ಬೆಂಕಿ ಆರಿಸಲು 8 ಗಂಟೆಗಳ ನಿರಂತರ ಕಾರ್ಯಾಚರಣೆ

 

ಚಿಕ್ಕಮಗಳೂರು, ಫೆಬ್ರವರಿ 11: ಮೀಸಲು ಅರಣ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೀಸಲು ಅರಣ್ಯ ಚುರ್ಚೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ಪಕ್ಕದಲ್ಲೇ ಇರುವ ರಿಸರ್ವ್ ಫಾರೆಸ್ಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅರಣ್ಯ ಸುಟ್ಟು ಕರಕಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆ ಜಾಗಕ್ಕೆ ಅಗ್ನಿಶಾಮಕ ವಾಹನ ಕೂಡ ಹೋಗಲು ಸಾಧ್ಯವಾಗದ ಹಿನ್ನೆಲೆ ಅಧಿಕಾರಿಗಳೇ ಸೊಪ್ಪನ್ನ ಕೈಯಲ್ಲಿಡಿದು ಬಡಿಯುವ ಮೂಲಕ ಬೆಂಕಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದ್ದಾರೆ.

ಈಗಾಗಲೇ ಬಿಸಿಲಿನ ಝಳಕ್ಕೆ ಮರಗಿಡಗಳ ಎಲೆಗಳು ಸಂಪೂರ್ಣವಾಗಿ ಉದುರಿಹೋಗಿವೆ. ಸ್ವಲ್ಪ ಬೆಂಕಿ ಹೊತ್ತಿಕೊಂಡರೂ ಆರಿಸುವು ತೀರಾ ಕಷ್ಟ. ಇಲ್ಲಿನ ಪರಿಸ್ಥಿತಿ ಕೂಡ ಅದೇ ರೀತಿ ಆಗಿತ್ತು. ಬಾದೆ ಹುಲ್ಲು ಹೆಚ್ಚಾಗಿ ಇರುವ ಈ ಪ್ರದೇಶದಲ್ಲಿ ಬೆಂಕಿ ತಗುಲುತ್ತಿದ್ದಂತೆ ಒಣಗಿದ ಹುಲ್ಲು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಅಧಿಕಾರಿಗಳು ಏನೇ ಹರಿಸಾಹಸಪಟ್ಟರೂ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೇ ಹೋಗಿತ್ತು.

ಚಿಕ್ಕಮಗಳೂರು ಹಾಗೂ ಕಡೂರು ಅರಣ್ಯ ವಿಭಾಗದ ಸಿಬ್ಬಂದಿ ಜೊತೆ ಎ.ಸಿ.ಎಫ್. ಆರ್.ಎಫ್.ಓ. ಡಿ.ಎಫ್.ಓ. ಕೂಡ ಬೆಂಕಿ ನಂದಿಸು ಕಾರ್ಯಾರಣೆಯಲ್ಲಿ ಭಾಗಿಯಾಗಿದ್ದರು. ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಎಂಟು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ 3.30ರವರೆಗೂ ಬೆಂಕಿ ಆರಿಸಿದ್ದಾರೆ.

ಇನ್ನು ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಅರಣ್ಯ ಪ್ರದೇಶದಲ್ಲೂ ಬೆಂಕಿ ತಗುಲಿದ್ದು ಅಧಿಕಾರಿಗಳು ಇಡೀ ದಿನ ಬೆಂಕಿ ಆರಿಸಿದ್ದಾರೆ. ಕಳಸಾಪುರದಲ್ಲೂ ಕೂಡ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಅರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಕೆಲ ಪ್ರಾಣಿ-ಪಕ್ಷಿಗಳು ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪರ್ಯಾಯ ಹೆಸರು ನೀಡುವುದರ ಬಗ್ಗೆ ಮಹಾನಗರ ಪಾಲಿಕೆಯಿಂದ ಸಲಹೆ ಕೇಳಿದೆ !

Sat Feb 11 , 2023
ಹುಬ್ಬಳ್ಳಿ – ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ (ಹೆಚ್.ಡಿ.ಎಂ.ಸಿ.ಯು) ಈದ್ಗಾ ಮೈದಾನ ಮತ್ತು ಮಂತೂರ ರಸ್ತೆ ಎಂದು ಪ್ರಸಿದ್ಧ ಆಗಿರುವ ಮೈದಾನದ ಹೆಸರು ಕೊಡುವ ಪ್ರಸ್ತಾಪಕ್ಕಾಗಿ ಸೂಚನೆ ಮತ್ತು ದೂರು ಕೇಳಿದೆ. ಆಗಸ್ಟ್ ೨೦೨೨ ರಲ್ಲಿ ಎಚ್.ಡಿ.ಎಂ.ಸಿ. ಯ ಸಾಮಾನ್ಯ ಸಭೆಯಲ್ಲಿ ವಿಭಾಗ ಕ್ರಮಾಂಕ ೫೭ ರಲ್ಲಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ‘ಕಿತ್ತೂರ ರಾಣಿ ಚೆನ್ನಮ್ಮ ಮೈದಾನ’ ಈ ಹೆಸರು ನೀಡವ ಪ್ರಸ್ತಾವ ಸಮ್ಮತಿಸಿದ್ದರು. ಈ ಕುರಿತು ದೂರು […]

Advertisement

Wordpress Social Share Plugin powered by Ultimatelysocial