ರುಚಿ ಗೊತ್ತಿದ್ದರೂ ಅದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ.

ಕನ್ನಡಿಗರಾದ ನಮಗೆ ಬಿಸಿಬೇಳೆ ಬಾತ್   ರುಚಿ ಹೊಸದೇನಲ್ಲ. ಅಮ್ಮ ಬೆಳಗ್ಗಿನ ತಿಂಡಿಗೆ   ತಯಾರಿಸುವ ಈ ಅಡುಗೆಯ ರುಚಿ ಗೊತ್ತಿದ್ದರೂ ಅದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ. ಕೆಲಸ ಹುಡುಕಿ ಮನೆಯಿಂದ ದೂರ ಬಂದು ಸ್ನೇಹಿತರ ಜೊತೆ ಒಂದು ಬಾಡಿಗೆ ಮನೆ ಅಥವಾ ಫ್ಲಾಟ್‌ನಲ್ಲಿ ಇರುವಾಗ ಬಾಯಿ ರುಚಿಕರವಾದ ಆಹಾರ    ಬಯಸುತ್ತದೆ, ಆದರೆ ಮಾಡಲು ಗೊತ್ತಿರುವುದಿಲ್ಲ.
ಈ ಬಿಸಿ ಬೇಳೆ ಬಾತ್ ಅಡುಗೆ ಮಾಡಲು ಕಲಿತರೆ ಸುಲಭವಾಗಿ ತಯಾರಿಸಬಹುದು ಮತ್ತು ಬಾಯಿಗೂ ರುಚಿಯಾಗಿರುತ್ತದೆ. ಬಿಸಿ ಬೇಳೆ ಬಾತ್ ಮಾಡಲು ಕಲಿಯ ಬಯಸುವವರಿಗಾಗಿ ರೆಸಿಪಿ   ನೋಡಿ ಇಲ್ಲಿದೆ.
ಸಾಮಾನ್ಯವಾಗಿ ನಾವು ಯಾವುದೇ ಮದುವೆ ಕಾರ್ಯಕ್ಸಮಗಳಿಗೆ ಹೋದ್ರು ಅಲ್ಲಿ ಬಿಸಿಬೇಳೆ ಬಾತ್​ ಇದ್ದೆ ಇರುತ್ತೆ. ಬಿಸಿಬೇಳೆ ಬಾತ್​ ತಿನ್ನುತ್ತಾ ಎಷ್ಟು ಹೆಣ್ಣು ಮಕ್ಕಳು ಕೊರಗುತ್ತಾರೆ. ಭಟ್ರು ಮಾಡೋ ಬಿಸಿಬೇಳೆ ಬಾತ್​ ರುಚಿ ಮನೆಯಲ್ಲಿ ಯಾಕೆ ಸಿಗಲ್ಲ ಎಂದು ಗೊಣಗುತ್ತಾರೆ. ಅಂಥವರುಗಾಗಿಯೇ ನಾವು ಇಲ್ಲಿ ಬಟ್ರು ಮಾಡುವ ಶೈಲಿಯಲ್ಲಿ ಬಿಸಿಬೇಳೆ ಬಾತ್​ ಮಾಡಿ ತಿನ್ನಿ
ಬೇಕಾಗುವ ಸಾಮಾಗ್ರಿಗಳು:

