ಬೆಂಗಳೂರು : ಡ್ರಗ್ ಕೇಸ್ನಲ್ಲಿ ಬಟ್ಟೆ ವ್ಯಾಪಾರಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಫಜಲ್ ಬಂಧಿತ ಆರೋಪಿ. ಐಷಾರಾಮಿ ಕಾರ್ನಲ್ಲಿ ಡ್ರಗ್ ಸಮೇತ ಸಿಕ್ಕಿಬಿದಿದ್ದಾನೆ. ಬಾಪೂಜಿನಗರ ನಿವಾಸಿಯಾಗಿರುವ ಬಂಧಿತನ ತಂದೆ ಬಟ್ಟೆ ವ್ಯಾಪಾರಿಯಾಗಿದ್ದು, ಮಗ ಫೈಜಲ್ ಅಹ್ಮದ್ನಿಂದ ಡ್ರಗ್ ಮಾರಟ ಆರೋಪ ಮಾಡಲಾಗಿದೆ.ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದು, ಡ್ರಗ್ ಸಮೇತ ಫೈಜಲ್ ಸಿಕ್ಕಿ ಬಿದಿದ್ದಾನೆ. ಕೆಂಗೇರಿಯ ಲಕ್ಷ್ಮಿದೇವಿ ಟೆಂಪಲ್ ಬಳಿ ಫಾರ್ಚುನರ್ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ 5 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ನಲ್ಲಿ ಮಾರಾಟ ಮಾಡುತ್ತಿದ್ದ.
ಡ್ರಗ್ ಪೆಡ್ಲಿಂಗ್ಗೆ ಅಪ್ಪನ ಫಾರ್ಚುನರ್ ಕಾರಿನಲ್ಲೇ ಮಾರಾಟ ಮಾಡಿದ್ದ. ಖಚಿತ ಮಾಹಿತಿ ಹಿನ್ನಲೆ ದಾಳಿ ನಡೆಸಿ ಮಾದಕ ವಸ್ತು ವಶ ಪಡಿಸಿಕೊಳ್ಳಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada