ಮಗಳ ಖಾಸಗಿತನ ಗೌರವಿಸಿದ್ದಕ್ಕೆ ಧನ್ಯವಾದ

ಮಗಳ ಖಾಸಗಿತನ ಗೌರವಿಸಿದ್ದಕ್ಕೆ ಧನ್ಯವಾದ: ಅನುಷ್ಕಾ ಶರ್ಮಾ

ಬೆಂಗಳೂರು: ಮಗಳು ವಮಿಕಾಳ ಫೋಟೊವನ್ನು ಪ್ರಕಟಿಸದೇ ಆಕೆಯ ಖಾಸಗಿತನವನ್ನು ಕಾಪಾಡಿರುವುದಕ್ಕೆ ನಟಿ ಅನುಷ್ಕಾ ಶರ್ಮಾ ಮಾಧ್ಯಮದವರಿಗೆ ಧನ್ಯವಾದ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದು, ಇತ್ತೀಚೆಗೆ ಮಗಳ ಫೋಟೊವನ್ನು ಹಲವರು ಕ್ಲಿಕ್ ಮಾಡಿದ್ದರು.

ಆದರೆ ಅವರು ಅದನ್ನು ಪ್ರಕಟಿಸದೆ ನಮಗೆ ಸಹಕರಿಸಿದ್ದಾರೆ ಎಂದು ಹೇಳಿದ್ದಾರೆ.

ತಾರಾ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಗಳು ವಮಿಕಾ ಬಗ್ಗೆ ಜನರಿಗೆ ಕುತೂಹಲ ಇದೆ.

ಅದಕ್ಕೆ ಕಾರಣವೇನೆಂದರೆ, ಮಗಳ ಮುಖ ಕಾಣಿಸುವಂತಹ ಫೋಟೊಗಳನ್ನು ಈವರೆಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

ಹೀಗಾಗಿ ದಂಪತಿ ಹೊರಗಡೆ ಹೋಗುವಾಗ ಮಗು ಜತೆಗಿದ್ದರೆ ಫೋಟೊ ತೆಗೆಯಲು ಮಾಧ್ಯಮದವರು ಮತ್ತು ಜನರು ಯತ್ನಿಸುತ್ತಾರೆ. ಆದರೆ ಈವರೆಗೆ ಎಲ್ಲಿಯೂ ಆ ರೀತಿ ಮಗುವಿನ ಫೋಟೊ ಬಹಿರಂಗವಾಗಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿಯೂ ದಿನೇ ದಿನ ಹೆಚ್ಚಳ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮುಂದಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ

Mon Dec 20 , 2021
ವಿಶ್ವದಲ್ಲಿ ಓಮಿಕ್ರಾನ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ದೇಶದಲ್ಲಿಯೂ ದಿನೇ ದಿನ ಹೆಚ್ಚಳವಾಗುತ್ತಿದೆ. ಈ ನಡುವೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮುಂದಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಓಮಿಕ್ರಾನ್‌ ಜೊತೆಗೆ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿದೆ. ಆದ್ದರಿಂದಾಗಿ ಭಾರತವು ಎಲ್ಲಾ ಸಂದರ್ಭವನ್ನೂ ಎದುರಿಸಲು ಸಿದ್ಧವಾಗಿರಬೇಕು,” ಎಂದು ಏಮ್ಸ್‌ ಅಧ್ಯಕ್ಷ ಡಾ ರಣ್‌ದೀಪ್‌ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.ನಾವು ಯಾವುದೇ ಕ್ಷಣವನ್ನು ಎದುರಿಸಲು ಈಗಲೇ ಸಿದ್ಧವಾಗಿರಬೇಕು. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ […]

Advertisement

Wordpress Social Share Plugin powered by Ultimatelysocial