ಆಚಾರ್ಯ ಬಿ. ಎಂ.ಶ್ರೀ ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿದವರಲ್ಲಿಒಬ್ಬರು

ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ.
ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು 1884ರ ಜನವರಿ 3ರಂದು ಜನಿಸಿದರು. ಬಿ.ಎಂ.ಶ್ರೀ ಅವರು ಇಂಗ್ಲಿಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡ ಸಂಸ್ಕೃತ ಭಾಷೆಗಳಲ್ಲಿ ಗಾಢ ಪಾಂಡಿತ್ಯ ಪಡೆದಿದ್ದರು.
ಅಂದಿನ ದಿನದಲ್ಲಿ ಕನ್ನಡದಲ್ಲಿ ಪ್ರತಿಭಾರಾಹಿತ್ಯದಿಂದ, ಸಂಸ್ಕೃತ ಕಾವ್ಯದ ಬಡ ಅನುಕರಣೆಯಿಂದ ಕನ್ನಡ ಸಾಹಿತ್ಯ ದುರ್ಗತಿ ಹಿಡಿದು ಕುಳಿತಿತ್ತು. ಇಂತಹ ಕಾಲದಲ್ಲಿ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವಿಯರ್ ಸಾಹೇಬರು ವಿದ್ಯಾರ್ಥಿಗಳಿಗೆ ಆಧುನಿಕ ವಿಮರ್ಶನ ವಿಧಾನದಲ್ಲಿ ಬೋಧನೆ ಮಾಡಲು ಕೇವಲ ಕನ್ನಡ ಸಂಸ್ಕೃತ ಮಾತ್ರ ಗೊತ್ತಿದ್ದ ಅಂದಿನ ಪಂಡಿತರಿಂದ ಸಾಧ್ಯವಿಲ್ಲ ಎಂಬುದನ್ನು ಗಮನಿಸಿ ಬಿ. ಎಂ. ಶ್ರೀಕಂಠಯ್ಯನವರನ್ನು ಇಂಗ್ಲಿಷ್ ಮತ್ತು ಕನ್ನಡ ಅಧ್ಯಾಪಕ ಎಂದು 1909ರಲ್ಲಿ ನೇಮಿಸಿದರು. ನೇಮಕವಾದ ಎರಡು ವರ್ಷಗಳಲ್ಲಿ ಇವರ ಕನ್ನಡದ ಒಲವು, ಒಲ್ಮೆಗಳ ಕೀರ್ತಿ ಧಾರವಾಡದವರೆಗೂ ಹಬ್ಬಿತು. 1911ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದಲ್ಲಿ ಬಿ.ಎಂ.ಶ್ರೀ ತಮ್ಮ ಮೊತ್ತಮೊದಲನೆಯ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಯುಗಪ್ರವರ್ತಕ ಭಾಷಣವನ್ನು ಮಾಡಿದರು. ಆಗ ಮೈಸೂರು ವಿಶ್ವವಿದ್ಯಾನಿಲಯವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ಸ್ಥಾಪಿತವಾಗಿರಲಿಲ್ಲ.
19ನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಕಾವ್ಯರಚನೆ ಜಡಗಟ್ಟಿ ಅರ್ಥಹೀನವಾದ ಲಕ್ಷಣಗಳಿಗೆ ಕಟ್ಟುಬಿದ್ದು ಶುಷ್ಕವಾಗಿತ್ತು. ಇಂಗ್ಲಿಷ್ ವಿದ್ಯೆಯ ಪರಿಣಾಮವಾಗಿ ಹೊಮ್ಮಿ ಹರಡುತ್ತಿದ್ದ ಅಧುನಿಕ ವಿಚಾರಗಳುಳ್ಳ ಗದ್ಯಗ್ರಂಥಗಳ ರಚನೆಯ ಅಗತ್ಯ ಇದೆ ಎಂಬ ಅರಿವು ಕರ್ನಾಟಕದ ಎಲ್ಲ ಕಡೆಯ ವಿದ್ಯಾವಂತರಲ್ಲಿ ಮೂಡುತ್ತಿದ್ದು ಹಲವರು ಇಂತಹ ಪ್ರಯತ್ನಗಳಲ್ಲಿ ಪ್ರಾರಂಭಿಕವಾಗಿ ತೊಡಗಿದ್ದರು. ಈ ಕಾಲದಲ್ಲಿ ಹೊಸ ಬೆಳ್ಳಂಬೆಳಕನ್ನು ಹರಡುವ ಸೂರ್ಯನ ಹುಟ್ಟಿನಂತೆ ಬಂದದ್ದು ಶ್ರೀ ಅವರ ‘ಇಂಗ್ಲೀಷ್ ಗೀತಗಳು’. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮೊತ್ತ ಮೊದಲಿಗೆ ‘ಶ್ರೀ’ ಕಾವ್ಯನಾಮವನ್ನು ಧರಿಸಿದ ಬಿ.ಎಂ.ಶ್ರೀ ಅವರ ‘ಇಂಗ್ಲೀಷ್ ಗೀತಗಳು’ ಸಂಕಲನವನ್ನು ಪ್ರಕಟಿಸಿದಾಗ (1926) ‘ಮೂಡಿದನು ರವಿ ಮೂಡಿದನು’ ಹೊಸಗನ್ನಡ ಕವಿರವಿ ಮೂಡಿದನು. ಕನ್ನಡ ಕಾವ್ಯಪ್ರಪಂಚದಲ್ಲಿ ನವೋದಯ ಯುಗ ಪ್ರಾರಂಭವಾಯಿತು. ‘ಶ್ರೀ’ ಅದರ ಹರಿಕಾರ, ಪ್ರವರ್ತಕ ಎಂದು ಮುಂದೆ ಪ್ರಸಿದ್ಧರಾದರು. ‘ಇಂಗ್ಲೀಷ್ ಗೀತ’ಗಳನ್ನು ಪ್ರಕಟಿಸಿದಾಗ ಸಂಘದ ಅಧ್ಯಕ್ಷರಾಗಿದ್ದವರು ‘ಶ್ರೀ’ ಅವರ ಗುರುಗಳಾಗಿದ್ದ ಬೆಳ್ಳಾವೆ ವೆಂಕಟನಾರಾಯಣಪ್ಪನವರು; ಉಪಾಧ್ಯಕ್ಷರಾಗಿದ್ದವರು ಶಿಷ್ಯ ಟಿ. ಎಸ್. ವೆಂಕಣ್ಣಯ್ಯ, ಎಂಥ ಸುಯೋಗ!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾದಿರಾಜ್ ಪ್ರಸಿದ್ಧ ಹಿಂದಿ ಚಿತ್ರಗಳ ನಿರ್ದೇಶಕ

