ಕಳೆದ ಒಂದೂವರೆ ವರ್ಷದಲ್ಲಿ ಕನ್ನಡ ಚಿತ್ರರಂಗ ಎರಡು ಅತಿ ದೊಡ್ಡ ಆಘಾತಗಳನ್ನು ಕಂಡಿದ್ದಾರೆ. ಒಂದು ಕಳೆದ ವರ್ಷ ಜನವರಿಯಲ್ಲಿ ಕೇವಲ 39 ವರ್ಷಕ್ಕೆ ಉಸಿರು ಚೆಲ್ಲಿದ ಚಿರಂಜೀವಿ ಸರ್ಜಾ ಸಾವು…ಮತ್ತೊಂದು ಅಕ್ಟೋಬರ್ನಲ್ಲಿ ಧಿಡೀರನೆ ಮರೆಯಾದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಂತ್ಯ. ಈ ಎರಡೂ ಬಹುಶಃ ಬಹು ದೀರ್ಘಕಾಲದವರಗೆ ಜನರನ್ನು ಕಾಡುವ ನೋವುಗಳು. ಅಭಿಮಾನಿಗಳಿಗೆ, ಈ ನಟರ ಪರಿಚಯವೇ ಇಲ್ಲದವರನ್ನೇ ಅವರ ಸಾವು ಇಷ್ಟರಮಟ್ಟಿಗೆ ತಟ್ಟಿರುವಾಗ ಅವರ ಕುಟುಂಬಸ್ಥರ ಪಾಡು ಹೇಗಿರಬೇಡ. ಅಪ್ಪು ವಯಸ್ಸು ಕೇವಲ 46.. ಇದು ಸಾಯುವ ವಯಸ್ಸಾ? ಎನ್ನುವ ಪ್ರಶ್ನೆ ಇನ್ನೂ ಹರಿದಾಡುತ್ತಲೇ ಇದೆ. ಸಣ್ಣ ವಯಸ್ಸಿನಲ್ಲೇ ಧಿಡೀರನೆ ಎದ್ದು ಹೋದ ಈ ಇಬ್ಬರೂ ಕಲಾವಿದರು ಬಹು ದೊಡ್ಡ ಪಾಠ ಕಲಿಸಿ ಹೋಗಿದ್ದಾರೆ. ಆ ಬದುಕಿನ ಪಾಠವನ್ನು ನಾವು ಕಲಿಯಬೇಕಿದೆ..ಹೀಗಂದಿದ್ದು ನಟಿ ಮೇಘನಾ ರಾಜ್ .
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada