ಥೈರಾಯ್ಡ್.. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಪುರಷರಿಗಿಂತ ಮಹಿಳೆಯರಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದರೆ, ಕೆಲವೊಮ್ಮೆ ಥೈರಾಯ್ಡ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಎಲ್ಲಾ ಲಕ್ಷಣಗಳನ್ನೂ ಥೈರಾಯ್ಡ್ ಎಂಬ ಭಾವಿಸಿ, ಅದಕ್ಕೆ ಅನೌಚಾರಿಕೆ ಚಿಕಿತ್ಸೆ ಪಡೆಯುತ್ತಿರುವುದು ಇನ್ನಷ್ಟು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎನ್ನುವುದು ಅಧ್ಯಯನಗಳಿಂದ ತಿಳಿದು ಬರುತ್ತಿದೆ.
ಹೀಗಾಗಿ ಥೈರಾಯ್ಡ್ ಬಗ್ಗೆ ಸೂಕ್ತ ಅರಿವು ಮೂಡಿಸುವ ದೃಷ್ಟಿಯಿಂದ ಜನವರಿ ತಿಂಗಳನ್ನು “ಥೈರಾಯ್ಡ್ ಜಾಗೃತಿ” ಮಾಸವೆಂದು ಆಚರಿಸಲಾಗುತ್ತದೆ. ಥೈರಾಯ್ಡ್ ಬಗ್ಗೆ ನಿಮಗಿರುವ ಎಲ್ಲಾ ಅನುಮಾನಗಳಿಗೂ ವೈದ್ಯರು ಮಾಹಿತಿ ನೀಡಿದ್ದಾರೆ.
ಥೈರಾಯ್ಡ್ನಿಂದ ತೂಕ ಹೆಚ್ಚಳವಾಗಲಿದೆಯೇ?: ಥೈರಾಯ್ಡ್ ಕುತ್ತಿಗೆ ಭಾಗದಲ್ಲಿ ಚಿಟ್ಟಿಯಾಕಾರ ಗ್ರಂಥಿಯಾಗಿದ್ದು, ಇದು ಟಿ-3 ಹಾಗೂ ಟಿ-4 ಹಾರ್ಮೋನ್ಗಳನ್ನು ಉತ್ಪತ್ತಿಸುತ್ತವೆ. ಇದು ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸುವ ಥೈರಾಯ್ಡ್ ಆಗಿದ್ದು, ಟಿಎಸ್ಎಚ್ ಹಾರ್ಮೋನ್ ಉತ್ಪದಿಸಲಿದ್ದು, ದೇಹದ ಪಚನ ಕ್ರಿಯೆಯನ್ನು ನಿಯಂಥ್ರಿಸುತ್ತದೆ. ಥೈರಾಯ್ಡ್ನಲ್ಲಿ ಹೈಪೋ ಥೈರಾಯ್ಡ್ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಕೂಡ ಹೌದು. ಹೈಪೋ ಥೈರಾಯ್ಡ್ನಿಂದ ಪಚನ ಕ್ರಿಯೆ ಸಂಪೂರ್ಣ ನಿಧಾನವಾಗುವುದರಿಂದ ದೇಹದಲ್ಲಿ ತೂಕ ಹೆಚ್ಚಳವಾಗುತ್ತದೆ. ಇದು ಕೂದಲು ಉದುರುವಿಕೆ, ರಕ್ತದೊತ್ತಡ ಹೆಚ್ಚಳ, ಸಕ್ಕರೆ ಕಾಯಿಲೆ ಇತ್ಯಾದಿ ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಥೈರಾಯ್ಡ್ನ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿಚಿಕಿತ್ಸೆ ಪಡೆದುಕೊಳ್ಳಬೇಕು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada