ಶಿವಣ್ಣನ ‘ಭಜರಂಗಿ-2 ರಾಜ್ಯಾದ್ಯಂತ ಬಿಡುಗಡೆ ಮುಂಜಾನೆ 5 ಗಂಟೆಯಿಂದ ಫ್ಯಾನ್ ಶೋ ಆರಂಭ….!!

ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು 1 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದೆ. ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೊಡ್ಮನೆ ಅಭಿಮಾನಿಗಳ ಅದ್ದೂರಿಯಿಂದ ಭಜರಂಗಿ-2 ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಗೌಡನಪಾಳ್ಯದ ಶ್ರೀನಿವಾಸ ಹಾಗೂ ಜೆಪಿ ನಗರದ ಸಿದ್ದೇಶ್ವರ ಚಿತ್ರ ಮಂದಿರದಲ್ಲಿ ಶೋ ಆರಂಭವಾಗಿದ್ದು, ಶಿವರಾಜ್ ಕುಮಾರ್, ಭಜರಂಗಿ ಲೋಕಿ, ವಸಿಷ್ಠ ಸಿಂಹ ಸೇರಿದಂತೆ ಅನೇಕರು ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಿದರು. ಕೆಲ ಥಿಯೇಟರ್ ಗಳ ಮುಂದೆ ಭಾರೀ ಕಟೌಟ್ ಹಾಕಲಾಗಿದ್ದು, ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದರು.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುನೀತ್‌ ರಾಜ್‌ಕುಮಾರ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು..!!

Fri Oct 29 , 2021
ಎರಡನೇ‌ ಲಾಕ್ ಡೌನ್ ಬಳಿಕೆ ಎಲ್ಲಾ ಸಿನಿಮಾಗಳು ಒಳ್ಳೆ ಒಪನಿಂಗ್ ಪಡೆದಿವೆ. ಭಜರಂಗಿ2  ನಾಡಿದ್ದು 29ಕ್ಕೆ ಬಿಡುಗಡೆ‌ ಆಗುತ್ತಿದೆ. ನಾನು ಸಿನಿಮಾದ ಕ್ಲಿಪ್ಪಿಂಗ್ ಗಳನ್ನ  ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಸಿನಿಮಾದ ಕಥೆ, ಕ್ವಾಲಿಟಿ ಅದ್ಭುತವಾಗಿದೆ. ನನಗೆ ಶಿವಣ್ಣನ ಎಲ್ಲಾ ಲುಕ್ ಗಳು ಇಷ್ಟವಾಗುತ್ತೆ. ಮರೆಯಲಾಗದ ಗೆಟಪ್ ಅಂದ್ರೆ ಮನ ಮೆಚ್ಚಿದ ಹುಡುಗಿ, ಜನುಮದ ಜೋಡಿ, ಕುರುಬನ ರಾಣಿ ಪಾತ್ರಗಳು ತುಂಬಾ ಇಷ್ಟ ಎಂದು ನೆನಪಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌‌ನ […]

Advertisement

Wordpress Social Share Plugin powered by Ultimatelysocial