25 ಜೋಡಿಗಳಿಗೆ ಕಂಕಣ ಭಾಗ್ಯ

ದೋರನಹಳ್ಳಿ (ಶಹಾಪುರ): ‘ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ಮೂಲಕ ಭಕ್ತರ ಬದುಕಿಗೆ ಭರವಸೆ ತುಂಬುತ್ತಿರುವ ಮಾಂತೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಮಹತ್ವದ ಕಾರ್ಯಗಳು ನಾಡಿಗೆ ಮಾದರಿಯಾಗಿವೆ’ ಎಂದು ಕಡಕೋಳ ಮಡಿವಾಳೇಶ್ವರ ಮಠದ ಡಾ.ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮಾಂತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಸಾಮೂಹಿಕ ವಿವಾಹ ಹಾಗೂ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ದುಂದು ವೆಚ್ಚಕ್ಕೆ ಕಡಿವಾಣ ಹಾಕಲು 25 ಜೋಡಿಗಳಿಗೆ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.ಹಿರೇಮಠ ಸಂಸ್ಥಾನದ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ,’ಗ್ರಾಮ ದಲ್ಲಿ ಇತ್ತೀಚೆಗೆ ನಡೆದ ಸಿಲಿಂಡರ್ ಸೋರಿಗೆ ಪ್ರಕರಣದಿಂದ ಗ್ರಾಮವೇ ಮೌನವಾಗಿದೆ. ಆದ್ದರಿಂದ ಜಾತ್ರೆಯನ್ನು ಸರಳವಾಗಿ ಆಚರಿಸಿದ್ದೇವೆ. ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು. ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಡಾ.ಶಂಭುಲಿಂಗ ಶಿವಾಚಾರ್ಯ, ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಮುಖಂಡರಾದ ಚೆನ್ನರೆಡ್ಡಿ ಪಾಟೀಲ, ಶರಣಭೂಪಾಲ ರೆಡ್ಡಿ, ರಾಯಪ್ಪಗೌಡ ದರ್ಶನಾಪುರ, ಮಹೇಶ ಆನೆಗೊಂದಿ, ಸುರೇಂದ್ರ ಪಾಟೀಲ ಮಡ್ನಾಳ್, ಶರಣು ಗದ್ದುಗೆ, ಡಾ.ಶಿವರಾಜ ದೇಶಮುಖ ಹಾಗೂ ಗ್ರಾಮದ ಮುಖಂಡರಾದ, ಪ್ರಭುರಾಯ ಮಲಗೊಂಡ, ಭಗವಂತರಾಯ ಮಲಗೊಂಡ, ತಿಪ್ಪಣ್ಣ ಆಂದೇಲಿ, ಸಂಗಣ್ಣ ಮಲಗೊಂಡ, ಗೋಲ್ಲಾಳಪ್ಪ ಗೋಲಗೇರಿ, ಮಾನಪ್ಪ ಹುಲಸೂರು, ಹಣಮಂತ ಶಹಾಪುರ, ಹೈಯಾಳಪ್ಪ ಗುಂಟನೂರು, ನಾಗಪ್ಪ ಕಣೆಕಲ್, ಶಂಕರಯ್ಯ ಸ್ವಾಮಿ, ಷಣ್ಮುಖಪ್ಪ ಕಕ್ಕೇರಿ, ವೀರಸಂಗಣ್ಣ ದೇಸಾಯಿ, ಬಸವರಾಜ ದೇಸಾಯಿ ಹಾಗೂ ಬಸವರಾಜ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಶಾಸಕರ ವಶಕ್ಕೆ ಪಡೆದು ಕಾಂಪೌಂಡ್‌ ಕಾಮಗಾರಿ

Wed Mar 2 , 2022
ಶ್ರೀರಂಗಪಟ್ಟಣ: ಅರಕೆರೆ ಗ್ರಾಮದ ಸರ್ಕಾರಿ ಶಾಲೆಯ ಸುತ್ತ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ತಡೆಯಲು ಬಂದ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದರು. ನಂತರ ಅಧಿಕಾರಿಗಳ ಸೂಚನೆಯಂತೆ ಕಾಂಪೌಂಡ್‌ ಕಾಮಗಾರಿ ಮುಂದುವರಿಸಲಾಯಿತು.ನಂತರ ಅಧಿಕಾರಿಗಳ ಸೂಚನೆಯಂತೆ ಕಾಂಪೌಂಡ್‌ ಕಾಮಗಾರಿ ಮುಂದುವರಿಸಲಾಯಿತು.ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯ ಸುತ್ತ ಕಾಂಪೌಂಡ್‌ ನಿರ್ಮಾಣ ಕಾರ್ಯ ಮಂಗಳವಾರ ಆರಂಭವಾಗುತ್ತಿದ್ದಂತೆಯೇ ಬೆಂಬಲಿಗರ ಜೊತೆ ಬಂದ ರಮೇಶ ಬಂಡಿಸಿದ್ದೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಶಾಲೆಯ ಜಾಗಕ್ಕೆ ಸಂಬಂಧಿಸಿದ ಪ್ರಕರಣ […]

Advertisement

Wordpress Social Share Plugin powered by Ultimatelysocial