ಅವಾರ್ಡ್‌ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ನಟ ಶಹನವಾಜ್ ಪ್ರಧಾನ್!

ಮುಂಬಯಿ:ಹತ್ತಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ, ಬಾಲಿವುಡ್‌ ನಟ ಶಹನವಾಜ್ ಪ್ರಧಾನ್ (56) ಹೃದಯಾಘಾತದಿಂದ ಶುಕ್ರವಾರ ( ಫೆ.17 ರಂದು) ಮೃತಪಟ್ಟಿದ್ದಾರೆ.

ಮುಂಬಯಿನಲ್ಲಿ ನಡೆಯುತ್ತಿದ್ದ ಅವಾರ್ಡ್‌ ಕಾರ್ಯಕ್ರಮವೊಂದರಲ್ಲಿ ಶಹನವಾಜ್ ಪ್ರಧಾನ್ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಜೊತೆಗಿದ್ದವರ ಬಳಿ ಎದೆನೋವು ಆಗುತ್ತಿದೆ ಎಂದು ಹೇಳಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಬದುಕು ಬರಲು ಸಾಧ್ಯವಾಗಿಲ್ಲ. ಹಠಾತ್ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಬಾಲಿವುಡ್‌ ನ ʼಫ್ಯಾಂಟಮ್ʼ, ʼರಾಯೆಸ್ʼ, ʼಮಿರ್ಜಾಪುರ್ʼ, ʼಟೋಟಾ ವೆಡ್ಸ್ ಮೈನಾʼ ಮುಂತಾದ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಮಿರ್ಜಾಪುರ್ ವೆಬ್‌ ಸರಣಿಯಲ್ಲಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಅವರ ನಿಧನಕ್ಕೆ ಮಿರ್ಜಾಪುರ್‌ ನಟ ರಾಜೇಶ್ ತೈಲಂಗ್,ನಟ ಯಶಪಾಲ್ ಶರ್ಮಾ ಸೇರಿದಂತೆ ಹತ್ತಾರು ಮಂದಿ ಸಂತಾಪ ಸೂಚಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾವಿರಾರು ವಿಧ್ಯಾರ್ಥಿಗಳ ಜೊತೆ ಕೂತು "ತನುಜಾ" ಸಿನಿಮಾ ವೀಕ್ಷಿಸಿದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು

Sat Feb 18 , 2023
ಸಾವಿರಾರು ವಿಧ್ಯಾರ್ಥಿಗಳ ಜೊತೆ ಕೂತು “ತನುಜಾ” ಸಿನಿಮಾ ವೀಕ್ಷಿಸಿದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಆರಂಭದಲ್ಲಿ ದೇವರ ಶ್ಲೋಕವನ್ನು ಪಟಿಸಿ ಆಶೀರ್ವಾದವನ್ನು ಪಡೆದು ಮಾತು ಪ್ರಾರಂಭಿಸಿದ ಸನ್ಮಾನ್ಯ ಸ್ವಾಮೀಜಿಯವರು “ತನುಜಾ” ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಕಠಿಣ ಪರಿಶ್ರಮ,ಎಕಾಗ್ರತೆ,ಗುರಿ ಮತ್ತು ಹೆತ್ತವರ ಹಾಗೂ ಗುರುವಿನ ಆಶೀರ್ವಾದಗಳ ಅದ್ಭುತ ಕಥನ ಈ ತನುಜಾ ಸಿನಿಮಾ ಎಂದು ಹೊಗಳಿದರು. ಮಾತುಗಳ ನಡುವೆ,ತಾವು ತಮ್ಮ ಸನ್ಯಾಸಪೂರ್ವದ ಜೀವನಕ್ಕೆ ಸಂಬಧಿಸಿದ ಘಟನೆಯನ್ನು ತಾನು […]

Advertisement

Wordpress Social Share Plugin powered by Ultimatelysocial