ಹೆಚ್ಚಿನ ಕಡೆಗಳಲ್ಲಿ ಇಂಧನ ಬೆಲೆ ಸ್ಥಿರ, ಎಲ್ಲೆಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ?

ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಕಳೆದ ಮಾರ್ಚ್ 22ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ (Petrol Diesel Price) ಭಾರಿ ಏರಿಕೆಯಾಗಿತ್ತು. 100ರ ಗಡಿ ದಾಟಿ ಹೊರಟಿರುವ ಇಂಧನ ಬೆಲೆಗಳು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ.

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ಪೆಟ್ರೋಲ್ ದರಗಳಿಂದ ಗ್ರಾಹಕರಲ್ಲಿ ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ದೇಶದಲ್ಲಿ ಇಂಧನ ಬೆಲೆ ಎಲ್ಲೆಲ್ಲಿ ಎಷ್ಟಿದೆ ಎಂಬುದರ ಬಗ್ಗೆ ಒಂದು ಸಮಗ್ರ ಮಾಹಿತಿ ಇಲ್ಲಿದೆ.
.
ಪೆಟ್ರೋಲ್, ಡೀಸೆಲ್ ಕೊಂಚ ಮಟ್ಟಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿದೆ.
ಜಾಗತಿಕವಾಗಿ ಎಲ್ಲಾ ಉತ್ಪನ್ನಗಳ ಬೆಲೆ ಗಗನಕ್ಕೇರಿವೆ. ಸಾಮಾಜಿಕ, ಆರ್ಥಿಕ, ಅಂತಾರಾಷ್ಟ್ರೀಯ ಸಮಾಚಾರಗಳು ಇಂಧನದ ಬೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಬೆಲೆ ಏರಿಕೆ ಶ್ರೀಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಕಳೆದ 37 ದಿನಗಳಿಂದ ಇಂಧನ ದರ ಸ್ಥಿರವಾಗಿದೆ. ಮುಂಬೈ ನಗರದಲ್ಲಿ (Mumbai) ಪೆಟ್ರೋಲ್ ದರ 120 ರೂ ಪ್ರತಿ ಲೀಟರ್ ದಾಟಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಯಷ್ಟೇ ಇಂದೂ ಸಹ ಪೆಟ್ರೋಲ್ ಬೆಲೆ ಮುಂದುವರೆದಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 111.49 (13 ಪೈಸೆ ಏರಿಕೆ)
ಬೆಂಗಳೂರು – ರೂ. 111.09 (00)
ಬೆಂಗಳೂರು ಗ್ರಾಮಾಂತರ – ರೂ. 111.40 (24 ಪೈಸೆ ಏರಿಕೆ)
ಬೆಳಗಾವಿ – ರೂ. 110.15 (41 ಪೈಸೆ ಇಳಿಕೆ)
ಬಳ್ಳಾರಿ – ರೂ. 112.28 ( 75 ಪೈಸೆ ಇಳಿಕೆ)
ಬೀದರ್ – ರೂ. 112.03 (4 ಪೈಸೆ ಏರಿಕೆ)
ವಿಜಯಪುರ – ರೂ. 111.21 (9 ಪೈಸೆ ಇಳಿಕೆ)
ಚಾಮರಾಜನಗರ – ರೂ. 111.22 (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 111.15 (31 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 112.36 (7 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 113.08 (57 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 110.63 (6 ಪೈಸೆ ಏರಿಕೆ)
ದಾವಣಗೆರೆ – ರೂ. 113.24 (15 ಪೈಸೆ ಏರಿಕೆ)
ಧಾರವಾಡ – ರೂ. 110.96 (12 ಪೈಸೆ ಏರಿಕೆ)
ಗದಗ – ರೂ. 111.88 (50 ಪೈಸೆ ಏರಿಕೆ)
ಕಲಬುರಗಿ – ರೂ. 110.81 (00)
ಹಾಸನ – ರೂ. 111.36 (41ಪೈಸೆ ಏರಿಕೆ)
ಹಾವೇರಿ – ರೂ. 111.09 (92 ಪೈಸೆ ಏರಿಕೆ)
ಕೊಡಗು – ರೂ. 112.34 (21 ಪೈಸೆ ಇಳಿಕೆ)
ಕೋಲಾರ – ರೂ. 111.03 (00)
ಕೊಪ್ಪಳ – ರೂ. 112.03 (8 ಪೈಸೆ ಇಳಿಕೆ)
ಮಂಡ್ಯ – ರೂ. 110.94 (4 ಪೈಸೆ ಏರಿಕೆ)
ಮೈಸೂರು – ರೂ. 110.86 (17 ಪೈಸೆ ಇಳಿಕೆ)
ರಾಯಚೂರು – ರೂ. 110.91 (99 ಪೈಸೆ ಇಳಿಕೆ)
ರಾಮನಗರ – ರೂ. 111.21 (35 ಪೈಸೆ ಇಳಿಕೆ)
ಶಿವಮೊಗ್ಗ – ರೂ. 112.31 (44 ಪೈಸೆ ಇಳಿಕೆ)
ತುಮಕೂರು – ರೂ. 111.52(9 ಪೈಸೆ ಇಳಿಕೆ)
ಉಡುಪಿ – ರೂ. 111.99 (60 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 111.14 (2.16 ಪೈಸೆ ಏರಿಕೆ)
ಯಾದಗಿರಿ – ರೂ. 111.54 (63 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 95.17
ಬೆಂಗಳೂರು – ರೂ. 94.76
ಬೆಂಗಳೂರು ಗ್ರಾಮಾಂತರ – ರೂ. 95.07
ಬೆಳಗಾವಿ – ರೂ. 94.87
ಬಳ್ಳಾರಿ – ರೂ. 95.90
ಬೀದರ್ – ರೂ. 95.66
ವಿಜಯಪುರ – ರೂ. 94.92
ಚಾಮರಾಜನಗರ – ರೂ. 94.87
ಚಿಕ್ಕಬಳ್ಳಾಪುರ – ರೂ. 94.85
ಚಿಕ್ಕಮಗಳೂರು – ರೂ. 95.91
ಚಿತ್ರದುರ್ಗ – ರೂ. 96.46
ದಕ್ಷಿಣ ಕನ್ನಡ – ರೂ. 94.34
ದಾವಣಗೆರೆ – ರೂ. 96.60
ಧಾರವಾಡ – ರೂ. 94.69
ಗದಗ – ರೂ. 95.52
ಕಲಬುರಗಿ – ರೂ. 94.56
ಹಾಸನ – ರೂ. 94.91
ಹಾವೇರಿ – ರೂ. 95.71
ಕೊಡಗು – ರೂ. 95.79
ಕೋಲಾರ – ರೂ. 94. 74
ಕೊಪ್ಪಳ – ರೂ. 95.66
ಮಂಡ್ಯ – ರೂ. 94.65
ಮೈಸೂರು – ರೂ. 94.58
ರಾಯಚೂರು – ರೂ. 94.69
ರಾಮನಗರ – ರೂ. 94.89
ಶಿವಮೊಗ್ಗ – ರೂ. 95.86
ತುಮಕೂರು – ರೂ. 95.05
ಉಡುಪಿ – ರೂ. 94.66
ಉತ್ತರ ಕನ್ನಡ – ರೂ. 94.85
ಯಾದಗಿರಿ – ರೂ. 95.22

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು ಹುಡುಗ ರಾಖಿ ಸಾವಂತ್ ಹೊಸ ಬಾಯ್ ಫ್ರೆಂಡ್ ಆಗಿದ್ದೇಗೆ?

Wed May 18 , 2022
  ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಸಿನಿಮಾ ಮತ್ತು ಅಭಿನಯಕ್ಕಿಂತ ಹೆಚ್ಚಾಗಿ ಕಾಂಟ್ರವರ್ಸಿಗಳಿಂದಲೆ ಸುದ್ದಿ ಆಗುತ್ತಾರೆ. ಈಕೆಯನ್ನು ಬಾಲಿವುಡ್ ವಿವಾದಗಳ ರಾಣಿ ಅಂತಲೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಈಕೆ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ. ಅದರಲ್ಲೂ ಮದುವೆ, ಲವ್, ಬಾಯ್ ಫ್ರೆಂಡ್ ವಿಚಾರದಲ್ಲಂತೂ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಸದಾ ಮದುವೆ ವಿಚಾರಲ್ಲಿ ಸುದ್ದಿ ಆಗುತ್ತಾ ಇರುತ್ತಾರೆ. ಇತ್ತೀಚೆಗೆ ರಾಖಿ ಸಾವಂತ್ ತಮ್ಮ ಮಾಜಿ ಪತಿ ರಿತೇಶ್ ಸಿಂಗ್ ವಿಚಾರದಲ್ಲಿ […]

Advertisement

Wordpress Social Share Plugin powered by Ultimatelysocial