ಸೌತ್​ ಇಂಡಿಯನ್​ ಹೀರೋ ಸಿನಿಮಾಗೆ ಆಯಕ್ಷನ್​​ ಪ್ರಿನ್ಸ್​ ಧ್ರುವ ಸರ್ಜಾ ಸಾಥ್​!

ಮೊನ್ನೆಯಷ್ಟೇ ಒಂದು ರೊಮ್ಯಾಂಟಿಕ್ ಮೆಲೋಡಿ ಸಾಂಗ್​​ನಿಂದ ಸುದ್ದಿಯಾಗಿದ್ದ ಸೌತ್ ಇಂಡಿಯನ್ ಹೀರೋ, ಇದೀಗ ಮಾಸ್ ಮಸಾಲ ಹಾಡಿನಿಂದ ಧೂಳೆಬ್ಬಿಸುತ್ತಿದ್ದಾರೆ. ಪಕ್ಕಾ ಲೋಕಲ್ ಸುಕ್ಕಾ ಹೀರೋಗೆ ಹ್ಯಾಟ್ರಿಕ್ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಸಾಥ್ ನೀಡಿದ್ದು, ಬೆನ್ನು ತಟ್ಟಿ ಮೆಚ್ಚುಗೆಯ ಮಾತುಗಳಾಡಿದ್ದಾರೆ.

ಫಸ್ಟ್ ಱಂಕ್ ರಾಜು ಹಾಗೂ ರಾಜು ಕನ್ನಡ ಮೀಡಿಯಂ ಚಿತ್ರಗಳಂತೆ ಒಂದೊಳ್ಳೆ ಕಾನ್ಸೆಪ್ಟ್ ಬೇಸ್ಡ್ ಮೇಲೆ ಬರ್ತಿರೋ ಸಿನಿಮಾ ಈ ಸೌತ್ ಇಂಡಿಯನ್ ಹೀರೋ. ಅಂದಹಾಗೆ ಈ ಸಿನಿಮಾಗೂ ಸಹ ಫಸ್ಟ್ ಱಂಕ್ ರಾಜು, ರಾಜು ಕನ್ನಡ ಮೀಡಿಯಂ ಚಿತ್ರಗಳ ಸಾರಥಿ ನರೇಶ್ ಕುಮಾರ್ ಅವರೇ ಌಕ್ಷನ್ ಕಟ್ ಹೇಳಿದ್ದಾರೆ.

ಹಿಲೇರಿಯಸ್ ಸಬ್ಜೆಕ್ಟ್​​ಗಳನ್ನು ಎಂಟರ್ಟೈನಿಂಗ್ ವೇನಲ್ಲಿ ಕನ್ವೇ ಮಾಡ್ತಿದ್ದ ನರೇಶ್ ಕುಮಾರ್, ಇದೀಗ ಅಂಥದ್ದೇ ಹೊಸತನದ ಕಥೆಯನ್ನ ಪ್ರಸ್ತುತ ಪಡಿಸುತ್ತಿದ್ದಾರೆ. ಸಾರ್ಥಕ್ ಹಾಗೂ ಕಾಶಿಮಾ ಜೋಡಿಯ ಸೌತ್ ಇಂಡಿಯನ್ ಹೀರೋ ಸಿನಿಮಾ ಈಗಾಗ್ಲೇ ಟೀಸರ್ ಹಾಗೂ ಫ್ಯಾನ್ ವಾರ್ ಪ್ರೋಮೋದಿಂದ ಇಂಟರೆಸ್ಟಿಂಗ್ ಅನಿಸಿತ್ತು. ಅದಕ್ಕೆ ಪೂರಕವಾಗಿ ಚಿತ್ರದ ಆಲ್ಬಂನ ಮೊದಲ ಸಾಂಗ್ ಎಲ್ಲರ ಮನಸ್ಸು ಗೆದ್ದಿತ್ತು. ಘಮ ಘಮ ಹಾಡಿನಿಂದ ನೋಡುಗರ ಕಣ್ಮನ ತಣಿಸಿದ್ದ ಸಾರ್ಥಕ್ ಹಾಗೂ ಕಾಶಿಮಾ ಜೋಡಿ, ಇದೀಗ ಮತ್ತೊಂದು ಹಾಡಿನಿಂದ ಸೌಂಡ್ ಮಾಡ್ತಿದ್ದಾರೆ. ಇದು ಹೀರೋ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಧ್ರುವ ಸರ್ಜಾ ಲಾಂಚ್ ಮಾಡೋ ಮೂಲಕ ಡ್ಯಾನ್ಸಿಂಗ್ ನಂಬರ್ ಮೈಲೇಜ್ ಮತ್ತಷ್ಟು ಹೆಚ್ಚಿದೆ. ಪೊಗರು ಚಿತ್ರದ ಹಾಡಿನಂತೆ ಮೈ ಕೈ ಕುಣಿಸುತ್ತಿದೆ ಪಕ್ಕಾ ಲೋಕಲ್ ಸುಕ್ಕಾ ಹೀರೋ ಸಾಂಗ್. ಲಾಜಿಕ್ ಮೇಲೆ ಎಲ್ಲವೂ ನಡೆಯುತ್ತೆ ಅಂದುಕೊಳ್ಳೋ ನಾಯಕ ನಟನಿಗೆ ಮ್ಯಾಜಿಕ್​ಗಳ ಬಗ್ಗೆ ಇರೋ ಕ್ಯೂರಿಯಾಸಿಟಿಯೇ ಈ ಸಿನಿಮಾ.

