ಶೇನ್ ವಾರ್ನ್ ಸಾವನ್ನೇ ಮರೆಯಲು ಸಾಧ್ಯವಿಲ್ಲ.. ಬೆನ್ನಲ್ಲೇ ಮತ್ತೊಬ್ಬ ಕ್ರಿಕೆಟರ್ ನಿಧನ..!

ಕ್ರಿಕೆಟ್ ಅಭಿಮಾನಿಗಳಿಗೆ ಭರಿಸಲಾರದ ನೋವು. ಕ್ರಿಕೆಟ್ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಕಳೆದ ಕೆಲವು ದಿನಗಳಿಂದ ಆಘಾತದ ಸುದ್ದಿಯೇ ಸಿಗುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ನ ಕಳೆದುಕೊಂಡಿದ್ದ ಅಭಿಮಾನಿಗೆ ಇಂದು ಬೆಳ್ಳಂ ಬೆಳಗ್ಗೆ ಮತ್ತೊಂದು ಕಹಿ ಸುದ್ದಿ ಕಿವಿಗೆ ಬಿದ್ದಿದೆ.

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ, ಸ್ಪೋಟಕ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಇಂದು ನಿಧನರಾಗಿದ್ದಾರೆ. ಕ್ವೀನ್ಸ್ ಲ್ಯಾಂಡ್ ನ ಟೌನ್ ವಿಲ್ಸೆ ಬಳಿ ಕಾರು ಅಪಘಾತ ನಡರದಿದೆ. ಈ ಕಾರು ಅಪಘಾತದಲ್ಲಿ ಸೈಮಂಡ್ಸ್ ತೀವ್ರವಾಗಿ ಗಾಯಗೊಂಡಿದ್ದು, ನಿಧನರಾಗಿದ್ದಾರೆ.

ಕಾರಿನಲ್ಲಿ ಸೈಮಂಡ್ಸ್ ಒಬ್ಬರೆ ಇದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಹೊರಬಂದಿದೆ. ತೀವ್ರ ಪೆಟ್ಟಾಗಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳ್ಳಂಬೆಳಗ್ಗೆ ಈ ಸುದ್ದಿ ತಿಳಿದ ಕ್ರಿಕೆಟ್ ಕ್ಷೇತ್ರ ಮಂಕಾಗಿದೆ, ಅಭಿಮಾನಿಗಳು ಬೇಸರದಲ್ಲಿಯೇ, ಸಂತಾಪ ಸೂಚಿಸಿದ್ದಾರೆ.

ಸೈಮಂಡ್ಸ್ ಕ್ರಿಕೆಟ್ ಜೊತೆ ಜೊತೆಗೆ ವಿವಾದದ ಮೂಲಕವೂ ಸುದ್ದಿಯಾಗುತ್ತಿದ್ದರು. 2008ರ ಸಿಡ್ನಿ ಟೆಸ್ಟ್ ಮಂಕಿ ಗೇಟ್ ನ ವಿವಾದ ಇವರ ಜೀವನದುದ್ದಕ್ಕೂ ಉಳಿದು ಬಿಟ್ಟಿದೆ. ಇನ್ನು ಹರ್ಭಜನ್ ಸಿಂಗ್ ಮತ್ತು ಸೈಮಂಡ್ಸ್ ನಡುವಿನ ವಿವಾದವು ವಿಶ್ವ ಕ್ರಿಕೆಟ್ ಲೋಕದಲ್ಲಿ ಸಾಕಷ್ಟಯ ಸದ್ದು ಮಾಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

‘‘ಕಾಣೆಯಾದವರ ಬಗ್ಗೆ’’ ಚಂದನ್ ಮತ್ತು ಆಲ್ ಓಕೆ ಪ್ರಕಟಣೆ ...!

Sun May 15 , 2022
ಸ್ಯಾಂಡಲ್​ವುಡ್ ಸಂಗೀತ ಲೋಕದಲ್ಲಿ ಱಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್.. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ಱಪ್ ಸಾಂಗ್​ಗಳನ್ನ ಸೃಷ್ಟಿಸಲು ಮುಂದವರು.. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ ಱಪ್ ಸಾಂಗ್ಸ್​​ಗಳನ್ನ ಕನ್ನಡಿಗರಿಗೆ ಕೊಟ್ಟವರು ಕನ್ನಡದ ಜೊತೆಗೆ ಸಖಲ ಸಂಗೀತ ಪ್ರೀಯರಿಗೂ ಇಷ್ಟವಾದವರು.. ಈಗ ಇದೇ ಆಲ್ ಓಕೆ ಮತ್ತು […]

Advertisement

Wordpress Social Share Plugin powered by Ultimatelysocial