1 ಕಪ್ ಅಕ್ಕಿ

1/2 ಕಪ್ ತೊಗರಿ ಬೇಳೆ

1 ಈರುಳ್ಳಿ

2 ಟೊಮೆಟೊ

2 ಕಪ್ ಬಟಾಣಿ

1/2 ಕಪ್ ಕ್ಯಾರೆಟ್

1/2 ಕಪ್ ಬೀನ್ಸ್

ಸ್ವಲ್ಪ ಹುಣಸೆ ಹಣ್ಣಿನ ರಸ

ಸ್ವಲ್ಪ ಕರಿಬೇವಿನ ಎಲೆ

ಚಿಟಿಕೆಯಷ್ಟು ಇಂಗು

ಎಣ್ಣೆ

ಉಪ್ಪು

8-10 ಗೋಡಂಬಿ ಪುಡಿ
2 ಚಮಚ ಬಿಸಿ ಬೇಳೆ ಬಾತ್ ಪುಡಿ
ಬಿಸಿಬೇಳೆ ಬಾತ್​ ಮಾಡುವ ವಿಧಾನ:
1. ಸ್ವಲ್ಪ ಹುಣಸೆ ಹಣ್ಣನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ಅದಕ್ಕೆ ಬಿಸಿ ನೀರು ಹಾಕಿ, ಹುಣಸೆಯನ್ನು ಹಿಂಡಿ ರಸವನ್ನು ಮಾಡಿಡಬೇಕು.
2. ಒಂದು ಪಾತ್ರೆಯಲ್ಲಿ ತರಕಾರಿಗಳನ್ನು ಹಾಕಿ, ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.
3.ಈಗ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಬೇರೆ-ಬೇರೆ ಪಾತ್ರೆಯಲ್ಲಿ ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ಬೇಳೆಗೆ ಸ್ವಲ್ಪ ನೀರು ಅಧಿಕ ಹಾಕಿರಬೇಕು. ಅನ್ನ ಸ್ವಲ್ಪ ಅಧಿಕ ಬೆಂದಿರಬೇಕು. ಬೇಳೆಯನ್ನು ಸೌಟ್‌ನಿಂದ ಹಿಸುಕಬೇಕು.
4. ಈಗ ಸ್ವಲ್ಪ ದೊಡ್ಡ ಬಾಣಲೆಯನ್ನು ತೆಗೆದು ಅದನ್ನು ಉರಿಯಲ್ಲಿಟ್ಟು ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿಬೇವಿನ ಎಲೆ, ಚಿಟಿಕೆಯಷ್ಟು, ಗೋಡಂಬಿ ಚೂರುಗಳನ್ನು ಹಾಕಿ 2-3 ನಿಮಿಷ ಹುರಿಯಬೇಕು.
5. ಈಗ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವಾಗ ಟೊಮೆಟೊ ಹಾಕಿ, ಟೊಮೆಟೊ ಮೆತ್ತಾಗುವವರೆಗೆ ಬೇಯಿಸಬೇಕು. ಈಗ ಬೇಯಿಸಿದ ತರಕಾರಿಯನ್ನು ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಈಗ ಬಿಸಿ ಬೇಳೆ ಬಾತ್ ಪುಡಿ, ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು.
6 ಈಗ ಬೇಯಿಸಿದ ಅನ್ನ ಮತ್ತು ಹಿಸುಕಿದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಿಸಿ ಬೇಳೆ ಬಾತ್ ತುಂಬಾ ತೆಳ್ಳಗೆ ಬೇಕೆಂದರೆ ಸ್ವಲ್ಪ ನೀರು ಸೇರಿಸಬಹುದು. ನಂತರ 10 ನಿಮಿಷ ಬೇಯಿಸಿ ನಂತರ ಸ್ವಲ್ಪ ತುಪ್ಪ ಸೇರಿಸಿದರೆ( ಬೇಕಿದ್ದರೆ ಸೆರಿಸಬಹುದು) ರುಚಿಕರವಾದ ಬಿಸಿ ಬೇಳೆ ಬಾತ್ ರೆಡಿ. ಇದನ್ನು ಚಿಪ್ಸ್ ಜೊತೆ ತಿನ್ನಲು ಅಥವಾ ಖಾರ ಬೂಂದಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಹಲವು ತರಕಾಗಿಗಳನ್ನು ಹಾಕಿರೋ ಬಿಸಿಬೇಳೆ ಬಾತ್​ ಕೂಡ ಉತ್ತಮ ಬ್ರೇಕ್​ ಫಾಸ್ಟ್​ ಆಗಿದೆ. ಮಕ್ಕಳಿಗಾಗಿ ಎತ್ತೇಚ್ಚವಾಗಿ ತುಪ್ಪಾ ಹಾಕಿ ಕೊಡಿ ಮಕ್ಕಳಿಗೂ ಇಷ್ಟವಾಗುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ವಾಮನ' ಶೂಟಿಂಗ್ ವೇಳೆ ಧನ್ವೀರ್ ಗೆ ಗಾಯ...ಅಷ್ಟಕ್ಕೂ ಆಗಿದ್ದೇನು?

Sat Apr 23 , 2022
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ವಾಮನ ಸಿನಿಮಾದ ಫೈಟಿಂಗ್ ದೃಶ್ಯಗಳನ್ನು ಬೆಂಗಳೂರಿನ ಯಲಹಂಕದಲ್ಲಿ ಚಿತ್ರೀಕರಿಸಲಾಗ್ತಿತ್ತು. ಈ ವೇಳೆ ರೋಪ್ ನಿಂದ ಕೆಳಗೆ ಬಿದ್ದ ಧನ್ವೀರ್ ಕೈಗೆ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಧನ್ವೀರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.ವಾಮನ ಶೂಟಿಂಗ್ ವೇಳೆ ಆದ ಅನಾಹುತದಿಂದ ಧನ್ವೀರ್ ಗೆ ಪಿಂಗರ್ ಫ್ಯಾಕ್ಚರ್ ಆಗಿದೆ. ಆಗಿದ್ದರೂ ಸಹ ಧನ್ವೀರ್ ಬ್ರೇಕ್ ಪಡೆದುಕೊಂಡು […]

Advertisement

Wordpress Social Share Plugin powered by Ultimatelysocial