‘ಹಾನಗಲ್’ನಲ್ಲಿ ಸೋಲಿನ ಬಗ್ಗೆ ಸಿಎಂ ಹೇಳಿದ್ದೇನು ಗೊತ್ತಾ.?

Karnataka Byelection Results : 'ಹಾನಗಲ್'ನಲ್ಲಿ ಸೋಲಿನ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.?

 ಮಂಡ್ಯ: ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಸಿಂದಗಿಯಲ್ಲಿ ಬಿಜೆಪಿ ಮತ್ತು ಹಾನಗಲ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಚಾರವನ್ನ ವಹಿಸಿಕೊಂಡಿದ್ದ ಮುಖ್ಯಮಂತ್ರಿಗಳು ಸಧ್ಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ಕಾಂಗ್ರೆಸ್​ ಅಭ್ಯರ್ಥಿ ಹಾನಗಲ್‌ ಕ್ಷೇತ್ರದಲ್ಲಿ 2-3 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಜನತೆ ಶ್ರೀನಿವಾಸ ಮಾನೆ ಅವ್ರ ಕೈಹಿಡಿದಿದ್ದಾರೆ’ ಎಂದರು.

ಇನ್ನು ಇದೇ ‘ಹಾನಗಲ್​ನಲ್ಲಿ ನಿರೀಕ್ಷಿಸಿದಷ್ಟು ಮತಗಳು ಬಂದಿಲ್ಲ. ಹೀಗಾಗಿಯೇ ನಮಗೆ ಹಿನ್ನಡೆ ಆಗಿದೆ. ಸಿ.ಎಂ.ಉದಾಸಿಗೆ ಸಲ್ಲಬೇಕಿದ್ದ ಮತ ಪಡೆಯಲು ಆಗಿಲ್ಲ. ನಮ್ಮ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದರು. ಉಪ ಚುನಾವಣೆಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ’ ಎಂದರು.

Please follow and like us:

Leave a Reply

Your email address will not be published. Required fields are marked *

Next Post

 ಕಾಬೂಲ್​ನ ಮಿಲಿಟರಿ ಆಸ್ಪತ್ರೆ ದ್ವಂಸ..! ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನತೆ

Tue Nov 2 , 2021
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​​ನಲ್ಲಿರುವ ಸರ್ದಾರ್​ ಮೊಹಮ್ಮದ್​ ದೌದ್​ ಖಾನ್​ ಮಿಲಿಟರಿ ಆಸ್ಪತ್ರೆ ಸಮೀಪ ಗುಂಡಿನ ಸದ್ದು ಕೇಳಿ ಬಂದಿದೆ ಹಾಗೂ ಕನಿಷ್ಟ ಎರಡು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.ಸ್ಫೋಟ ನಡೆದ ಸ್ಥಳದ ಬಳಿ ವಾಸವಿದ್ದ ನಿವಾಸಿಗಳು ದಟ್ಟ ಹೊಗೆಯಿಂದ ಆವೃತವಾದ ಫೋಟೋಗಳನ್ನು ಶೇರ್​ ಮಾಡುತ್ತಿದ್ದಾರೆ.ಈ ಸ್ಫೋಟದ ಸಂಬಂಧ ತಾಲಿಬಾನ್​ ಸರ್ಕಾರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ಸ್ಫೋಟದ ಹೊಣೆಯನ್ನು ಹೊತ್ತಿಲ್ಲ ಎಂದು ತಿಳಿದುಬಂದಿದೆ. […]

Advertisement

Wordpress Social Share Plugin powered by Ultimatelysocial