ಪ್ರತಿ ದಿನ ಸ್ಕಿಪಿಂಗ್ ಮಾಡಿ ತೂಕ ಇಳಿಸಿಕೊಳ್ಳಿ

ಪ್ರತಿ ದಿನ ಸ್ಕಿಪಿಂಗ್ ಮಾಡಿ ತೂಕ ಇಳಿಸಿಕೊಳ್ಳಿ

ಹೆಚ್ಚುತ್ತಿರುವ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಜಿಮ್, ಡಯೆಟ್ ಎಂದೆಲ್ಲಾ ಮೊರೆ ಹೋಗುತ್ತಾರೆ. ಆದರೆ ಎಲ್ಲರಿಗೂ ಜಿಮ್ ಗೆ ಹೋಗಿ ಮೈ ದಂಡಿಸುವುದಕ್ಕೆ ಆಗುವುದಿಲ್ಲ. ಅಂತವರು ಮನೆಯಲ್ಲಿಯೇ ಸುಲಭವಾಗಿ ತಮ್ಮ ದೇಹ ತೂಕ ಇಳಿಸಿಕೊಳ್ಳಬಹುದು. ಸ್ಕಿಪಿಂಗ್ ಮಾಡುವುದರ ಮೂಲಕ ತೂಕ ಇಳಿಕೆಯಾಗುತ್ತದೆ ಜತೆಗೆ ಕಾಲುಗಳ ಸ್ನಾಯುಗಳಿಗೂ ಸರಿಯಾದ ರೀತಿಯಲ್ಲಿ ಬಲ ಸಿಗುತ್ತದೆ.

ಸ್ಕಿಪಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.

ಸ್ಕಿಪಿಂಗ್ ಇದು ಒಳ್ಳೆಯ ಕಾರ್ಡಿಯೋ ವ್ಯಾಯಾಮ. ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಉಸಿರಾಟದ ತೊಂದರೆಯನ್ನು ಕೂಡ ಕಡಿಮೆ ಮಾಡುತ್ತದೆ.

ದಿನಾ ಸ್ಕಿಪಿಂಗ್ ಮಾಡುವುದರಿಂದ ನಿಮ್ಮ ಕಾಲುಗಳ ಸ್ನಾಯುಗಳಲ್ಲಿ ಬಲ ಹೆಚ್ಚಾಗುತ್ತದೆ. ಹಾಗೇ ರಕ್ತ ಸಂಚಾರ ಸುಗುಮವಾಗುತ್ತದೆ.

ಇನ್ನು ತೂಕ ಇಳಿಕೆ ಮಾಡುವವರಿಗೂ ಇದು ಒಳ್ಳೆಯ ವ್ಯಾಯಾಮವಾಗಿದೆ. ದಿನಾ ಅರ್ಧ ಗಂಟೆ ಸ್ಕಿಪಿಂಗ್ ಮಾಡಿದರೆ 300 ಕ್ಯಾಲೋರಿಯನ್ನು ನೀವು ಬರ್ನ್ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬರೀ 49ರೂ.ಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ!..

Tue Dec 21 , 2021
ಜನಪ್ರಿಯ ಓಟಿಟಿ ಪ್ಲಾಟ್‌ಫ್ಲಾರ್ಮ್‌ಗಳ ಪೈಕಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಸಹ ಒಂದಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಚಂದಾದಾರಿಕೆಯ ಯೋಜನೆಗಳ ಆಯ್ಕೆ ಹೊಂದಿದೆ. ಡಿಸ್ನಿ+ ಹಾಟ್‌ಸ್ಟಾರ್ ಈಗ ನೂತನವಾಗಿ ಆಯ್ದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಮಾಸಿಕ ಮೊಬೈಲ್ ಯೋಜನೆಯನ್ನು ಪರೀಕ್ಷಿಸುತ್ತಿದೆ. ಆಯ್ದ ಪಾವತಿ ವಿಧಾನಗಳಲ್ಲಿ ತಿಂಗಳಿಗೆ 49 ರೂ.ಗಳಿಗೆ ಮೊಬೈಲ್ ಪ್ಲಾನ್ ಬಳಕೆದಾರರಿಗೆ ಲಭ್ಯವಿದೆ. ಡಿಸ್ನಿ+ ಹಾಟ್‌ಸ್ಟಾರ್ ತಿಳಿಸಿರುವ ಹೊಸ ಯೋಜನೆಯು ಜಾಹೀರಾತು ಬೆಂಬಲಿತವಾಗಿದೆ. ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial