ಹರಿಯಾಣದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು,

ಜೈಪುರ, ಫೆಬ್ರವರಿ. 17: ಹರಿಯಾಣದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಹರಿಯಾಣದಲ್ಲಿ ಸಜೀವ ದಹನ ಮಾಡಲಾಗಿದೆ.

ಗೋವು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಶಂಕಿಸಿ, ಇಬ್ಬರು ಮುಸ್ಲಿಮರನ್ನು ರಾಜಸ್ಥಾನದಿಂದ ಅಪಹರಿಸಲಾಗಿದೆ, ಬಳಿಕ ಅವರನ್ನು ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸಜೀವ ದಹನ ಮಾಡಿದ್ದಾರೆ.

ಮೃತರನ್ನು ನಾಸಿರ್ (27) ಮತ್ತು ಜುನೈದ್ (35) ಎಂದು ಗುರುತಿಸಲಾಗಿದ್ದು, ಇಬ್ಬರು ರಾಜಸ್ಥಾನದ ಗೋಪಾಲ್ ಗಡ್ ಗ್ರಾಮದ ನಿವಾಸಿಗಳು. ಬುಧವಾರ ತಡರಾತ್ರಿ ಗೋ ರಕ್ಷಕರ ಗುಂಪೊಂದು ಅವರನ್ನು ಅಪಹರಿಸಿದೆ ಎನ್ನಲಾಗಿದೆ. ನಂತರ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ವಾಹನದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ರಾಜಸ್ಥಾನ ಪೊಲೀಸರು ಇಲ್ಲಿಯವರೆಗೆ ಅಪಹರಣ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ಮೃತರ ಸಂಬಂಧಿಕರು ಬಜರಂಗದಳದ ಕಾರ್ಯಕರ್ತರು ಮತ್ತು ಗೋ ರಕ್ಷಕರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗುರುಗ್ರಾಮ್‌ನ ಬಜರಂಗದಳ ಸದಸ್ಯ ಮೋನು ಮನೇಸರ್ ಮತ್ತು ನುಹ್‌ನ ಶ್ರೀಕಾಂತ್ ಮರೋರಾ ಎಂಬ ಇಬ್ಬರು ಗೋ ರಕ್ಷಕರು ಕೊಲೆ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಲೋಹರು ಡಿಎಸ್‌ಪಿ ಜಗತ್ ಸಿಂಗ್, “ನಮಗೆ ಎರಡು ಸುಟ್ಟ ಮೃತ ದೇಹಗಳೊಂದಿಗೆ ಸುಟ್ಟ ಬೊಲೆರೊ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲಿಗೆ ಭೇಟಿ ನೀಡಿ, ಸ್ಥಳದಲ್ಲೇ ಸಿಎಫ್‌ಎಸ್‌ಎಲ್ ತಂಡವನ್ನು ಕರೆಸಿ, ವಾಹನವನ್ನು ಗುರುತಿಸಿದ್ದೇವೆ. ಮೃತರು ಅಪಘಾತದಿಂದ ಕಾರಿನಲ್ಲಿ ಸುಟ್ಟು ಹೋಗಿದ್ದಾರೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎಂಬುದು ನಮಗೆ ಇನ್ನೂ ಖಚಿತವಾಗಿಲ್ಲ. ಪ್ರಕರಣದ ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ” ಎಂದಿದ್ದಾರೆ.

ರಾಜಸ್ಥಾನದ ಭರತ್‌ಪುರದಲ್ಲಿ ಐಪಿಸಿ ಸೆಕ್ಷನ್ 143, 365, 367 ಮತ್ತು 368 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು, ಸಂತ್ರಸ್ತರ ವಿರುದ್ಧ ಯಾವುದೇ ಜಾನುವಾರು ಕಳ್ಳತನ ಅಥವಾ ಅಪರಾಧ ಇತಿಹಾಸದ ಬಗ್ಗೆ ಪೊಲೀಸರು ಇದುವರೆಗೆ ಸ್ಪಷ್ಟಪಡಿಸಿಲ್ಲ.

