50 ವರ್ಷ ಪ್ರಾಯದ ರಾಧಾ ವೆಂಬು ಭಾರತದ ಮೂರನೇ ಶ್ರೀಮಂತ ಮಹಿಳೆಯಾಗಿದ್ದಾರೆ.

50 ವರ್ಷ ಪ್ರಾಯದ ರಾಧಾ ವೆಂಬು ಭಾರತದ ಮೂರನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಹಾಗೆಯೇ ಪ್ರಸ್ತುತ ಸ್ವಯಂ ಪ್ರಯತ್ನದಿಂದ ಶ್ರೀಮಂತೆಯಾದ ಭಾರತದ ಮಹಿಳೆ ಎಂಬ ಹೆಗ್ಗಳಿಕೆಯು ಇದೆ. ಇನ್ನು ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೊದಲನೇ ಹಾಗೂ ಎರಡನೇ ಸ್ಥಾನದಲ್ಲಿ ಕಿರಣ್ ಮಜುಂದಾರ್-ಶಾ ಮತ್ತು ಫಾಲ್ಗುಣಿ ನಾಯರ್ ಇದ್ದಾರೆ.

ಫೋರ್ಬ್ಸ್‌ನ ರಿಯಲ್ ಟೈಮ್ ರಿಚ್ ಲೀಸ್ಟ್ ಪ್ರಕಾರ ರಾಧಾ ವೆಂಬು ಆದಾರವು 2.6 ಕೋಟಿ ಡಾಲರ್ ರೂಪಾಯಿ ಅಥವಾ 21,455 ಕೋಟಿ ರೂಪಾಯಿ ಆಗಿದೆ. ಹಾಗೆಯೇ ರಾಧಾ ವೆಂಬು ವಿಶ್ವದಲ್ಲಿ 1176ನೇ ಅತೀ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ತನ್ನ ಸ್ವಂತ ಪ್ರಯತ್ನದಿಂದ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಖ್ಯಾತಿಯನ್ನು ಹೊಂದಿದ್ದಾರೆ.

ಭಾರತದ ಮಲ್ಟಿ ಬಿಲಿಯನ್ ಮಲ್ಟಿ ನ್ಯಾಷನಲ್ ಸಂಸ್ಥೆಯಾದ ಜುಹು ಕಾರ್ಪ್‌ನಿಂದ ರಾಧಾ ವೆಂಬು ಆದಾಯ ಪಡೆಯುತ್ತಿದ್ದಾರೆ. ಹಾಗೆಯೇ ರಾಧಾ ವೆಂಬು ಖಾಸಗಿ ಸಾಫ್ಟ್‌ವೇರ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ತನ್ನ ಸಹೋದರರೊಂದಿಗೆ ಸೇರಿ ಈ ಸಂಸಸ್ಥೆಯನ್ನು ವೆಂಬು ಆರಂಭಿಸಿದ್ದಾರೆ. ಈ ಸಂಸ್ಥೆಯಲ್ಲಿ ಅಧಿಕ ಪಾಲುದಾರಿಕೆ ರಾಧಾ ವೆಂಬು ಅವರದ್ದಾಗಿದೆ.

ರಾಧಾ ವೆಂಬು ಜೀವನ

ರಾಧಾ ವೆಂಬು 1972ರಲ್ಲಿ ಜನಿಸಿದ್ದಾರೆ. ವೆಂಬು ತಂದೆ ಮದ್ರಾಸ್ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ರಾಧಾ ವೆಂಬು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) ಅಧ್ಯಯನ ಮಾಡಿದ್ದು ಇಂಡಸ್ಟ್ರೀಯಲ್ ಮ್ಯಾನೆಜ್‌ಮೆಂಟ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ. ತಾನು ಅಧ್ಯಯನವನ್ನು ಮಾಡುತ್ತಿರುವ ಸಂದರ್ಭದಲ್ಲಿ 1996ರಲ್ಲಿ ತನ್ನ ಸಹೋದರ ಶ್ರೀಧರ್ ವೆಂಬು ಮತ್ತು ಶೇಖರ್ ವೆಂಬು ಜೊತೆ ಸೇರಿ ಉದ್ಯಮವೊಂದನ್ನು ರಾಧಾ ವೆಂಬು ಆರಂಭಿಸಿದ್ದಾರೆ. ಈ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಶೇಖರ್ ವೆಂಬು ಪಾತ್ರ ಕೂಡಾ ಅತೀ ಪ್ರಮುಖವಾಗಿದೆ.

