ಟಿ20 ವಿಶ್ವಕಪ್‌ 2022: ಕೇವಲ 2 ನಿಮಿಷದಲೇ ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಸೋಲ್ಡ್‌ ಔಟ್!

ನವದೆಹಲಿ: ಈ ವರ್ಷದ ಅಕ್ಟೋಬರ್​ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹೈವೋಲ್ಟೇಜ್​ ಪಂದ್ಯ ವೀಕ್ಷಿಸಲು ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

 

ತಾಜಾ ಬೆಳವಣಿಗೆ ಏನೆಂದರೆ ಕ್ರೀಡಾಂಗಣದಲ್ಲಿ ನೇರವಾಗಿ ಇಂಡೋ-ಪಾಕ್​ ಕ್ರಿಕೆಟ್​ ಕದನ ವೀಕ್ಷಿಸಲು ಎಂದಿನಂತೆ ಟಿಕೆಟ್​ಗೆ ಭಾರೀ ಬೇಡಿಕೆ ಇದ್ದೇ ಇರುತ್ತದೆ. ಅದರಂತೆಯೇ ಈ ಬಾರಿಯು ಟಿಕೆಟ್ ಮಾರಾಟ ಆರಂಭವಾದ​ ಕೇವಲ 5 ನಿಮಿಷದಲ್ಲಿ ಎಲ್ಲ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ.

ಅಕ್ಟೋಬರ್ 16 ರಿಂದ ನವೆಂಬರ್ 16 ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿದೆ. ಒಟ್ಟು 45 ಪಂದ್ಯಗಳಲ್ಲಿ ಪೂರ್ವ ಮಾರಾಟದ ಅವಧಿಯಲ್ಲಿ 200,000 ಟಿಕೆಟ್‌ಗಳು ಮಾರಾಟವಾದ ನಂತರ ಸಾಮಾನ್ಯ ಟಿಕೆಟ್​ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಇಂದು ಕೇವಲ 5 ನಿಮಿಷದಲ್ಲೇ ಇಂಡೋ-ಪಾಕ್​ ಪಂದ್ಯದ ಟಿಕೆಟ್​ಗಳು ಮಾರಾಟವಾಗಿದೆ.

ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಗೆ 800,000 ಕ್ಕೂ ಹೆಚ್ಚು ಅಭಿಮಾನಿಗಳು ಹಾಜರಾಗುವ ನಿರೀಕ್ಷೆಯಿದೆ. ಸಾಮಾನ್ಯ ಸಾರ್ವಜನಿಕ ಮಾರಾಟದಲ್ಲಿ ಇಂಡೋ-ಪಾಕ್​ ಬಿಟ್ಟು ಇತರ ಎಲ್ಲಾ ಪಂದ್ಯಗಳಿಗೆ ಟಿಕೆಟ್​ಗಳನ್ನು ಪಡೆಯಲು ಅಭಿಮಾನಿಗಳಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಆದರೆ, ಇಂಡೋ ಪಾಕ್​ ಪಂದ್ಯಗಳ ಟಿಕೆಟ್​ ಮಾತ್ರ ಭರ್ಜರಿ ಮಾರಾಟವಾಗಿದೆ.

ಈ ಬಗ್ಗೆ ಮಾತನಾಡಿರುವ ಐಸಿಸಿ ಪುರುಷರ T20 ವಿಶ್ವಕಪ್-2022 ಟೂರ್ನಿಯ ಸ್ಥಳೀಯ ಸಂಘಟನಾ ಸಮಿತಿಯ ಸಿಇಒ ಮಿಚೆಲ್ ಎನ್‌ರೈಟ್, ಅಭಿಮಾನಿಗಳ ಪ್ರತಿಕ್ರಿಯೆ ಅದ್ಭುತವಾಗಿದೆ. ಆದ್ಯತೆಯ ಆಧಾರದ ಮೇಲೆ ಪೂರ್ವ-ಮಾರಾಟದಲ್ಲಿ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್​ 16 ರಿಂದ ಆರಂಭವಾಗಲಿರುವ ವಿಶ್ವಕಪ್​ ನವೆಂಬರ್​ 16ಕ್ಕೆ ಅಂತ್ಯವಾಗಲಿದೆ. ಈ ಬಾರಿ ಟಿ20 ವಿಶ್ವಕಪ್​ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿದೆ. ಕಳೆದ ಬಾರಿಯ ವಿಶ್ವಕಪ್​ನಂತೆಯೇ ಈ ಬಾರಿಯು ಟೀಮ್​ ಇಂಡಿಯಾ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ. ಅಕ್ಟೋಬರ್​​ 23ರಂದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕ್ರಿಕೆಟ್​ ಕದನಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಮೆಲ್ಬೋರ್ನ್​ ಸ್ಟೇಡಿಂಯಲ್ಲಿ ಪಂದ್ಯ ನಡೆಯಲಿದೆ.

ಒಟ್ಟು 16 ತಂಡಗಳು ಭಾಗವಹಿಸಲಿದ್ದು, 45 ಪಂದ್ಯಗಳು ನಡೆಯಲಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪುರುಷರ ಆವೃತ್ತಿಯ ಟಿ20 ವಿಶ್ವಕಪ್​ ಆತಿಥ್ಯವನ್ನು ವಹಿಸಿದೆ. ಈ ಹಿಂದೆ ಅಂದರೆ, 2020ರ ಫೆಬ್ರವರಿ-ಮಾರ್ಚ್​ನಲ್ಲಿ ಮಹಿಳಾ ಟಿ20 ವಿಶ್ವಕಪ್​ ಆತಿಥ್ಯ ವಹಿಸಿತ್ತು.

ಟಿ20 ಪಂದ್ಯಗಳು ಆಸ್ಟ್ರೇಲಿಯಾದ ಅಡಿಲೇಡ್​, ಬ್ರಿಸ್ಬೇನ್​, ಗೀಲಾಂಗ್​, ಹೋಬರ್ಟ್​, ಮೆಲ್ಬೋರ್ನ್​, ಪರ್ತ್​ ಮತ್ತು ಸಿಡ್ನಿ ಮೈದಾನಗಳಲ್ಲಿ ನಡೆಯಲಿವೆ.

ಭಾರತದ ವೇಳಾಪಟ್ಟಿ ಹೀಗಿದೆ.
1. ಅಕ್ಟೋಬರ್​ 23: ಎದುರಾಳಿ ಪಾಕಿಸ್ತಾನ, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​
2. ಅಕ್ಟೋಬರ್​ 27: ಎದುರಾಳಿ ಗ್ರೂಪ್​ ಎ ರನ್ನರ್​ ಅಪ್​, ಸಿಡ್ನಿ ಕ್ರಿಕೆಟ್​ ಗ್ರೌಂಡ್​
3. ಅಕ್ಟೋಬರ್ 30: ಎದುರಾಳಿ ದಕ್ಷಿಣ ಆಫ್ರಿಕಾ, ಪರ್ತ್​ ಸ್ಟೇಡಿಯಂ
4. ನವೆಂಬರ್​ 02: ಎದುರಾಳಿ ಬಾಂಗ್ಲಾದೇಶ, ಅಡಿಲೇಡ್​ ಓವಲ್​
5. ನವೆಂಬರ್​ 06: ಎದುರಾಳಿ ಗ್ರೂಪ್​ ಬಿ ವಿನ್ನರ್​, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​

2021ರ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗ್ರೂಪ್​ ಹಂತದಲ್ಲೇ ಟೂರ್ನಿಯಿಂದ ಹೊರ ನಡೆದಿತ್ತು. ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು. ಅಲ್ಲದೆ, ನ್ಯೂಜಿಲೆಂಡ್​ ವಿರುದ್ಧವೂ ಸೋತಿತ್ತು. ಅಫ್ಘಾನಿಸ್ತಾನ, ಸ್ಕಾಟ್​ಲೆಂಡ್​ ಮತ್ತು ನಮಿಬಿಯಾ ವಿರುದ್ಧ ಗೆಲುವು ದಾಖಲಿಸಿದರೂ ಸಹ ಸಮಿಫೈನಲ್​ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ವರ್ಷದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. (ಏಜೆನ್ಸೀಸ್​)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಕೂಡ ಇದ್ದರು.

Tue Feb 8 , 2022
  ಮುಂಬೈ:ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು. ಅದಕ್ಕೂ ಮುನ್ನ ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದಿದ್ದರು. ದೇಶದ ಪ್ರಧಾ ನಿ ಸೇರಿದಂತೆ ರಾಜಕೀಯ ಮುಖಂಡರು, ಚಿತ್ರರಂಗದ ಕಲಾವಿದರು, ಕ್ರಿಕೆಟ್ ದಿಗ್ಗಜರು, ಕ್ರೀಡಾಪಟುಗಳು ಹೀಗೆ ಹಲವರು ಶಿವಾಜಿ ಪಾರ್ಕ್ ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದರು.ಅವರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ […]

Advertisement

Wordpress Social Share Plugin powered by Ultimatelysocial