5ರಿಂದ 12 ವಯೋಮಿತಿಯ ಮಕ್ಕಳಿಗೆ ಬಯಾಲಾಜಿಕಲ್ ಇ ಕಂಪನಿಯ ಕೊರ್ಬೆವ್ಯಾಕ್ಸ್ ಲಸಿಕೆ!

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ಮತ್ತೆ ಏರಿಕೆಯಾಗುತ್ತಿರುವುದರ ನಡುವೆ, 5ರಿಂದ 12 ವಯೋಮಿತಿಯ ಮಕ್ಕಳಿಗೆ ಬಯಾಲಾಜಿಕಲ್ ಇ ಕಂಪನಿಯ ಕೊರ್ಬೆವ್ಯಾಕ್ಸ್ ಲಸಿಕೆ ನೀಡಲು ತಜ್ಞರ ಸಮಿತಿ ಗುರುವಾರ ಶಿಫಾರಸು ಮಾಡಿದೆ. ಭಾರತೀಯ ಔಷಧಗಳ ಮಹಾ ನಿಯಂತ್ರಣ (ಡಿಸಿಜಿಐ) ಸಂಸ್ಥೆಯ ವಿಷಯ ತಜ್ಞರ ಸಮಿತಿ (ಎಸ್​ಇಸಿ) ಮಕ್ಕಳ ಲಸಿಕೆ ಕುರಿತು ಗುರುವಾರ ಸಭೆ ನಡೆಸಿದ್ದು ಕೊರ್ಬೆವ್ಯಾಕ್ಸ್ ವ್ಯಾಕ್ಸಿನ್ ಶಿಫಾರಸು ಮಾಡಲು ನಿರ್ಧರಿಸಿತು.

ಅದು ಡಿಸಿಜಿಐಗೆ ಈ ಶಿಫಾರಸನ್ನು ಕಳಿಸಿದೆ. ಇದೀಗ ಕೇಂದ್ರ ಸರ್ಕಾರ, ಈ ಲಸಿಕೆ ಬಳಕೆಗೆ ಡಿಸಿಜಿಐನ ಹಸಿರು ನಿಶಾನೆಯನ್ನು ಎದುರು ನೋಡುತ್ತಿದೆ.

ಪ್ರಸ್ತುತ, 12-14 ವಯಸ್ಸಿನ ಎಳೆಯರಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತಿದೆ. 15ರಿಂದ 18 ವಯೋಗುಂಪಿನ ಮಕ್ಕಳಿಗೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆ ಹಾಕಲಾಗುತ್ತಿದೆ. ಈ ರೀತಿ, ಮಕ್ಕಳಿಗೆ ಒಟ್ಟಾರೆಯಾಗಿ ಎರಡು ಲಸಿಕೆಗಳನ್ನು ದೇಶದಲ್ಲಿ ಬಳಸಲಾಗುತ್ತಿದೆ.

ಬಿಎ.2.12 ಕಾರಣ?: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಗ್ರಹಿಸಲಾದ ಬಹುತೇಕ ಸ್ಯಾಂಪಲ್​ಗಳಲ್ಲಿ ಒಮಿಕ್ರಾನ್​ನ ಬಿಎ.2.12 ಉಪ-ತಳಿ ಪತ್ತೆಯಾಗಿದ್ದು ಇಲ್ಲಿ ಸೋಂಕು ಮತ್ತೆ ಉಲ್ಬಣಿಸಲು ಅದೇ ಕಾರಣವಿರಬಹುದೆಂದು ಶಂಕಿಸಲಾಗಿದೆ. ಏಪ್ರಿಲ್​ನ ಮೊದಲ ಪಾಕ್ಷಿಕದಲ್ಲಿ ಸಂಗ್ರಹಿಸಲಾದ ಬಹುತೇಕ ಸ್ಯಾಂಪಲ್​ಗಳಲ್ಲಿ ಈ ಉಪ-ತಳಿ ಇರುವುದು ಕಂಡು ಬಂದಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಕೆಲವು ಮಾದರಿಗಳಲ್ಲಿ ಬಿಎ.2.12.1 ಉಪ-ತಳಿ ಕೂಡ ಪತ್ತೆಯಾಗಿದೆ. ಅಮೆರಿಕದಲ್ಲಿ ಇತ್ತೀಚೆಗೆ ಸೋಂಕು ಹೆಚ್ಚಳಕ್ಕೆ ಬಿಎ.2.12.1 ಕಾರಣ ಎಂದು ಹೇಳಲಾಗಿದೆ.

