WI:4 ಎಸೆತದಲ್ಲಿ 4 ವಿಕೆಟ್,ಜೇಸನ್ ಹೋಲ್ಡರ್;

ಮಾಜಿ ನಾಯಕ ಜೇಸನ್ ಹೋಲ್ಡರ್ ಕೊನೆಯ ಓವರ್ ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ರೋಚಕ ಜಯ ಸಾಧಿಸಿ 3-2ರಿಂದ ಸರಣಿ ವಶಪಡಿಸಿಕೊಂಡಿದೆ.

ಬ್ರಿಡ್ಜ್ ಟೌನ್ ನಲ್ಲಿ ಭಾನುವಾರ ತಡರಾತ್ರಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 4 ವಿಕೆಟ್ ಗೆ 174 ರನ್ ಗಳಿಸಿತು.

ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ 19.5 ಓವರ್ ಗಳಲ್ಲಿ 162 ರನ್ ಗೆ ಪತನಗೊಂಡಿತು. ಜೇಸನ್ ಹೋಲ್ಡರ್ ಸತತ 4 ಎಸೆತಗಳಲ್ಲಿ 4 ವಿಕೆಟ್ ಸೇರಿ ಒಟ್ಟಾರೆ 5 ವಿಕೆಟ್ ಪಡೆದು ಮಿಂಚಿದರು. ಅಲ್ಲದೇ ಟಿ-20ಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.

ಇಂಗ್ಲೆಂಡ್ ಕೊನೆಯ ಓವರ್ ನಲ್ಲಿ 20 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ದಾಳಿ ನಡೆಸಿದ ಹೋಲ್ಡರ್ ಕ್ರಿಸ್ ಜೋರ್ಡನ್, ಸ್ಯಾಮ್ ಬಿಲ್ಲಿಂಗ್ಸ್, ಆದಿಲ್ ರಶೀದ್ ಮತ್ತು ಸಕೀಬ್ ಮೊಹಮದ್ ಸತತ 4 ಎಸೆತಗಳಲ್ಲಿ ಔಟ್ ಮಾಡಿ ದಾಖಲೆ ಬರೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನವರಿ 31 ರಂದು ಚಿನ್ನ, ಬೆಳ್ಳಿ ಬೆಲೆ: ಚಿನ್ನ ಬದಲಾಗಿಲ್ಲ, ಬೆಳ್ಳಿ ಇಳಿಕೆ;

Mon Jan 31 , 2022
ಇಂದು ಚಿನ್ನ, ಬೆಳ್ಳಿ ಬೆಲೆ: ಹತ್ತು ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ ಭಾನುವಾರದ ಹಿಂದಿನ ವಹಿವಾಟಿನ ಬೆಲೆಯಿಂದ ಸೋಮವಾರ 49,090 ರೂ.ಗೆ ಬದಲಾಗದೆ ಉಳಿದಿದೆ. ಏತನ್ಮಧ್ಯೆ, ಜನವರಿ 31 ರಂದು ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ಕುಸಿದು 61,000 ರೂ.ಗೆ ಮಾರಾಟವಾಯಿತು. ಮುಂಬೈ ಮತ್ತು ದೆಹಲಿಯಲ್ಲಿ ಸೋಮವಾರ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,000 ರೂ. ಇದರ ಬೆಲೆ ಕೋಲ್ಕತ್ತಾದಲ್ಲಿ 45,000, ಚೆನ್ನೈನಲ್ಲಿ 45,330 ಮತ್ತು ಬೆಂಗಳೂರಿನಲ್ಲಿ […]

Advertisement

Wordpress Social Share Plugin powered by Ultimatelysocial