ಕನ್ನಿಕೆರಿ ಹುಡ್ಗಿ ಆಲ್ಬಂ ಸಾಂಗ್..!

 

ಇತ್ತಿಚಿನ ದಿನಗಳಲ್ಲಿ ಎಲ್ಲಾ ಬಾಷೆಯಲ್ಲಿ ಹಲವು ಆಲ್ಬಮ್ ಸಾಂಗ್ಸ್ ಬರುವುದು ಕಾಮನ್ ಆಗಿದೆ.ಆದರೆ ಕನ್ನಡದಲ್ಲೂ ಆಲ್ಬಂ ಸಾಂಗ್ ಗೆ ಎನು ಕಮ್ಮಿ ಇಲ್ಲಾ ಗುರು ಎಂಬತೆ ಈ ಜನನದಂಪತಿಗಳು ಇದೀಗ ಹೊಸ ಹಾಡನ್ನ ಎಲ್ಲೆಡೆ ಪರಿಚಯಿಸಿದ್ದಾರೆ.ಇನ್ನು ಸಾಂಡಲ್ ವುಡ್ ನಲ್ಲಿ ಚಂದನ ಶೆಟ್ಟಿ ಅವರ ಹಲವು ಹಿಟ್ rap ಹಾಡುಗಳು ಇವೆ .ಆದರೆ ಅದೇ ರೀತಿಯ ಹಾಡುಗಳಿಗೆ ಜೋಶ ನಿಡಲು ಇದೀಗ ಮತ್ತೊಬ್ಬ ಗಾಯಕಿ ಸಿಕ್ಕಿರುವುದು ಹೆಮ್ಮೆಯ ವಿಚಾರ ಯಾರಪ್ಪ ಆದೂ ಅಂತಾ ಕನ್ನಪ್ಯೋಸ್ ಆಗಬೇಡಿ.ನಾವು ಹೇಳಲು ಹೊರಟಿರುವುದು ನಿರೂಪಕಿ ದಿವ್ಯಾ ಆಲೂರ್ ಅವರ ಹಾಡಿನ ಬಗ್ಗೆ ಕಳೆದ ೧೮ ವರ್ಷಗಳಿಂದ ಹಲವು ಕನ್ನಡ ಕಾರ್ಯಕ್ರಮ ಗಳಿಗೆ ನಿರೂಪಕಿಯಾಗಿ ಕಾಣಿಸಿಕೊಂಡು ಎಲ್ಲರ ಮನೆಯ ಮಾತಾಗಿದ್ದಾರೆ .ಆದರೆ ಇದೆ ಪ್ರಥಮ ಬಾರಿಗೆ ಗಾಯಕಿಯಾಗಿ ಹೊರಹೊಮ್ಮಿದ್ದಾರೆ.ಇನ್ನೂ ತಂದೆ ಆಲೂರ್ ನಾಗಪ್ಪ ಅವರಂತೆ ಇದೀಗ ದಿವ್ಯ ಜಾನಪದ ಶೈಲಿಯ ಹಾಡನ್ನು ಇಟ್ಟುಕೊಂಡು ತಂದೆಗೆ ತಕ್ಕ ಮಗಳ ಎಂಬತ್ತೆ ಕನ್ನಿಕೆರಿ ಹುಡ್ಗಿ ಹಾಡನ್ನ ಸುಂದರವಾಗಿ ಹೊರತಂದಿದ್ದಾರೆ.ಇನ್ನೂ ಹಳೆಯ ಹಾಡಿಗೆ ಹೊಸ ಜಲಕ್ ಕೊಟ್ಟು ನೃತ್ಯ ದ ಜೊತೆಗೆ ಹಾಡಿದ್ದಾರೆ ದಿವ್ಯ ಆಲೂರ್ ಮತ್ತು ಇವರ ಪತಿ ಆದರ್ಶ ಕೂಡ ಈ ಹಾಡಿಗೆ ಧ್ವನಿಯಾಗಿದ್ದಾರೆ.ಕನ್ನಡವನ್ನು ಪ್ರೀತಿಸಿವ ದಿವ್ಯ ಕಳೆದ ಎರಡು ವರ್ಷಗಳಿಂದ ಈ ಹಾಡಿಗೆ ತಯಾರಿ ಮಾಡಿ ಇದೀಗ ಜಾನಪದ ಆಲ್ಬಂ ಹಾಡನ್ನು ರಿಲೀಸ್ ಮಾಡಿದ್ದಾರೆ.ಪ್ರಶಾಂತ್ ಕುಮಾರ್ ನಿರ್ದೇಶನದ ಹಾಡಿಗೆಅರುಣ್ ಆಂಡ್ರ್ಯೂ ಸಂಗೀತ ನಿರ್ದೇಶನ‌ ಮಾಡಿದ್ದಾರೆ
ಮತ್ತಯ ರಾಜಶೇಖರ್ ಛಾಯಾಗ್ರಹಣ ಸಹಾಯದಿಂದ ಪ್ರಥಮ ಬಾರಿಗೆ ದಿವ್ಯ ಆದರ್ಶ ದಂಪತಿಗಳಿಬ್ಬರು ಜನಪದ ಹಾಡಿಗೆ ದ್ವನಿಯಾಗಿ ವಿಭಿನ್ನ ರೀತಿಯಲ್ಲಿ ಅಭಿನಯಿಸಿದ್ದಾರೆ.ಕನ್ನಿಕೆರಿ ಹುಡುಗಿಯೊಬ್ಬಳು ಕನಕರಾಯನ ಜಾತ್ರೆ ಯಲ್ಲಿ ಮಿನಕಿ ಮಿನಕಿ ನೊಡುವಾಗ ಎಂಬ ಹಾಡನ್ನು ಯಾವ ಪಿಲ್ಮ್ ಹಾಡಿಗೂ ಏನು ಕಮ್ಮಿ‌ಇಲ್ಲಾ ಎಂಬತ್ತೆ ಹಾಡನ್ನು ಬಿಡುಗಡೆ ಮಾಡಿರುವುದು ನಮ್ಮ ಜನಪದ ಕಲೆ ಗೆ ಮತ್ತಷ್ಟು ಮೆರುಗು ಮೂಡಿಸಿದೆ.ಇನ್ನೂ ಒಂದೆ ದಿನದಲ್ಲಿ ಈ ಹಾಡಿಗೆ ಸಾಕಷ್ಟು ಲೈಕ್ ಮತ್ತು ಕಮೆಂಟ್ ಸುರಿಮಳೆ ಸುರಿದಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಹಾನಗಲ್'ನಲ್ಲಿ ಸೋಲಿನ ಬಗ್ಗೆ ಸಿಎಂ ಹೇಳಿದ್ದೇನು ಗೊತ್ತಾ.?

Tue Nov 2 , 2021
 ಮಂಡ್ಯ: ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಸಿಂದಗಿಯಲ್ಲಿ ಬಿಜೆಪಿ ಮತ್ತು ಹಾನಗಲ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಚಾರವನ್ನ ವಹಿಸಿಕೊಂಡಿದ್ದ ಮುಖ್ಯಮಂತ್ರಿಗಳು ಸಧ್ಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ಕಾಂಗ್ರೆಸ್​ ಅಭ್ಯರ್ಥಿ ಹಾನಗಲ್‌ ಕ್ಷೇತ್ರದಲ್ಲಿ 2-3 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಜನತೆ ಶ್ರೀನಿವಾಸ ಮಾನೆ […]

Advertisement

Wordpress Social Share Plugin powered by Ultimatelysocial