ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಒಟ್ಟು 22 ಜನರಿಗೆ ಪಾಸಿಟಿವ್.

ರಾಜಧಾನಿ ಬೆಂಗಳೂರಿಗೆ ವಿದೇಶಿ ಪ್ರಯಾಣಿಕರೇ ಕಂಟಕ..
ಹೈರಿಸ್ಕ್ ದೇಶಗಳಿಂದ ಬಂದ ಮೂವರಿಗೆ ಕೊರೊನಾ ಪಾಸಿಟಿವ್
ಹೈರಿಸ್ಕ್ ರಾಷ್ಟ್ರಗಳಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಹೆಚ್ಚಾಯ್ತು ಕೊರೊನಾ

ಆಂಕರ್:
ರಾಜಧಾನಿ ಬೆಂಗಳೂರಿಗೆ ಹೊಸ ರೂಪಾಂತರ ಕೊರೊನಾ ತಳಿ ದಿನದಿಂದ ದಿನಕ್ಕೆ ಭಯ ಹುಟ್ಟಿಸುತ್ತಿದೆ. ಅದರಲ್ಲೂ ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರ ಆಗಮನ ಕಂಕವಾಗುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ರಾಜ್ಯಕ್ಕೆ ಬರುತ್ತಿರುವ ವಿದೇಶಿ ಪ್ರಯಾಣಿಕರಲ್ಲಿ ಪಾಸಿಟಿವ್ ಬರುತ್ತಿದ್ದು, ನೆನ್ನೆ ಮತ್ತೆ 3 ಪ್ರಯಾಣೀಕರಿಗೆ ಪಾಸಿಟಿವ್ ದೃಡವಾಗಿದ್ದು, ಏರ್ಪೋಟ್ನಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ.
ಲುಕ್…..
ವಿಜುಯಲ್ಸ್ ಪ್ಲೋ….

ವಾ.ಓ 1
ದೇಶದಲ್ಲಿ ಹೊಸ ಕೊರೋನಾ ರೂಪಾಂತರಿ ಬಿಎಫ್ 7 ಆತಂಕ ಜೋರಾಗಿದೆ. ಅದರಲ್ಲೂ ರಾಜ್ಯ ರಾಜಧಾನಿಗೆ ಹೈರಿಸ್ಕ್ ರಾಷ್ಟ್ರಗಳಿಂದ ಬರುತ್ತಿರೋ ಪ್ರಯಾಣಿಕರಿಂದ ಕಂಟಕವಾಗುವ ಸಾಧ್ಯತೆ ಇದೆ. ಅಂದಹಾಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನದಿಂದ ದಿನಕ್ಕೆ ಪಾಸಿಟಿವ್ ಸಂಖ್ಯೆ ಹೆಚ್ಚಾಗ್ತಿದೆ. ವಿದೇಶದಿಂದ ಬರುತ್ತಿರುವ ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ. ೨ ರಷ್ಟು ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಕಳೆದ ನವೆಂಬರ್ 23 ರಿಂದ ಇಲ್ಲಿಯವರೆಗೂ ಟೆಸ್ಟಿಂಗ್ ಮಾಡಿದ ಪೈಕಿ ಒಟ್ಟು 22 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವ್ ಬಂದ ಪ್ರಯಾಣಿಕರ ಮೇಲೆ ಈಗಾಗಲೇ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ‌. ಇನ್ನೂ ನೆನ್ನೆ ಹೈರಿಸ್ಕ್ ದೇಶಗಳಾದ ದುಬೈ, ಹಾಂಕಾಂಗ್, ಅಬುಧಾಬಿಯಿಂದ ಬಂದ ಪ್ರಯಾಣಿಕರ ಪೈಕಿ ತಲಾ ಒಬ್ಬಬ್ಬರಿಗೆ ಪಾಸಿಟಿವ್ ದೃಡವಾಗಿದ್ದು, ಮೂವರು ಪಾಸಿಟಿವ್ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ಇಟ್ಟಿದೆ.

