ಕುಟುಂಬದವರು, ಸ್ನೇಹಿತರು ಹಾಗೂ ಪ್ರಿಯಕರನ ಜೊತೆ ಪ್ರತ್ಯೇಕವಾಗಿ ಕೇಕ್ ಕಟ್ ಮಾಡುವ ಮೂಲಕ ಅವರು ಜನ್ಮದಿನವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಕೆಲವು ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ. ಭಾನುವಾರ (ಮೇ 8) ಮಗಳ 25ನೇ ವರ್ಷದ ಹುಟ್ಟುಹಬ್ಬವನ್ನು ಆಮಿರ್ ಖಾನ್ ಹಾಗೂ ಮಾಜಿ ಪತ್ನಿ ರೀನಾ ದತ್ತ ಅವರು ಜೊತೆಯಾಗಿ ಸೇರಿ ಆಚರಿಸಿದ್ದಾರೆ. ಎರಡನೇ ಪತ್ನಿ ಕಿರಣ್ ರಾವ್ ಅವರ ಪುತ್ರ ಆಜಾದ್ ಖಾನ್ ಕೂಡ ಇರಾ ಖಾನ್ ಜನ್ಮದಿನವನ್ನು ಸಂಭ್ರಮಿಸಿದ್ದಾನೆ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಸ್ವಿಮಿಂಗ್ ಪೂಲ್ ಸಮೀಪವೇ ಕೇಕ್ ಕತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಇರಾ ಖಾನ್ ಅವರು ಬಿಕಿನಿ ಧರಿಸಿದ್ದಾರೆ. ಆಮಿರ್ ಖಾನ್ ಹಾಗೂ ಆಜಾದ್ ಖಾನ್ ಸ್ವಿಮ್ಮಿಂಗ್ ಡ್ರೆಸ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಆಮಿರ್ ಖಾನ್ ಪುತ್ರಿ ಇರಾ ಖಾನ್ ಅವರು ಬಾಲಿವುಡ್ಗೆ ಇನ್ನೂ ಕಾಲಿಟ್ಟಿಲ್ಲ. ಹಾಗಿದ್ದರೂ ಕೂಡ ಅವರು ಸೆಲೆಬ್ರಿಟಿ ಆಗಿದ್ದಾರೆ. ಸ್ಟಾರ್ ನಟನ ಪುತ್ರಿ ಎಂಬ ಕಾರಣಕ್ಕೆ ಅವರ ಕಡೆಗೆ ಎಲ್ಲರೂ ಗಮನ ಹರಿಸುತ್ತಾರೆ. ಒಂದಿಲ್ಲೊಂದು ಕಾರಣಕ್ಕೆ ಇರಾ ಖಾನ್ ಸುದ್ದಿ ಆಗುತ್ತಲೇ ಇರುತ್ತಾರೆ. ಫಿಟ್ನೆಸ್ ಕೋಚ್ ನೂಪುರ್ ಶಿಖಾರೆ ಜೊತೆಗೆ ಇರಾ ಖಾನ್ ಅವರು ಪ್ರೀತಿಯಲ್ಲಿ ಮುಳುಗಿರುವ ವಿಚಾರ ಕೂಡ ಈಗ ಗುಟ್ಟಾಗಿ ಉಳಿದಿಲ್ಲ. 25ನೇ ವರ್ಷದ ಹುಟ್ಟುಹಬ್ಬವನ್ನು ಅವರು ನೂಪುರ್ ಶಿಖಾರೆ ಜೊತೆಗೂ ಸೇರಿ ಆಚರಿಸಿಕೊಂಡಿದ್ದಾರೆ.
ಫ್ಯಾಮಿಲಿ ಜೊತೆ ಕೇಕ್ ಕತ್ತರಿಸುವಾಗ ಇರಾ ಖಾನ್ ಅವರು ಬಿಕಿನಿ ಧರಿಸಿದ್ದಕ್ಕೆ ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊನೇ ಪಕ್ಷ ಈ ಸಂದರ್ಭದಲ್ಲಾದರೂ ಸರಿಯಾಗಿ ಬಟ್ಟೆ ಧರಿಸಬೇಕಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು, ಇರಾ ಖಾನ್ ಅವರ ಪ್ರಿಯತಮ ನೂಪುರ್ ಶಿಖಾರೆ ಕೂಡ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಇರಾ ಖಾನ್ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಖಾಸಗಿ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವಲ್ಲಿ ಇರಾ ಖಾನ್ ಅವರು ಹಿಂದೇಟು ಹಾಕಿಲ್ಲ. ತಾವು ಎಂಕ್ಸೈಟಿ ಅಟ್ಯಾಕ್ನಿಂದ ಬಳಲುತ್ತಿರುವ ಬಗ್ಗೆ ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ನನಗೆ ಆಯಂಕ್ಸೈಟಿ ಸಮಸ್ಯೆ ಕಾಡುತ್ತಿದೆ. ನನಗೆ ಅಳುವ ಸಮಸ್ಯೆ ಇತ್ತು. ಆದರೆ, ಯಾವತ್ತೂ ಈ ರೀತಿ ಆಗಿರಲಿಲ್ಲ. ಆಯಂಕ್ಸೈಟಿ ಮತ್ತು ಆಯಂಕ್ಸೈಟಿ ಅಟ್ಯಾಕ್ ಮಧ್ಯೆ ವ್ಯತ್ಯಾಸವಿದೆ. ಆಯಂಕ್ಸೈಟಿ ಅಟ್ಯಾಕ್ಗೆ ಒಂದಷ್ಟು ಲಕ್ಷಣಗಳಿವೆ. ಎದೆ ಬಡಿತ ಹೆಚ್ಚುವುದು, ಉಸಿರಾಟದ ತೊಂದರೆ, ಅಳುವುದು. ಜತೆಗೆ ಎಲ್ಲವೂ ಮುಗಿದಂತೆ ಭಾಸವಾಗುತ್ತದೆ. ಮೊದಲು ತಿಂಗಳಿಗೆ ಒಮ್ಮೆ ಹೀಗೆ ಆಗುತ್ತಿತ್ತು. ಈಗ ನಿತ್ಯವೂ ಹೀಗೇ ಆಗುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದರು.
‘ನನಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಹೆದರಿಕೆಗಳೇನು ಎಂಬುದನ್ನು ನಾನು ಆಲೋಚಿಸುತ್ತಿರುತ್ತೇನೆ. ನನ್ನ ಜತೆಗೆ ನಾನು ಮಾತನಾಡಿಕೊಳ್ಳುತ್ತೇನೆ. ಅದು ಒಮ್ಮೆ ನಿಮ್ಮ ಮೇಲೆ ದಾಳಿ ಮಾಡಿದರೆ ಅದನ್ನು ನಿಲ್ಲಿಸಲು ದಾರಿಗಳು ಸಿಗುವುದಿಲ್ಲ’ ಎಂದು ಇರಾ ಖಾನ್ ಬರೆದುಕೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada