ಲು ಬಾಣದ ಚಿಹ್ನೆ 2 ಸಾವಿರ ಕೋಟಿ ರೂಪಾಯಿಗೆ ಡೀಲ್ ಆಗಿದೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಆರೋಪ ಮಾಡಿದ್ದಾರೆ. ಶಿವಸೇನಾ ಪಕ್ಷ ಹಾಗೂ ಬಿಲ್ಲು ಬಾಣದ ಚಿಹ್ನೆಯನ್ನ ಡೀಲ್ ಮಾಡಲಾಗಿದೆ. ನನ್ನ ಹತ್ತಿರ ಇದಕ್ಕೆ ಸಂಬಂಧಪಟ್ಟ ಪಕ್ಕಾ ಮಾಹಿತಿ ಇದೆ. ಚುನಾವಣಾ ಆಯೋಗದ ನಿರ್ಧಾರ ನ್ಯಾಯಯುತವಲ್ಲ. ಇದು ಪಕ್ಕಾ ಡೀಲ್‌. 2000 ಕೋಟಿ […]

Advertisement

Wordpress Social Share Plugin powered by Ultimatelysocial