ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರೆಲ್ಲಾ ಒಂದಾಗಿ ಸಿನಿಮಾಗೆ ಶುಭ ಹಾರೈಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಣ್ಯರೂ ವೇದಿಕೆಗೆ ಬಂದು ಗ್ರೂಪ್ ಫೋಟೋಗೆ ಪೋಸ್ ನೀಡಿದ್ದರು. ಈ ವೇಳೆ ಶಿವರಾಜ್ ಕುಮಾರ್, ತಾರಾ ಅನುರಾಧ, ರಂಗಾಯಣ ರಘು, ದುನಿಯಾ ವಿಜಯ್, ಡಾಲಿ ಧನಂಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ ಸೇರಿದಂತೆ ನಟರ ದಂಡೇ ಸೇರಿತ್ತು.
ಎಲ್ಲರೂ ವೇದಿಕೆಗೆ ಏರಿದಾಗ ಫೋಟೋಗೆ ಪೋಸ್ ನೀಡಲು ಜಾಗವಿಲ್ಲದಂತಾಯ್ತು. ಈ ವೇಳೆ ನಟಿ ರಚಿತಾ ರಾಂ ತಮ್ಮ ಸ್ಟಾರ್ ಡಂ ಬದಿಗಿಟ್ಟು ವೇದಿಕೆಯಲ್ಲಿ ಚಕ್ಕಮಕ್ಕಳ ಹಾಕಿ ಕೂತು ಫೋಟೋಗೆ ಪೋಸ್ ಕೊಟ್ಟರು. ಎಲ್ಲರೂ ಅವಾಕ್ಕಾಗಿ ನೋಡುತ್ತಿದ್ದರೆ ಅವರಿಗೆ ನಟಿ ಅಮೃತಾ ಅಯ್ಯಂಗಾರ್ ಕೂಡಾ ಸಾಥ್ ನೀಡಿದರು.
Please follow and like us:
Mon Dec 20 , 2021
ಬೆಂಗಳೂರು: ಮಗಳು ವಮಿಕಾಳ ಫೋಟೊವನ್ನು ಪ್ರಕಟಿಸದೇ ಆಕೆಯ ಖಾಸಗಿತನವನ್ನು ಕಾಪಾಡಿರುವುದಕ್ಕೆ ನಟಿ ಅನುಷ್ಕಾ ಶರ್ಮಾ ಮಾಧ್ಯಮದವರಿಗೆ ಧನ್ಯವಾದ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದು, ಇತ್ತೀಚೆಗೆ ಮಗಳ ಫೋಟೊವನ್ನು ಹಲವರು ಕ್ಲಿಕ್ ಮಾಡಿದ್ದರು. ಆದರೆ ಅವರು ಅದನ್ನು ಪ್ರಕಟಿಸದೆ ನಮಗೆ ಸಹಕರಿಸಿದ್ದಾರೆ ಎಂದು ಹೇಳಿದ್ದಾರೆ. ತಾರಾ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಗಳು ವಮಿಕಾ ಬಗ್ಗೆ ಜನರಿಗೆ ಕುತೂಹಲ ಇದೆ. ಅದಕ್ಕೆ […]