ವಾ.ಓ 2
ಇನ್ನೂ ನೆನ್ನೆ ವಿದೇಶದಿಂದ ಬಂದ ಪ್ರಯಾಣಿಕರ ಪೈಕಿ ೧೦೭ ಜನರನ್ನು ಟೆಸ್ಟ್ ಗೆ ಒಳಪಡಿಸಲಾಗಿತ್ತು. ಇದರ ಪೈಕಿ ಮೂರು ಜನರಿಗೆ ಪಾಸಿಟೀವ್ ಬಂದಿದೆ. ಇನ್ನೂ ದಿನೇ ದಿನೇ ಪಾಸಿಟೀವ್ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಏರ್ಪೋರ್ಟ್ ನಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು ಇಬ್ಬರು ವೈದ್ಯರು, ೮ ಜನ ಹೆಲ್ತ್ ಇನ್ಸ್ ಪೆಕ್ಟರ್, ಡಾಟಾ ಆಪರೇಟರ್ ಗಳನ್ನು ನಿಯೋಜನೆ ಮಾಡಲಾಗಿದೆ. ಮೂರು ಪಾಳಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಏರ್ಪೋರ್ಟ್ ನಲ್ಲಿ ಇನ್ನಷ್ಟು ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ. ಮತ್ತೊಂದು ಕಡೆ ಪಾಸಿಟಿವ್ ಬಂದ ಪ್ರಯಾಣಿಕರನ್ನ ಏರ್ಪೊಟ್ನಿಂದ ಕರೆದುಕೊಂಡು ಹೋಗಲು ಎರಡು ಆಂಬ್ಯುಲನ್ಸ್ಗಳನ್ನ ನಿಯೋಜನೆ ಮಾಡಲಾಗಿದೆ.

ಬೈಟ್: ಲತಾ, ಬೆಂಗಳೂರು ಗ್ರಾಮಾಂತರ ಡಿಸಿ

ವಾ.ಓ 3
ಒಟ್ಟಾರೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್ ದೇಶಗಳಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಶೇ 2 ರಷ್ಟು ಸ್ಯಾಂಪಲ್ಗೆ ಪಾಸಿಟಿವಿಟಿ ಮೂರು ನಾಲ್ಕು ಕೇಸ್ಗಳು ಬರುತ್ತಿವೆ. ಆದ್ರೆ ವಿದೇಶಿ ಪ್ರಯಾಣಿಕರಿಗೆ ಇನ್ನಷ್ಟು ಟೆಸ್ಟ್ ಸಂಖ್ಯೆ ಹೆಚ್ಚಳ ಮಾಡಿದ್ರೆ ಮತ್ತಷ್ಟು ಪಾಸಿಟಿವ್ ದೃಢವಾಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತಷ್ಟು ಟೆಸ್ಟ್ ಸಂಖ್ಯೆ ಹೆಚ್ಚಳ ಮಾಡಿದ್ರೆ ಒಳಿತು.

ಗುರುಮೂರ್ತಿ ವಿ ಬೂದಿಗೆರೆ ಸ್ಪೀಡ್ ನ್ಯೂಸ್ ಕನ್ನಡ ದೇವನಹಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ

Fri Dec 30 , 2022
ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಅವ್ಯವಹಾರ ಪ್ರಕರಣದಲ್ಲಿ 1294 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಆಡಿಟ್ ರಿಪೋರ್ಟ್ ಬಂದಿದ್ದು, ಈ ಬಗ್ಗೆ ಎಫ್‌ಐಆರ್ ಆಗಿದೆ. 819 ಕೋಟಿ ರೂಪಾಯಿ ಸಾಲಪಡೆದವರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.1,194 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಐಡಿ, ಇಡಿ ಸೂಚನೆ ನೀಡಿದೆ. ಹರಾಜು ಹಾಕಲು ಕ್ರಮ ಕೈಗೊಳ್ಳಲಿದ್ದೇವೆ. ರಿಸರ್ವ್‌ ಬ್ಯಾಂಕ್ ವರದಿಕೊಟ್ಟ ಬಳಿಕ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು (Belagavi Session) […]

Advertisement

Wordpress Social Share Plugin powered by Ultimatelysocial