Tue Jan 3 , 2023
“ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಮಾತನ್ನು ಚಿತ್ರರಂಗಕ್ಕೆ ಅನ್ವಯಿಸಿದಾಗ ನೆನಪಾಗುವ ಪ್ರಮುಖ ಹೆಸರು ವಾದಿರಾಜ್. ‘ಅಪ್ಪ, ಅಮ್ಮ ಜಗಳದಲಿ ಕೂಸು ಬಡವಾಯ್ತು’ ಎಂಬಂತಹ ನೆನಪಿನಲ್ಲುಳಿಯುವ ಅಭಿನಯ, ಅವರ ಕುಳ್ಳಗಿನ ದುಂಡು ದುಂಡಾದ ಆಕೃತಿ ಇವುಗಳೆಲ್ಲದರ ಜೊತೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಶ್ರೇಷ್ಠ ಚಿತ್ರಗಳಾದ ನಾಂದಿ, ನಂದಾದೀಪ, ಸೀತಾ, ನಮ್ಮ ಮಕ್ಕಳು, ದಂಗೆ ಎದ್ದ ಮಕ್ಕಳು ಮುಂತಾದವುಗಳಿಂದ ಅವರು ಅಜರಾಮರರಾಗಿದ್ದಾರೆ. ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ನಟರಾದ ನರಸಿಂಹ ರಾಜು, […]

Advertisement

Wordpress Social Share Plugin powered by Ultimatelysocial