ಇವಳು ಎರಡು ಮದುವೆಯಾದ ಮೇಲೆ ಟಿಂಡರ್ ಆಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್ನನ್ನು ಪರಿಚಯ ಮಾಡಿಕೊಂಡಳು. ನಂತರ ತಾನು ಅವಿವಾಹಿತೆ ಎಂದು ಸುಳ್ಳು ಹೇಳಿ 2020ರಲ್ಲಿ ಮೂರನೇ ಮದುವೆಯಾಗಿದ್ದಾಳೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅಜಾಮ್ ಪತ್ನಿ ನಿಧಾ ಖಾನ್ನ ವರ್ತನೆಯಿಂದ ಅನುಮಾನಗೊಂಡಿದ್ದಾನೆ. ಇದರಿಂದಾಗಿ ನಿಧಾ ಖಾನ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾನೆ. ಆಗ ಆಕೆ ಹಿಂದೆ ಎರಡು ಮದುವೆ ಆಗಿರುವ ವಿಷಯ ಗೊತ್ತಾಗಿದೆ. ಅಲ್ಲದೆ ಮೂರು ಮದುವೆಯಾರೂ ಬೇರೆ ಯುವಕರ ಜೊತೆ ಚಾಟಿಂಗ್, ಮೀಟಿಂಗ್ ಕೂಡ ಮಾಡಿರುವ ವಿಷಯ ಕೇಳಿ ಶಾಕ್ ಆಗಿದ್ದಾನೆ ಕೊನೆಗೆ ಬೇರೆ ಯುವಕರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅಜಾಮ್ಗೆ ಸಿಕ್ಕಿಬಿದ್ದಿದ್ದಾಳೆ. ಪತ್ನಿ ರಂಗಿನಾಟ ಕಣ್ಣಾರೆ ಕಂಡ ಪತಿ ಅಜಾಮ್ ಪತ್ನಿ ಹಾಗೂ ಆಕೆಯ ಹೊಸ ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada