ಭರ್ಜರಿಯಾಗಿದೆ “ಲಂಕಾಸುರ” ನ ಟೈಟಲ್ ಟ್ರ್ಯಾಕ್.

ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುವುದರೊಂದಿಗೆ, ನಿರ್ಮಾಣವನ್ನು ಮಾಡುತ್ತಿರುವ ಚಿತ್ರ “ಲಂಕಾಸುರ”. ಇದು ಟೈಗರ್ ಟಾಕೀಸ್ ಸಂಸ್ಥೆಯ ಮೊದಲ ಚಿತ್ರವೂ ಹೌದು. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ಪ್ರಮೋದ್ ಕುಮಾರ್ ನಿರ್ದೇಶಕರು.

“ಅಣ್ಣ ಗನ್ ಹಿಡ್ದು ನಿಂತ ಅಂದ್ರೆ ಭಸ್ಮಾಸುರ.
ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ.
ಲಂಕಾಸುರ ಲಂಕಾಸುರ .. ಎಂಬ ಟೈಟಲ್ ಟ್ರ್ಯಾಕ್ A2 music ಮೂಲಕ ಬಿಡುಗಡೆಯಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ವಿಜೇತ್ ಕೃಷ್ಣ ಅವರೆ ಹಾಡಿದ್ದಾರೆ. ಜೋಯೆಲ್ ಶಾಸ್ತ್ರಿ ಗಿಟಾರ್ ನುಡಿಸಿದ್ದಾರೆ.

ಮೋಹನ್ ಕುಮಾರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ನಾಯಕ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ.
ಹೆಚ್.ಎಂ.ಟಿ, ಟೊರಿನೊ ಫ್ಯಾಕ್ಟರಿ ಹಾಗೂ ಮಲ್ಲೇಶ್ವರಂ ದೋಬಿ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಆರು ಅದ್ದೂರಿ ಸೆಟ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

4 ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳು ದೀರ್ಘ ಕೋವಿಡ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುತ್ತಾರೆ

Sun Jul 24 , 2022
48 ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾದ ಮಕ್ಕಳು ಕನಿಷ್ಠ ಒಂದು ಸುದೀರ್ಘ ಕೋವಿಡ್ ರೋಗಲಕ್ಷಣವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ JAMA ನೆಟ್‌ವರ್ಕ್ ಓಪನ್‌ನಲ್ಲಿನ ಹೊಸ ಅಧ್ಯಯನದ ಪ್ರಕಾರ, ಮೊದಲ ಭೇಟಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರುವ COVID-19 ಹೊಂದಿರುವ ಮಕ್ಕಳು ಮೂರು ತಿಂಗಳ ನಂತರ ದೀರ್ಘ COVID ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಯುರೋಪ್, ಯುಎಸ್ ಮತ್ತು ಆಸ್ಟ್ರೇಲಿಯಾದ ಸಂಶೋಧಕರು 1884 ಮಕ್ಕಳನ್ನು ಕೋವಿಡ್-19 ಗೆ […]

Advertisement

Wordpress Social Share Plugin powered by Ultimatelysocial