ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.

ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ದೇಶದ ತೈಲ ಕಂಪನಿಗಳು ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುತ್ತವೆ.

ಆದರೆ, ಮೇ 22 ರಿಂದ ದೇಶದಲ್ಲಿ ಪೆಟ್ರೋಲ್  ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ರೀತಿ ಇಂದೂ (ಫೆಬ್ರವರಿ 13) ಸಹ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಆದಾಗ್ಯೂ, ಆಯಾ ರಾಜ್ಯಗಳು ವಿಧಿಸುವ ಸೆಸ್, ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ಇಂಧನ ದರದಲ್ಲಿ ಪ್ರತಿ ದಿನ ಬದಲಾವಣೆಯಾಗುತ್ತವೆ. ಹಿಂದಿನ ದಿನಕ್ಕೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ದರ ಇಂದು ಸ್ಥಿರವಾಗಿದೆ. ಕಳೆದ ವಾರವಷ್ಟೇ ನೆರೆ ರಾಜ್ಯ ಕೇರಳ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 2 ರೂ. ಹೆಚ್ಚಿಸಿತ್ತು ಪರಿಣಾಮವಾಗಿ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಕರ್ನಾಟಕದ ಪೆಟ್ರೋಲ್​ ಬಂಕ್​ಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂದಿದೆ.

ಕೇರಳ ಮತ್ತು ಕರ್ನಾಟಕದಲ್ಲಿ ಪೆಟ್ರೋಲ್ ದರದಲ್ಲಿ ಸುಮಾರು 6 ರೂ. ವ್ಯತ್ಯಾಸವಿದೆ. ಹೀಗಾಗಿ ಗಡಿ ಭಾಗಗಳ ಕೇರಳೀಯರು ಕರ್ನಾಟಕದ ಬಂಕ್​ಗಳಿಗೆ ಬಂದು ಪೆಟ್ರೋಲ್ ಪಡೆಯುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 101.94 ರೂ. ಇದ್ದರೆ, ಡೀಸೆಲ್ ದರ 87.89 ರೂ. ಇದೆ. ಚೆನ್ನೈಯಲ್ಲಿ ಪೆಟ್ರೋಲ್ ದರ 102.63 ರೂ, ಡೀಸೆಲ್ ಬೆಲೆ 94.24 ರೂ, ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ 106.03 ರೂ, ಡೀಸೆಲ್ ದರ 92.76 ರೂ, ಮುಂಬೈಯಲ್ಲಿ ಪೆಟ್ರೋಲ್ ದರ 106.03 ರೂ, ಡೀಸೆಲ್ ದರ 94.27 ರೂ, ದೆಹಲಿಯಲ್ಲಿ ಪೆಟ್ರೋಲ್​​ ಬೆಲೆ 96.72 ರೂ, ಡೀಸೆಲ್ ದರ 89.62 ರೂ. ಇದೆ.

ಕೇರಳದ ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 107.71 ರೂ, ಡೀಸೆಲ್ ದರ 96.52 ರೂ. ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ಇಂದು ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ,

Mon Feb 13 , 2023
ನವದೆಹಲಿ: ಚಿನ್ನವನ್ನು ಖರೀದಿಸುವಾಗ, ನಾವು ಸಾಮಾನ್ಯವಾಗಿ ಬೆಲೆಗಳನ್ನು ಮಾತ್ರ ನೋಡುತ್ತೇವೆ. ನಾವು ಹಳದಿ ಲೋಹದ ಶುದ್ಧತೆಯನ್ನು ನಿರ್ಲಕ್ಷಿಸುತ್ತೇವೆ. ಶುದ್ಧತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಚಿನ್ನದ ಬೆಲೆಗಳಲ್ಲಿನ ವ್ಯತ್ಯಾಸದ ಹಿಂದಿನ ಕಾರಣಗಳಲ್ಲಿ ಒಂದಾಗಿರಬಹುದು. ಶುದ್ಧತೆ ಚಿನ್ನವನ್ನು ಖರೀದಿಸುವಾಗ ಪ್ರಮುಖ ನಿಯತಾಂಕವೆಂದರೆ ಲೋಹದ ಶುದ್ಧತೆಯನ್ನು ಪರಿಶೀಲಿಸುವುದು. ಚಿನ್ನದ ಶುದ್ಧತೆಯನ್ನು ಕ್ಯಾರೆಟ್ (ಕೆ) ನಲ್ಲಿ ಅಳೆಯಲಾಗುತ್ತದೆ. 24K ಚಿನ್ನದ ಶುದ್ಧ ರೂಪವಾಗಿದೆ. ನೀವು ಚಿನ್ನದ ಆಭರಣಗಳನ್ನು ಖರೀದಿಸಿದಾಗ, ಶುದ್ಧತೆ ಸಾಮಾನ್ಯವಾಗಿ 18-22K; ಅದಕ್ಕೆ […]

Advertisement

Wordpress Social Share Plugin powered by Ultimatelysocial