ಮಾಜಿ ನಾಯಕ ಜೇಸನ್ ಹೋಲ್ಡರ್ ಕೊನೆಯ ಓವರ್ ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ರೋಚಕ ಜಯ ಸಾಧಿಸಿ 3-2ರಿಂದ ಸರಣಿ ವಶಪಡಿಸಿಕೊಂಡಿದೆ.
ಬ್ರಿಡ್ಜ್ ಟೌನ್ ನಲ್ಲಿ ಭಾನುವಾರ ತಡರಾತ್ರಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 4 ವಿಕೆಟ್ ಗೆ 174 ರನ್ ಗಳಿಸಿತು.
ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ 19.5 ಓವರ್ ಗಳಲ್ಲಿ 162 ರನ್ ಗೆ ಪತನಗೊಂಡಿತು. ಜೇಸನ್ ಹೋಲ್ಡರ್ ಸತತ 4 ಎಸೆತಗಳಲ್ಲಿ 4 ವಿಕೆಟ್ ಸೇರಿ ಒಟ್ಟಾರೆ 5 ವಿಕೆಟ್ ಪಡೆದು ಮಿಂಚಿದರು. ಅಲ್ಲದೇ ಟಿ-20ಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.
ಇಂಗ್ಲೆಂಡ್ ಕೊನೆಯ ಓವರ್ ನಲ್ಲಿ 20 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ದಾಳಿ ನಡೆಸಿದ ಹೋಲ್ಡರ್ ಕ್ರಿಸ್ ಜೋರ್ಡನ್, ಸ್ಯಾಮ್ ಬಿಲ್ಲಿಂಗ್ಸ್, ಆದಿಲ್ ರಶೀದ್ ಮತ್ತು ಸಕೀಬ್ ಮೊಹಮದ್ ಸತತ 4 ಎಸೆತಗಳಲ್ಲಿ ಔಟ್ ಮಾಡಿ ದಾಖಲೆ ಬರೆದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada