ರಮೇಶ ಜಾರಕಿಹೋಳಿಯನ್ನು ಹೊಗಳಿದ ಡಿಸಿಎಂ ಅಶ್ವತ್ಥ್ ನಾರಾಯಣ್

ಗೋಕಾಕ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡುವ ಮೂಲಕ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಡಿ ಹೊಗಳಿದ್ದಾರೆ.ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ನೂತನ ಸಂಕೀರ್ಣವನ್ನು ಉದ್ಘಾಟನೆ ಹಾಗೂ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗೋಕಾಕ ಪದವಿ ಕಾಲೇಜಿಗೆ ಇವರೆಗೂ ಶಾಶ್ವತ ನೆಲೆ ಇಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು 50 ರಿಂದ 60 ಕಾಲೇಜುಗಳಿಗೆ ಈವರೆಗೂ ಸ್ವಂತ ಕಟ್ಟಡವಿಲ್ಲ. ಮೊದಲು ಸ್ವಂತ ಜಮೀನನ್ನು ಗುರುತು ಮಾಡುವ ಮುಖಾಂತರ ಕೂಡಲೇ ಸರಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೆ ಸ್ವಇಚ್ಛೆಯಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಆಫ್ಲೈನ್ ಕ್ಲಾಸ್ ಶುರು ಮಾಡಿದ್ದೇವೆ. ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೋಷಕರ ಒತ್ತಾಯ ಇತ್ತು ಹೀಗಾಗಿ ಆನ್ಲೈನ್, ಆಫ್ಲೈನ್ ಕ್ಲಾಸ್ ಎರಡೂ ಆರಂಭಿಸಿದ್ದೇವೆ ಎಂದರು.ಅಧಿವೇಶನಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಕೊರೋನ ಎಲ್ಲಾ ಕಡೆಗಳಲ್ಲಿ ಅತಿ ಹೆಚ್ಚಾಗಿರುವ ಕಾರಣ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.ಡಿ.5ಕ್ಕೆ ಕರ್ನಾಟಕ ಬಂದ್ ಅವರ ಅವರ ಭಾವನೆಗೆ ಬಿಟ್ಟ ವಿಚಾರ ಈ ಕುರಿತು ನಾನು ಏನು ಹೇಳುವುದಿಲ್ಲ ಎಂದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಆಯ್ಕೆ ವಿಚಾರ ಹೈಕಮಾಂಡ್ಗೆ ಸಂಬಂಧಿಸಿದ್ದು ಎಂದು ಹೇಳಿದರು. ಈ ಸಂದರ್ಬದಲ್ಲಿ ಕೆಎಮ್ ಎಪ್ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿಯವರು ಸಾಥ ನೀಡಿದರು.

ಇದನ್ನು ಓದಿ :ನಗರ ಪೊಲೀಸ್ ಕಟ್ಟಡ ಉದ್ಘಾಟನೆ: ಸಿಎಂ ಬಿಎಸ್ ವೈ ಯಿಂದ ಉದ್ಘಾಟನೆ
Please follow and like us:

Leave a Reply

Your email address will not be published. Required fields are marked *

Next Post

ಕಡಬ ತಾಲೂಕು ಕಚೇರಿ ಎದುರು ಪ್ರತಿಭಟನೆ

Wed Nov 25 , 2020
ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಕಡಬ ತಾಲೂಕನ ಕಚೇರಿ ಎದುರುಗಡೆ ಪ್ರತಿಭಟನೆ. ಮಲೆನಾಡು ಹಿತರಕ್ಷಣಾ ವೇದಿಕೆಯ ವತಿಯಿಂದ ಕಡಬದಲ್ಲಿ ಬೃಹತ್ ಕಾಲ್ನಡಿಗೆ ಜಾಥ ಪ್ರತಿಭಟನಾ ಸಭೆ ನಡೆದಿದ್ದು. ಕಡಬ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ 46 ಗ್ರಾಮಗಳು ಘಟ್ಟ ಪ್ರದೇಶಗಳು ಎಂದು ಗುರುತಿಸಲ್ಪಟ್ಟಿದೆ. 15ಗ್ರಾಮ ಕಸ್ತೂರಿ ರಂಗನ್ ವರದಿ ತೂಗು ಕತ್ತಿ ಯಲ್ಲಿದ್ದು.ರೈತಾಪಿ ಹಾಗೂ ಕಾರ್ಮಿಕ ಕುಟುಂಬಗಳು ಭಯದ ನೆರಳಿನಲ್ಲಿ ಬದುಕುತ್ತಿವೆ ಎಂದು ಪ್ರತಿಭಟನಾಸಭೆಯಲ್ಲಿ ಗ್ರಾಮದ ಗಣ್ಯ ವ್ಯಕ್ತಿಗಳು […]

Advertisement

Wordpress Social Share Plugin powered by Ultimatelysocial