ಸಂಸ್ಥೆಯ ಬಗ್ಗೆ ಮಾಹಿತಿ

200 ಜನರ ಜುಹು ಮೇಲ್ಸ್ ಪ್ರೊಡೆಕ್ಟ್ ಮ್ಯಾನೆಜರ್‌ಗಳ ತಂಡದ ಮುಖ್ಯಸ್ಥೆ ರಾಧಾ ವೆಂಬು ಆಗಿದ್ದಾರೆ. ರಾಧಾ ವೆಂಬು ಚೆನ್ನೈನಲ್ಲಿದ್ದು, ಜುಹು ಕಚೇರಿ ಕೂಡಾ ಅಲ್ಲೇ ಇದೆ. ಟೆಕ್ಸಾನ್‌ನ ಆಸ್ಟೀನ್‌ನಲ್ಲಿ ಜುಹು ಸಂಸ್ಥೆಯ 375 ಎಕರೆಯ ಮುಖ್ಯ ಕಚೇರಿ ಇದೆ. ಒಟ್ಟು 6 ಕೋಟಿಗೂ ಅಧಿಕ ಬಳಕೆದಾರರನ್ನು ಸಂಸ್ಥೆ ಹೊಂದಿದೆ. ಜಾಗತಿಕವಾಗಿ 9 ರಾಷ್ಟ್ರಗಳಲ್ಲಿ ಇದರ ಬಳಕೆ ಮಾಡಲಾಗುತ್ತಿದೆ.

ಜುನು ಈ ಸಂಸ್ಥೆಯ ಕ್ಲೌಡ್‌ ಬೇಸ್‌ ಸಾಫ್ಟ್‌ವೇರ್ ಆಗಿದೆ. ಹಾಗೆಯೇ ವಾಟ್ಸಾಪ್‌ನಂತೆ ಅರಥೈ (ತಮಿಳು ಪದ) ಬೆಟಾ ಟೆಸ್ಟಿಂಗ್ ಆಗಿದೆ. ರಾಧಾ ವೆಂಬು ಕೃಷಿ ಎನ್‌ಜಿಒ ಜಾನಕಿ ಹೈ-ಟೆಕ್ ಅಗ್ರೋ ಪ್ರೈವೇಟ್ ಲಿಮಿಟೆಡ್‌ನ ಡೈರೆಕ್ಟರ್ ಕೂಡಾ ಆಗಿದ್ದಾರೆ. ಹಾಗೆಯೇ ರಿಯಲ್ ಎಸ್ಟೇಟ್ ಸಂಸ್ಥೆಯಾದ ಹೈಲ್ಯಾಂಡ್ ವ್ಯಾಲಿ ಕಾಪೋರೇಷನ್ ಪ್ರೈವೇಟ್ ಲಿಮಿಟೆಡ್‌ನ ಡೈರೆಕ್ಟರ್ ಕೂಡಾ ಹೌದು. ರಾಧಾ ವೆಂಬು ವಿವಾಹಿತೆಯಾಗಿದ್ದು ಒಂದು ಮಗುಯಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.

Mon Feb 13 , 2023
ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ದೇಶದ ತೈಲ ಕಂಪನಿಗಳು ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುತ್ತವೆ. ಆದರೆ, ಮೇ 22 ರಿಂದ ದೇಶದಲ್ಲಿ ಪೆಟ್ರೋಲ್  ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ರೀತಿ ಇಂದೂ (ಫೆಬ್ರವರಿ 13) ಸಹ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಆದಾಗ್ಯೂ, ಆಯಾ ರಾಜ್ಯಗಳು […]

Advertisement

Wordpress Social Share Plugin powered by Ultimatelysocial