ಜಬರ್ದಸ್ತ್ ಡೈಲಾಗ್ಸ್, ಹೈ ವೋಲ್ಟೇಜ್ ಫೈಟ್ ಸೀಕ್ವೆನ್ಸ್ ಜೊತೆ ಹೀರೋಗಳ ಬಿಲ್ಡಪ್ಗಳ ಕುರಿತ ಮ್ಯಾಟರ್ ಹೇಳೋಕೆ ಹೊರಟಿದ್ದಾರೆ. ವಿಜಯ್ ಈಶ್ವರ್ ಸಾಹಿತ್ಯ, ಹರ್ಷವರ್ಧನ್- ಅನಿಲ್ ಸಂಗೀತ ಈ ಟೈಟಲ್ ಹಾಡಿಗಿದ್ದು, ಜೆಸ್ಸಿ ಗಿಫ್ಟ್- ಹರ್ಷವರ್ಧನ್ರ ಗಾಯನವಿದೆ. ರೊಟೀನ್ ಕಥೆಗಳಿಂದ ಬೇಸತ್ತಿರೋ ಸಿನಿಪ್ರಿಯರಿಗೆ ಕ್ರಿಯೇಟಿವ್ ಆಗಿ ಫ್ರೆಶ್ ಕಥೆಯನ್ನ ಕಾನ್ಸೆಪ್ಟ್ ನಿಂದ ಉಣಬಡಿಸಲಿರೋ ಈ ಚಿತ್ರತಂಡ, ಸ್ಯಾಂಪಲ್ಸ್​ನಿಂದ ಭರವಸೆ ಮೂಡಿಸಿದೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ಆದಷ್ಟು ಬೇಗ ಥಿಯೇಟರ್ ಅಂಗಳಕ್ಕೆ ಬರಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಚ್ಚ ಸುದೀಪ್ ಹಾಗೂ ಓಂ ಪ್ರಕಾಶ್ ರಾವ್ ಕಾಂಬಿನೇಷನ್‌ನಲ್ಲಿ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ.

Fri Feb 3 , 2023
ಕಿಚ್ಚ ಸುದೀಪ್ ಹಾಗೂ ಓಂ ಪ್ರಕಾಶ್ ರಾವ್ ಕಾಂಬಿನೇಷನ್‌ನಲ್ಲಿ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಅದರಲ್ಲೂ ‘ಹುಚ್ಚ’ ಸಿನಿಮಾ ಕಿಚ್ಚ ಸುದೀಪ್ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿತ್ತು. ಇಲ್ಲಿಂದ ಸುದೀಪ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಕಿಚ್ಚ ಸುದೀಪ್‌ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು, ಬೆರಳೆಣಿಕೆಯಷ್ಟು ಸಿನಿಮಾ ಆಗಿದ್ದರೂ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿವೆ. ‘ಹುಚ್ಚ’ ಬಳಿಕ ‘ಪಾರ್ಥ’ ಹಾಗೂ ‘ಹುಬ್ಬಳ್ಳಿ’ ಅಂತಹ ಸಿನಿಮಾಗಳು ಬಂದಿದ್ದವು. ಆದರೆ, ಈ ಸಿನಿಮಾಗಳ […]

Advertisement

Wordpress Social Share Plugin powered by Ultimatelysocial