ದೇಶದಲ್ಲಿಯೂ ದಿನೇ ದಿನ ಹೆಚ್ಚಳ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮುಂದಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ

ವಿಶ್ವದಲ್ಲಿ ಓಮಿಕ್ರಾನ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ದೇಶದಲ್ಲಿಯೂ ದಿನೇ ದಿನ ಹೆಚ್ಚಳವಾಗುತ್ತಿದೆ. ಈ ನಡುವೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮುಂದಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಓಮಿಕ್ರಾನ್‌ ಜೊತೆಗೆ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿದೆ. ಆದ್ದರಿಂದಾಗಿ ಭಾರತವು ಎಲ್ಲಾ ಸಂದರ್ಭವನ್ನೂ ಎದುರಿಸಲು ಸಿದ್ಧವಾಗಿರಬೇಕು,” ಎಂದು ಏಮ್ಸ್‌ ಅಧ್ಯಕ್ಷ ಡಾ ರಣ್‌ದೀಪ್‌ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.ನಾವು ಯಾವುದೇ ಕ್ಷಣವನ್ನು ಎದುರಿಸಲು ಈಗಲೇ ಸಿದ್ಧವಾಗಿರಬೇಕು. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಪರಿಸ್ಥಿತಿಯು ಇರುವಂತೆ ನಮ್ಮಲ್ಲಿ ಆಗದಿರಲಿ ಎಂಬ ಆಶಾವಾದವನ್ನು ನಾವು ಹೊಂದಿರುವ. ನಮಗೆ ಓಮಿಕ್ರಾನ್‌ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆ. ಯಾವಾಗ ವಿಶ್ವದ ಬೇರೆ ಭಾಗದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಹೆಚ್ಚಳವಾಗುತ್ತದೆಯೋ, ಅಂದು ನಾವು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಯಾವುದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿರಬೇಕು,” ಎಂದು ಡಾ ರಣ್‌ದೀಪ್‌ ಗುಲೇರಿಯಾ ಅಭಿಪ್ರಾಯಿಸಿದ್ದಾರೆ.ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತ ಓಮಿಕ್ರಾನ್‌ ಈಗ ವಿಶ್ವದಾದ್ಯಂತ ಹರಡಿದೆ. ಬ್ರಿಟನ್‌ನಲ್ಲಿ ಓಮಿಕ್ರಾನ್‌ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಓಮಿಕ್ರಾನ್‌ನಿಂದ ಬ್ರಿಟನ್‌ನಲ್ಲಿ ಹೊಸ ಅಲೆಯ ಎಚ್ಚರಿಕೆ ಇದೆ ಎಂದು ಅಲ್ಲಿನ ತಜ್ಞರು ಹೇಳುತ್ತಾರೆ. ಈ ನಡುವೆ ಭಾರತದಲ್ಲಿಯೂ ಓಮಿಕ್ರಾನ್‌ ಬಗ್ಗೆ ಏಮ್ಸ್‌ ಮುಖ್ಯಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ

Mon Dec 20 , 2021
ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಪುಷ್ಪ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ನಟಿ ಸಮಂತಾ ರುತ್‌ ಪ್ರಭು, ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ. ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ಪಾತ್ರವನ್ನು ಮೆಚ್ಚಿ ಪೋಸ್ಟ್ ಮಾಡಿರುವ ಸಮಂತಾ, “ಇದು ಅಲ್ಲು ಅರ್ಜುನ್‌ರನ್ನು ಮೆಚ್ಚಿ ಹಾಕುತ್ತಿರುವ ಪೋಸ್ಟ್! ನಿಮ್ಮನ್ನು ಹಿಡಿದಿಟ್ಟು ಕೂರಿಸುವ ಪ್ರದರ್ಶನ.. ಪ್ರತಿ ಸೆಕೆಂಡ್ ಸಹ ಬೆಂಕಿ. ನೋಡದೇ ಇರಲು ಸಾಧ್ಯವೇ ಇರದ ಮಟ್ಟಿಗೆ ಅಸಾಧ್ಯವಾಗುವ ಮಟ್ಟದಲ್ಲಿ ನಟರೊಬ್ಬರು […]

Advertisement

Wordpress Social Share Plugin powered by Ultimatelysocial