ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿಹಾಗೂ ಸಾನ್ಯ ಅಯ್ಯರ್ ಲವ್ ಬರ್ಡ್ಸ್ ಆಗಿ ಹೈಲೈಟ್ ಆಗಿದ್ದರು.

 

 ಸಾನ್ಯ ಎಲಿಮಿನೇಟ್ ಆಗಿ ಹೊರಬಂದ ಮೇಲೂ ರೂಪೇಶ್ ಶೆಟ್ಟಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇದೀಗ ನಾನು ಕಳುಹಿಸುತ್ತಿರುವ ವಸ್ತುಗಳು ರೂಪೇಶ್‌ಗೆ ರೀಚ್ ಆಗುತ್ತಿಲ್ಲ ಎಂದು ಬಿಗ್ ಬಾಸ್ ಮೇಲೆ ಸಾನ್ಯ ಬೇಸರ ಹೊರ ಹಾಕಿದ್ದಾರೆ.

ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿದ್ದ ಸಾನ್ಯ ಮತ್ತು ರೂಪೇಶ್ ಒಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ ಸಾಥ್ ನೀಡುತ್ತಲೇ ಬಂದಿದ್ದರು. ಸಾನ್ಯ ಔಟ್ ಆಗಿದ್ದಾರೆ ಎಂದಾಗ ರೂಪೇಶ್, ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸಾನ್ಯ ಹೊರ ಬರುವಾಗ ರೂಪೇಶ್ ಶೆಟ್ಟಿ ಒಂದು ಮಾತು ತೆಗೆದುಕೊಳ್ಳುತ್ತಾರೆ. ಪ್ರತಿ ವಾರವೂ ನನಗೆ ರೆಡ್ ಶರ್ಟ್ ಅಥವಾ ಟೀ-ಶರ್ಟ್ ಕಳುಹಿಸಬೇಕು ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕು ಎಂದಿದ್ದರು. ಅದರಂತೆ ಕೊಟ್ಟ ಮಾತನ್ನ ಸಾನ್ಯ ಉಳಿಕೊಳ್ಳುತ್ತಾರೆ. ಒಂದು ವಾರ ಬಟ್ಟೆ ಕಳುಹಿಸಿದ್ದಾರೆ. ಎರಡನೇ ವಾರದಿಂದ ಯಾವ ಡ್ರೆಸ್ ಕೂಡ ಬರುವುದಿಲ್ಲ. ಇದನ್ನು ರೂಪೇಶ್ ಮಾತ್ರವಲ್ಲ ಪ್ರತಿ ದಿನ ಎಪಿಸೋಡ್ ನೋಡುತ್ತಿರುವವರಿಗೂ ಗಮನಕ್ಕೆ ಬಂದಿದೆ.

ಇದೇನಪ್ಪ ಸಾನ್ಯಾಗೆ ರೂಪೇಶ್ ಮೇಲಿನ ಪ್ರೀತಿ ಕಡಿಮೆ ಆಗಿರಬೇಕು ಅದಿಕ್ಕೆ ಕೆಂಪು ಶರ್ಟ್ ಬರುತ್ತಿಲ್ಲ ಎಂದು ವೀಕ್ಷಕರು ಭಾವಿಸಿದ್ದರು ಆದರೆ ಈಗ ಸಾನ್ಯ ಹಾಕಿರುವ ಪೋಸ್ಟ್ ನೋಡಿ ಎಲ್ಲರಿಗೂ ಕ್ಲಾರಿಟಿ ಸಿಕ್ಕಿದೆ.

ರೂಪಿ ನೀನು ಸ್ಟ್ರಾಂಗ್ ಆಗಿರು ಆಯ್ತಾ ನಾನು ಕಳುಹಿಸುತ್ತಿರುವ ಶರ್ಟ್ ಗಳು ನಿನಗೆ ತಲುಪಿಸುತ್ತಿಲ್ಲ ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್ನ ಕಳುಹಿಸುತ್ತಿರುವೆ, ಇದನ್ನು ಯಾರಿಂದಲ್ಲೂ ಸ್ಟಾಪ್ ಮಾಡಲು ಆಗುವುದಿಲ್ಲ ಆಯ್ತಾ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು ಎಂದು ಸಾನ್ಯ ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿಂದಗಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ !

Sun Dec 4 , 2022
ಸಿಂದಗಿಯ ಕಲ್ಯಾಣ ನಗರದಲ್ಲಿ ಅಗ್ನಿ ಅವಘಡ ಆಕಸ್ಮಿಕವಾಗಿ ಶುಧ್ಧ ನೀರಿನ ಘಟಕ ಹಾಗೂ ಪ್ಲಮಿಂಗ್ ಗೆ ಹೊತ್ತಿದ್ದ ಬೆಂಕಿಗೆ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ಇಕ್ಬಾಲ ಮುತ್ತಗಿ ಎಂಬುವರ ಮಾಲಿಕತ್ವದ ಶುಧ್ಧ ನೀರಿನ ಘಟಕ ಪ್ಲಮಿಂಗ ವಸ್ತುಗಳು ಆಕಸ್ಮಿಕವಾಗಿ ಅಗ್ನಿ ಆಹುತಿಯಾಗಿ ಅಪಾರ ಬೆಲೆಬಾಳುವ ವಸ್ತುಗಳು ಸ್ಥಳದಲ್ಲೇ ಜಖಂ ಹಾಗೂ ಸುತ್ತಮುತ್ತಲಿನ ಮನೆಗಳ ಕಿಡಕಿ ಹಾಗೂ ಬಾಗಿಲುಗಳು ಸಹ ಸುಟ್ಟು ಕರಕಲಾಗಿದ್ದಾವೆ, ಸುಮಾರು 10 ರಿಂದ 12 ಲಕ್ಷದ ವರೆಗೆ […]

Advertisement

Wordpress Social Share Plugin powered by Ultimatelysocial