ಅಂತಾರಾಷ್ಟ್ರೀಯ ಈಜು ಸ್ಪರ್ಧೆ ಗೆ ಆಯ್ಕೆಯಾದ ಕಲಬುರಗಿ ಕುವರ.

 

ಉಡುಪಿಯ ಮಲ್ಪೆ ಕಡಲ ತೀರದಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ವಾಟರ್ ಈಜು ಸ್ಪರ್ಧೆಯ 5 ಕಿ.ಮೀ.,ಗ್ರೂಪ್ 2 ವಿಭಾಗದಲ್ಲಿ 49.41 ನಿ. ದಲ್ಲಿ ಗುರಿ ತಲುಪುವುದರೊಂದಿಗೆ ಬೆಳ್ಳಿಯ ಪದಕ ವಿಜೇತರಾಗಿರುವ ಕಲಬುರಗಿಯ ಈಜುಪಟು ರೇಣುಕಾಚಾರ್ಯ ಹೊಡಮನಿ ಅಂತರರಾಷ್ಟ್ರೀಯ ಈಜು ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ. ಫಿಲಿಫೈನ್ಸ್ ನಲ್ಲಿ ನೆಡೆಯುವ ಅಂತರರಾಷ್ಟ್ರೀಯ ಜೂನಿಯರ್ ಓಪನ್ ವಾಟರ್ ಈಜು ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಈ ಸ್ಪರ್ಧೆಯನ್ನು ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿತ್ತು. ರೇಣುಕಾಚಾರ್ಯ ಅವರು ಬೆಂಗಳೂರಿನ ಈಜು ಕೊಳದಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಈ ಮೊದಲು ಕಲಬುರ್ಗಿಯಲ್ಲಿ ಬೇಸಿಕ್ ಈಜು ತರಬೇತಿ ಪಡೆದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಸಾಪ ವಲಯ ಉದ್ಘಾಟನೆ ವಿಶೇಷ ಉಪನ್ಯಾಸ ಸುರೇಶ ಲೇಂಗಟಿ.

Sun Jan 22 , 2023
ಕಲಬುರ್ಗಿ,ಜ,22 ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿ ಕೆ ಸಲಗರ ಕಸಾಪ ವಲಯ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಮತ್ತು ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಸತ್ಕಾರ ಕಾರ್ಯಕ್ರಮವು( ದಿನಾಂಕ 23 ರಂದು ವಿಕೆ ಸಲಗರ ರಂದು)ಇಲ್ಲಿನ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial