ಜಮೀನಿನಲ್ಲಿ ಮಾರಾಟಕ್ಕೆಂದು ಸಂಗ್ರಹಿಸಲಾಗಿದ್ದ 7.977 ಗ್ರಾಂ. ಗಾಂಜಾವನ್ನು ವಿಜಯಪುರ ಗ್ರಾಮೀಣ ಪೊಲೀಸರು ಜಪ್ತಿ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡಲು ಯತ್ನಿಸಿದ ಮೂವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಡೋಮನಾಳ ದೊಡ್ಡಿ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗಾಂಜಾದ ಬಗ್ಗೆ ಮಾಹಿತಿ ಪಡೆದ ವಿಜಯಪುರ ಪೊಲೀಸರು ದಾಳಿ ನಡೆಸಿ ಬಂಧಿತರಿಂದ 7.977 ಗ್ರಾಂ. ಗಾಂಜಾ, ಹೋಂಡಾ ಶೈನ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧಿತರನ್ನು ಜರಕ ಡೋಮನಾಳ, ಆಕಾಶ ಅನಿಲ್ ಬೊರಾಕರ್ ಯಲ್ಲಪ್ಪ ಕರಿಯಪ್ಪ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ :ಹಸುಗೂಸನ್ನು ಬೀದಿಗೆಸೆದ ಪಾಪಿ ಪೋಷಕರು