ಜೀವನದಲ್ಲಿ ಕಷ್ಟಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಂದೇಶ. ಕಷ್ಟಗಳೊಂದಿಗೆ ಹೋರಾಡುತ್ತಲೇ ಇರಿ. ನಾವು ಎಲ್ಲರಿಗಿಂತ ಶಕ್ತಿವಂತರಾಗುತ್ತೇವೆ. ಯಾವಾಗಲೂ ಸ್ಟ್ರಾಂಗ್ ಆಗಿರುತ್ತೇವೆ ಎಂದು ಸಮಂತಾ ಬರೆದುಕೊಂಡಿದ್ದಾರೆ.ಟಾಲಿವುಡ್ ನಟಿ ಸಮಂತಾ, ‘ಯಶೋದ’ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಒಂದೆಡೆ ಖುಷಿ, ಒಂದೆಡೆ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಬೇಸರ. ಇಷ್ಟಾದರೂ ಸಮಂತಾ ಎಲ್ಲವನ್ನೂ ಮರೆತು ಸಂತೋಷದ ಜೀವನ ಸಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಮ್ ತಮ್ಮ ಸ್ನೇಹಿತರ ಜೊತೆ ಸೇರಿ ಕ್ರಿಸ್ಮಸ್ ಆಚರಿಸಿದ್ಧಾರೆ.ಸಮಂತಾಗೆ ಕ್ರಿಸ್ಮಸ್ಗಾಗಿ ಸ್ನೇಹಿತರಿಂದ ಸಾಕಷ್ಟು ಗಿಫ್ಟ್ಗಳು ಬಂದಿವೆ. ಆ ಗಿಫ್ಟ್ಗಳಲ್ಲಿ ನಿರ್ದೇಶಕ ರಾಹುಲ್ ರವೀಂದ್ರನ್ ನೀಡಿರುವ ಗಿಫ್ಟ್ ಬಹಳ ವಿಶೇಷ ಎನ್ನಬಹುದು. ಏಕೆಂದರೆ ಸಮಂತಾ ಈ ಗಿಫ್ಟ್ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ವಿಶೇಷ ಗಿಫ್ಟ್ ನೀಡಿದ ರಾಹುಲ್ ರವೀಂದ್ರನ್ ಅವರಿಗೆ ಸ್ಯಾಮ್ ಥ್ಯಾಂಕ್ಸ್ ಹೇಳಿದ್ದಾರೆ. ರಾಹುಲ್ ರವೀಂದ್ರನ್ ತಾವು ನೀಡಿರುವ ಗಿಫ್ಟ್ ಬಾಕ್ಸ್ ಮೇಲೆ ಸಮಂತಾಗೆ ವಿಶೇಷ ಸಂದೇಶ ಬರೆದಿದ್ದಾರೆ. ಜೊತೆಗೆ ಆಕೆಯನ್ನು ‘ಉಕ್ಕಿನ ಮಹಿಳೆ’ ಎಂದಿದ್ದಾರೆ. ಇದು ಸಮಂತಾಗೆ ಬಹಳ ಖುಷಿ ನೀಡಿದೆ.ಗಿಫ್ಟ್ ಬಾಕ್ಸ್ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಸಮಂತಾ, ”ಜೀವನದಲ್ಲಿ ಕಷ್ಟಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಂದೇಶ. ಕಷ್ಟಗಳೊಂದಿಗೆ ಹೋರಾಡುತ್ತಲೇ ಇರಿ. ನಾವು ಎಲ್ಲರಿಗಿಂತ ಶಕ್ತಿವಂತರಾಗುತ್ತೇವೆ. ಯಾವಾಗಲೂ ಸ್ಟ್ರಾಂಗ್ ಆಗಿರುತ್ತೇವೆ.” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟಿಜನ್ಸ್ ನಿಜವಾಗಿಯೂ ನೀವು ಉಕ್ಕಿನ ಮಹಿಳೆಯೇ. ನಾವೂ ಕೂಡಾ ನಿಮ್ಮೊಂದಿಗೆ ಇದ್ದೇವೆ ಹೆದರಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…