ಪ್ರಶಾಂತ್ ನೀಲ್ ರನ್ನು ಟೀಸ್ ಮಾಡಿದ ರವೀನಾ!

 

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೋಟಿ ಕೋಟಿ ಬಾಚಿಕೊಂಡಿರುವ ಕೆಜಿಎಫ್-2 ಕಲೆಕ್ಷನ್ ಅಬ್ಬರ ಇನ್ನೂ ಮುಂದುವರೆದಿದೆ.

ಭಾರತದ ಘಟಾನುಘಟಿ ಸ್ಟಾರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಕೆಜಿಎಫ್-2 ಸದ್ಯ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 2ನೇ ಸ್ಥಾನದಲ್ಲಿದೆ.

ಆಮೀರ್ ಖಾನ್ ನಟನೆಯ ದಂಗಲ್, ಆರ್ ಆರ್ ಆರ್ ಕಲೆಕ್ಷನ್ ಹಿಂದಿಕ್ಕಿ 2ನೇ ಸಿನಿಮಾದಲ್ಲಿದೆ. ಈ ಸಕ್ಸಸ್ ಇಡೀ ತಂಡಕ್ಕೆ ಸಂತಸ ತಂದಿದೆ. ಇಡೀ ಕೆಜಿಎಫ್ ತಂಡ ಸಂಭ್ರಮದಲ್ಲಿ ತೇಲುತ್ತಿದೆ. ಈ ನಡುವೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್ ಕ್ಯೂಟ್ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಮಿಕಾ ಸೇನ್ ಆಗಿ ಮಿಂಚಿರುವ ರವೀನಾ ಟಂಡನ್ ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.ರವೀನಾ ಟಂಡನ್ ಶೇರ್ ಮಾಡಿರುವ ವಿಡಿಯೋದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಸೂಚನೆಗಳನ್ನು ನೀಡುತ್ತಿದ್ದಾರೆ. ಆಗ ರವೀನಾ ಟಂಡನ್ ಪ್ರಶಾಂತ್ ನೀಲ್ ಅವರನ್ನು ಟೀಸ್ ಮಾಡಿದ್ದಾರೆ. ಇದನ್ನು ನೋಡಿ ಪ್ರಶಾಂತ್ ನಗುತ್ತಾ ನಿಂತಿರುವ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿ ರವೀನಾ, ನಾವೆಲ್ಲರೂ ತನ್ನ ಸ್ವೀಟ್ ಪ್ರಶಾಂತ್ ನೀಲ್ ಅವರಿಗೆ ಟೀಸ್ ಮಾಡುತ್ತಿ ರುವುದು. ಈ ಸುಂದರ ವಿಡಿಯೋಗೆ ಧನ್ಯವಾದಗಳು ಭುವನ್ ಗೌಡ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ಹಿಂದೂ ಭಯೋತ್ಪಾದಕ: ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ!

Wed May 11 , 2022
  ವಿವಾದಗಳ ಮೂಲಕವೇ ಪ್ರಚಾರ ಗಿಟ್ಟಿಸಿಕೊಂಡ ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಇದೀಗ ಮತ್ತೊಂದು ವಿವಾದಕ್ಕೆ ಮುನ್ನುಡಿ ಹಾಡುವಂಥಹಾ ಹೇಳಿಕೆಯೊಂದನ್ನು ನೀಡಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪ್ರಶಾಂತ್ ಸಂಬರ್ಗಿ ತಮ್ಮನ್ನು ತಾವು ಭಯೋತ್ಪಾದಕ ಎಂದು ಹೇಳಿಕೊಂಡಿದ್ದಾರೆ. ಅಲ್ಪ ಬದಲಾವಣೆ ಎಂದರೆ ಅವರು ಹಿಂದು ಭಯೋತ್ಪಾದಕ ಅಂತೆ! ಅಝಾನ್ ವಿರುದ್ಧ ಹೋರಾಟ ಮಾಡುವವರು ಹಿಂದೂ ಭಯೋತ್ಪಾಧಕರು ಅಂತಾ ಹೇಳಿರುವ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ […]

Advertisement

Wordpress Social Share Plugin powered by Ultimatelysocial