ಮೃತರ ಕುಟುಂಬಗಳ ಪ್ರಕಾರ, ನಾಸಿರ್ ಮತ್ತು ಜುನೈದ್ ತಮ್ಮ ಬೊಲೆರೋ ಜೀಪ್‌ನಲ್ಲಿ ಕೆಲವು ಗೃಹೋಪಯೋಗಿ ವಸ್ತುಗಳನ್ನು ತರಲು ಹತ್ತಿರದ ಗ್ರಾಮಕ್ಕೆ ಭೇಟಿ ಹೋಗಿದ್ದರು. ಆದರೆ, ವಾಪಸ್ ಬಂದಿರಲಿಲ್ಲ. ನಂತರ ಅವರ ಸಂಬಂಧಿಗೆ 8 ರಿಂದ 10 ಮಂದಿ ಇಬ್ಬರನ್ನು ಅಪಹರಣ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದಾದ ನಂತರ ಇಬ್ಬರ ಮೃತದೇಹಗಳು ಲೋಹರುದಲ್ಲಿ ಅವರ ಸುಟ್ಟ ವಾಹನ ಪತ್ತೆಯಾಗಿರುವ ಬಗ್ಗೆ ಕುಟುಂಬಕ್ಕೆ ಕರೆ ಬಂದಿದೆ.

ನಾಸಿರ್ ಅವರ ಸಹೋದರ ಹಮೀದ್ ಹೇಳುವಂತೆ, “ಅವರು ಬಡವರು, ಕಷ್ಟಪಟ್ಟು ತಮ್ಮ ಜೀವನವನ್ನು ನಡೆಸುತ್ತಿದ್ದರು. ಈ ಘಟನೆಯಿಂದ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ನಾಸಿರ್ ಇತ್ತೀಚೆಗೆ ಮದುವೆಯಾಗಿದ್ದರು, ಅವರ ಪತ್ನಿ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಜಾನುವಾರು ಕಳ್ಳಸಾಗಣೆಗೂ ನನ್ನ ಸಹೋದರನಿಗೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.

ಜುನೈದ್ ಪತ್ನಿ ಸಾಜಿದಾ ಕೂಡ “ಅವರು ಜುನೈದ್‌ನನ್ನು ಕೊಂದಿಲ್ಲ, ನನ್ನನ್ನು ಮತ್ತು ನನ್ನ ಮೂವರು ಮಕ್ಕಳನ್ನು ಸಹ ಕೊಂದಿದ್ದಾರೆ. ಜುನೈದ್ ದೇವರಿಗೆ ಭಯಪಡುವ, ಪ್ರಾಮಾಣಿಕ ವ್ಯಕ್ತಿ. ಕೆಲವರು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ನನಗೆ ಹೇಳಿದ್ದರು. ಅವರನ್ನು ಘನತೆಯಿಂದ ಸಮಾಧಿ ಮಾಡುವ ಅವಕಾಶವನ್ನೂ ಅವರು ನನಗೆ ಬಿಟ್ಟುಕೊಟ್ಟಿಲ್ಲ” ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಡಿನ ಜನರ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಬೊಮ್ಮಾಯಿ

Fri Feb 17 , 2023
ಬೆಂಗಳೂರು : ಇಂದು ಬೆಳಗ್ಗೆ 10.45 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಎರಡನೇ ಬಜೆಟ್ ಮಂಡಿಸಲಿದ್ದು, ಜನಪ್ರಿಯ ಯೋಜನೆಗಳನ್ನು ಘೋಷಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ ಬಜೆಟ್ ಮಂಡನೆಗೂ ಮುನ್ನ ಬೆಂಗೂರಿನ ಶ್ರೀಂಕಂಠೇಶ್ವರ ದೇವಾಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಇಂದು ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜನಪ್ರಿಯ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಬಜೆಟ್ ಮಂಡನೆ ಗೂಮುನ್ನ ದೇವಾಲಯಕ್ಕೆ ತೆರಳಿರುವ ಸಿಎಂ ನಾಡಿನ ಜನರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ.ಬೆಂಗಳೂರಿನ […]

Advertisement

Wordpress Social Share Plugin powered by Ultimatelysocial