ವಜ್ರಾಸನದಲ್ಲಿ ಕುಳಿತು ತಿನ್ನೋದ್ರಿಂದ ಆಸಿಡಿಟಿ, ಗ್ಯಾಸ್ಟ್ರಿಕ್ ಹತ್ತಿರ ಸುಳಿಯೋದಿಲ್ಲ.

 

ಆಹಾರವನ್ನು ಸೇವಿಸಿದ ನಂತರ ಗ್ಯಾಸ್ ಆಸಿಡಿಟಿ ಆಗುವುದು ಸಾಮಾನ್ಯ. ಅದರಲ್ಲೂ ಕೆಲವರಿಗಂತೂ ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಇದು ದುರ್ಬಲ ಜೀರ್ಣಕ್ರಿಯೆಯ ಲಕ್ಷಣವಾಗಿದೆ. ಈ ಸಮಸ್ಯೆಯನ್ನು ಸಮಯಕ್ಕೆ ಸರಿಪಡಿಸದಿದ್ದರೆ ಇದು ಮಲಬದ್ಧತೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಾ ಯೋಗಾಸನದ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಬಹುದಂತೆ.ಇತ್ತೀಚಿನ ದಿನಗಳಲ್ಲಿ ಜನರು ಆಹಾರವನ್ನು ತಿನ್ನಲು ಡೈನಿಂಗ್ ಟೇಬಲ್ ಅಥವಾ ಸೋಫಾವನ್ನು ಬಳಸುತ್ತಾರೆ. ಕೆಲವರು ಹಾಸಿಗೆಯ ಮೇಲೆ ಕುಳಿತು ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಈ ಎಲ್ಲಾ ವಿಧಾನಗಳು ಆರೋಗ್ಯಕ್ಕೆ ಹಾನಿಕರ. ಯೋಗತಜ್ಞೆ ಜೂಹಿ ಕಪೂರ್ ವಜ್ರಾಸನದಲ್ಲಿ ಕುಳಿತು ಆಹಾರವನ್ನು ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.ವಜ್ರಾಸನವನ್ನು ಮಾಡಲು ಮೊದಲು ಚಾಪೆ ಅಥವಾ ಯಾವುದೇ ಮೆತ್ತಗೆಯ ಹಾಸಿನ ಮೇಲೆ ಕುಳಿತುಕೊಳ್ಳಿ.ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಹಿಮ್ಮಡಿಗಳನ್ನು ಸೊಂಟದ ಕೆಳಗೆ ತನ್ನಿ.ಅಡಿಭಾಗವನ್ನು ಆಕಾಶದ ಕಡೆಗೆ ಇಡಬೇಕು ಮತ್ತು ಎರಡೂ ಕಾಲ್ಬೆರಳುಗಳನ್ನು ಒಟ್ಟಿಗೆ ಸೇರಿಸಬೇಕು.ಸೊಂಟ ಮತ್ತು ಕುತ್ತಿಗೆಯನ್ನು ನೇರವಾಗಿ ಇರಿಸಿ, ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು.ವಜ್ರಾಸನ ಮಾಡುವುದರಿಂದ ಜೀರ್ಣ ಶಕ್ತಿ ಬಲಗೊಳ್ಳುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸೂಪ್‌ ಮತ್ತು ಸಲಾಡ್‌ ಅನ್ನು ಈ ರೀತಿ ಸೇವಿಸುವುದು ಅಪಾಯಕಾರಿ..!

Mon Feb 27 , 2023
ಸೂಪ್‌ ಮತ್ತು ಸಲಾಡ್‌ ಇವೆರಡೂ ಅತ್ಯಂತ ಆರೋಗ್ಯಕರ ಆಹಾರಗಳು. ಜೀರ್ಣಕ್ರಿಯೆಯನ್ನು ಸುಧಾರಿಸಬಲ್ಲ ಪದಾರ್ಥಗಳಿವು. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರಂತೂ ಸಾಮಾನ್ಯವಾಗಿ ಸೂಪ್ ಅಥವಾ ಸಲಾಡ್ ಅನ್ನು ಸೇವಿಸುತ್ತಾರೆ.ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಆದರೆ ಸೂಪ್‌ ಮತ್ತು ಸಲಾಡ್‌ ಸೇವನೆ ವೇಳೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಲಾಭದ ಬದಲು ನಷ್ಟ ಉಂಟಾಗುತ್ತದೆ.ತಜ್ಞರ ಅಭಿಪ್ರಾಯವೇನು ?ಆಹಾರ ತಜ್ಞರ ಪ್ರಕಾರ ಸಲಾಡ್ ಮತ್ತು ಸೂಪ್‌ಗಳು ಆರೋಗ್ಯಕರ. ಆದರೆ ಅವುಗಳನ್ನು ತಿನ್ನುವಾಗ ಮುನ್ನೆಚ್ಚರಿಕೆಗಳನ್ನು […]

Advertisement

Wordpress Social Share Plugin powered by Ultimatelysocial