425 ಕ್ಕೆ ಏರಿದ ಸೋಂಕಿತರ ಸಂಖ್ಯೆ

ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 7 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಕಲಬುರಗಿಯಲ್ಲಿ ಇಂದು 4 ತಿಂಗಳ ಮಗು ಸೇರಿದಂತೆ ಹೊಸದಾಗಿ 5 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಲಬುರಗಿಯ ಐದು ಜನರಿಗೆ ಕೊರೊನಾ ವೈರಸ್ ಪತ್ತೆಯಾದರೆ, ಬೆಂಗಳೂರಿನ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 17 ಜನರಿಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಂದು ಇಡೀ ರಾತ್ರಿ ಅತ್ತಿದ್ದ ಕ್ಯಾಪ್ಟನ್ ಕೊಹ್ಲಿ

Wed Apr 22 , 2020
ಪ್ರತಿಯೊಬ್ಬ ಮನುಷ್ಯನ ಸಾಧನೆ ಹಾಗೂ ಯಶಸ್ಸನ್ನು ಕೆದಕಿದರೆ ಅದರ ಹಿಂದೆ ಕಷ್ಟಗಳ ಕೂಪವೇ ತೆರೆದುಕೊಳ್ಳತ್ತದೆ. ಇಂದು ಕ್ರಿಕೆಟ್ ಜಗತ್ತಿನ ದೊರೆಯಾಗಿ ರಾರಾಜಿಸುತ್ತಿರುವ ಟೀಂ ಇಂಡಿಯಾ ನಾಯಕ ಹಾಗೂ ಅಗ್ರಮಾನ್ಯ ಬ್ಯಾಟ್ಸ್​​ಮನ್ ವಿರಾಟ್​ ಕೊಹ್ಲಿ ಕೂಡ ಅಂದು ಹಲವು ಕಷ್ಟಗಳನ್ನ ಎದುರಿಸಿಯೇ ಬಂದರು ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ತಾವು ಇತರರಿಗಿಂತ ಚೆನ್ನಾಗಿಯೇ ಆಡಿದ್ದರೂ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಕೊಹ್ಲಿ ರಾತ್ರಿಯಿಡೀ ಅತ್ತಿದ್ದರಂತೆ. ಈ ಕುರಿತು ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ಅಂದಿನ […]

Advertisement

Wordpress Social Share Plugin powered by Ultimatelysocial