ಕಸಾಪ ವಲಯ ಉದ್ಘಾಟನೆ ವಿಶೇಷ ಉಪನ್ಯಾಸ ಸುರೇಶ ಲೇಂಗಟಿ.

ಕಲಬುರ್ಗಿ,ಜ,22 ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿ ಕೆ ಸಲಗರ ಕಸಾಪ ವಲಯ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಮತ್ತು ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಸತ್ಕಾರ ಕಾರ್ಯಕ್ರಮವು( ದಿನಾಂಕ 23 ರಂದು ವಿಕೆ ಸಲಗರ ರಂದು)ಇಲ್ಲಿನ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು,ಹಿರಿಯ ಲೇಖಕರು, ದಿ ಡೈಲಿ ನ್ಯೂಜ್ ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಶಿವರಂಜನ ಸತ್ಯಂಪೇಟೆ ಅವರು ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಆಶಯ ನುಡಿಗಳನ್ನು ಆಡಲಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಣಗೌಡ ಪಾಟೀಲ ಧಮ್ಮೂರ, ಕಲಬುರಗಿ ಜಿಪಂ , ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣಗೌಡ ಡಿ ಪಾಟೀಲ, ವಿಕೆ ಸಲಗರ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ರಾಜಗಿರಿ , ಬಿಜೆಪಿ ಮುಖಂಡ ದೀಪಕ ಹೊಡಲ , ಜಿಲ್ಲಾ ಕಾರ್ಮಿಕ ಮತ್ತು ರೈತ ಮುಖಂಡ ಸುನೀಲ್ ಮಾನ್ಪಡೆ,ಕಮಲಾಪುರ ಸ.ಪ್ರೌ.ಶಿ.ಸಂಘದ ಅಧ್ಯಕ್ಷ ಪ್ರಕಾಶ ನರೋಣಾ , ವಿಕೆ ಸಲಗರ ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲ
ಅಜೀಂ ಸಾಬ , ವಿಕೆ ಸಲಗರ ಸರಕಾರಿ ಪ್ರೌಢಶಾಲೆ ಮುಖ್ಯ ಗುರು ರಾಮಣ್ಣ, ಮುದ್ದಡಗಾ ಸರಕಾರಿ ಪ್ರೌಢಶಾಲೆ ಮುಖ್ಯ ಗುರು ಆನಂದಕುಮಾರ ಕುಲಕರ್ಣಿ , ಬಂಡಪ್ಪ ಚಿಲಿ ಅಧ್ಯಕ್ಷತೆ ವಹಿಸಲಿದ್ದಾರೆ.
ತಾಲೂಕು ರವೀಂದ್ರ ಬಿಕೆ, ಪ್ರಶಾಂತ ಮಾನಕರ, ನಾಗಣ್ಣ ವಿಶ್ವಕರ್ಮ, ಆನಂದ ವಾರಿಕ, ಸಂಜಕುಮಾರ ನಾಟೀಕರ, ಚೇತನ ಮಹಾಜನ,ಸೋಮಶೇಖರ ಸಿಂಗೆ, ಗುಂಡಪ್ಪ ಕೊಳ್ಳುರೆ ಇತರರು ಭಾಗವಹಿಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನುಷ್ಯನ ಮೌಢ್ಯತೆಗೆ ಕಡಿವಾಣ ಹಾಕಿದ ಕೀರ್ತಿ ಚೌಡಯ್ಯನವರದಾಗಿದೆ.

Sun Jan 22 , 2023
ಮನುಷ್ಯನಲ್ಲಿರುವ ಅಂಧಕಾರವನ್ನಳಿಸಿ, ಮೌಢ್ಯತೆಯಿಂದ ಹೊರ ಬರುವಂತೆ ಪೇರೇಪಿಸಿದ ಕೀರ್ತಿ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿರುವ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಅಂಗವಾಗಿ ಶರಣನ ಭಾವಚಿತ್ರಕ್ಕೆ ಪೂಜಿಸಿ, ಪುಷ್ಪ ನಮನ ಗೈದು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 12ನೇ ಶತಮಾನದ ಮಹಾನ್ ಸಂತರಲೊಬ್ಬರಾಗಿರುವ ಚೌಡಯ್ಯನವರು, ಸಮಾಜದಲ್ಲಿರುವ ತಾರತಮ್ಮ ನೀತಿಗಳ ವಿರುದ್ಧ ಹೋರಾಡಿ, ಸೈದಾಂತಿಕ ನೆಲೆಗಟ್ಟನ್ನು ಭದ್ರ ಗೊಳಿಸಿದರು. […]

Advertisement

Wordpress Social Share Plugin powered by Ultimatelysocial