ಪಾಂಗಾಳ ಶರತ್‌ ಶೆಟ್ಟಿ ಕೊಲೆ ವಿಚಾರಕ್ಕೆ ಸಂಬಂಧಿಸಿ ಬಿರುಸಿನ ತನಿಖೆ.

ಕಾಪು : ಪಾಂಗಾಳ ಶರತ್‌ ಶೆಟ್ಟಿ ಕೊಲೆ ವಿಚಾರಕ್ಕೆ ಸಂಬಂಧಿಸಿ ಬಿರುಸಿನ ತನಿಖೆಯ ವೇಳೆ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು ಆರೋಪಿಗಳ ಬೆನ್ನತ್ತಿ ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕಳೆದ ರವಿವಾರ ಸಂಜೆ ಶರತ್‌ ಶೆಟ್ಟಿ ಅವರನ್ನು ಪಾಂಗಾಳದ ಅಂಗಡಿಯೊಂದರ ಬಳಿಗೆ ಮಾತುಕತೆಗೆ ಕರೆದ ಯುವಕರ ತಂಡ ಬಳಿಕ ಅಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿತ್ತು.

ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತತ್‌ಕ್ಷಣದಿಂದಲೇ ಚುರುಕಿನ ತನಿಖೆ ಮುಂದುವರಿಸಿದ್ದರು.

ಹತ್ಯೆಗೆ ಸಂಬಂಧಿಸಿ ಸಂಶಯದ ಮೇರೆಗೆ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರಿಗೆ ಮಹತ್ವದ ವಿಚಾರಗಳು ದೊರಕಿವೆಯಾದರೂ ಅದನ್ನು ಇನ್ನೂ ಧೃಡಪಡಿಸಿಲ್ಲ. ಪ್ರಮುಖ ಆರೋಪಿಗಳ ಬೆನ್ನತ್ತಿರುವ ಪೊಲೀಸರಿಗೆ ಹತ್ಯೆಯ ಹಿಂದೆ ಹೊರಗಿನ ವ್ಯಕ್ತಿಗಳ ಕೈವಾಡ ಇರುವ ಬಗ್ಗೆಯೂ ಸುಳಿವು ಲಭ್ಯವಾಗಿದ್ದು ಆ ಆಯಾಮದಲ್ಲೂ ತನಿಖೆಯನ್ನು ಮುಂದುವರಿಸಿದ್ದಾರೆ.

ಉಡುಪಿ ಎಸ್ಪಿ, ಅಡಿಷನಲ್‌ ಎಸ್ಪಿ, ಕಾರ್ಕಳ ಡಿವೈಎಸ್ಪಿ ಸಹಿತ ಮೇಲಧಿಕಾರಿಗಳು ಕಾಪು ವೃತ್ತ ನಿರೀಕ್ಷಕರ ಕಛೇರಿಗೆ ಪದೇ ಪದೇ ಭೇಟಿ ನೀಡುತ್ತಿದ್ದು ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಹತ್ಯೆಯ ಹಿಂದಿನ ಸಂಪೂರ್ಣ ಚಿತ್ರಣ ಹೊರ ಬೀಳುವ ಸಾಧ್ಯತೆಗಳಿವೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೇತನ ಹೆಚ್ಚಳ, ಸೇವಾ ಭದ್ರತೆಗೆ ಸಿಎಂ ಬೊಮ್ಮಾಯಿ ಭರವಸೆ.

Fri Feb 10 , 2023
ಬೆಂಗಳೂರು: ಕಳೆದ ಐದು ದಿನಗಳಿಂದ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ಈ ನೌಕರರಿಗೆ ಸಂಬಂಧಸಿದಂತೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವಂತ ಶ್ರೀನಿವಾಸಚಾರಿ ವರದಿಯ ಶಿಫಾರಸ್ಸುಗಳಲ್ಲಿ ವೇತನ ಹೆಚ್ಚಳ ಹಾಗೂ 60 ವರ್ಷದವರೆಗೆ ಸೇವಾ ಭದ್ರತೆಯನ್ನು ಒದಗಿಸುವಂತ ಬೇಡಿಕೆ ಈಡೇರಿಸೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಈ ಕುರಿತಂತೆ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘವು ಮಾಹಿತಿ […]

Advertisement

Wordpress Social Share Plugin powered by Ultimatelysocial