ಶಾಂಘೈಯಲ್ಲಿ ಸಾವಿನ ಸಂಖ್ಯೆ ಏರಿಕೆ: ಸೋಂಕಿನ ಅಬ್ಬರದಿಂದ ತತ್ತರಿಸುತ್ತಿರುವ ಚೀನಾದ ಮಹಾನಗರ ಶಾಂಘೈಯಲ್ಲಿ ಇನ್ನೂ ಎಂಟು ಜನರು ಗುರುವಾರ ಮೃತಪಟ್ಟಿದ್ದು ಬಲಿಯಾದವರ ಸಂಖ್ಯೆ 25ಕ್ಕೆ ಏರಿದೆ. ಚೀನಾದ ಮುಖ್ಯಭೂಮಿಯಲ್ಲಿ 19,300ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಕ್ವಾರಂಟೈನ್ ವ್ಯವಸ್ಥೆಯ ಹೊರಗಡೆ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಯಾಗಿರುವುದರಿಂದ ಕಠಿಣ ಕೋವಿಡ್ ನಿಯಂತ್ರಣ ಕ್ರಮಗಳನ್ನು ಮುಂದುವರಿಸಲು ಶಾಂಘೈ ಆಡಳಿತ ನಿರ್ಧರಿಸಿದೆ. ಶಾಂಘೈಯಲ್ಲಿ ಬುಧವಾರ 16,407 ಕೇಸ್​ಗಳು ವರದಿಯಾಗಿದ್ದು ಗುರುವಾರ ತುಸು ಇಳಿಕೆಯಾಗಿ 15,861 ಪ್ರಕರಣಗಳು ದಾಖಲಾಗಿವೆ ಆದರೂ ಒಮಿಕ್ರಾನ್ ರೂಪಾಂತರಿಯಿಂದ ಉಂಟಾಗಿರುವ ಉಬ್ಬರಕ್ಕೆ ಕಡಿವಾಣ ಹಾಕಲು ಹೇರಿರುವ ಕ್ರಮಗಳನ್ನು ಸಡಿಲಿಸದಿರಲು ಸರ್ಕಾರ ನಿರ್ಧರಿಸಿದೆ.

4ನೇ ಅಲೆಯ ಆತಂಕ: ಭಾರತದಲ್ಲಿ ಗುರುವಾರ 2,380 ಹೊಸ ದೈನಿಕ ಪ್ರಕರಣಗಳು ದೃಢಪಟ್ಟಿದ್ದು ಇದು ಕರೊನಾ ಸೋಂಕಿನ ನಾಲ್ಕನೇ ಅಲೆಯ ಸೂಚನೆಯಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,433ಕ್ಕೆ ಏರಿದೆ. ಕಳೆದೊಂದು ದಿನದಲ್ಲಿ 56 ಜನರು ವ್ಯಾಧಿಯಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಕರೊನಾ ಸೋಂಕಿತರ ಒಟ್ಟು ಸಂಖ್ಯೆ 4,30,49,974 ಹಾಗೂ ಮೃತರ ಸಂಖ್ಯೆ 5,22,062ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆ ಪ್ರಮಾಣ ಶೇಕಡ 98.76 ಆಗಿದೆ. ದೇಶದಾದ್ಯಂತ ಒಟ್ಟು 187.07 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಂಸದ ಶಶಿಕುಮಾರ್ ದೆಹಲಿಯ ಕರ್ನಾಟಕದ ಭವನದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ.

Fri Apr 22 , 2022
ನಟ, ಮಾಜಿ ಸಂಸದ ಶಶಿಕುಮಾರ್ ದೆಹಲಿಯ ಕರ್ನಾಟಕದ ಭವನದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಸಂಸದರಾಗಿದ್ದಂತಹ ಸಂದರ್ಭದಲ್ಲಿ ಕರ್ನಾಟಕ ಭವನ ಬಳಕೆ ಮಾಡಿದ್ದರು. ಇದಕ್ಕೆ 3.72 ಲಕ್ಷ ರೂ. ಬಾಡಿಗೆ ಪಾವತಿಸಿಲ್ಲ. ಇದನ್ನು ಗಮನಿಸಿದ ಕಂದಾಯ ಇಲಾಖೆ ಇದೀಗ ಬಾಡಿಗೆ ವಸೂಲಿ ಮಾಡುವಂತೆ ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಗಳು ಏ.19ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿರುವ ಶಶಿಕುಮಾರ್ ಅವರು ಇದೀಗ ಮತ್ತೊಂದು ತೊಂದರೆಗೆ ಸಿಲುಕಿದ್ದಾರೆ.‌ 2023ರ […]

Advertisement

Wordpress Social Share Plugin powered by Ultimatelysocial