ಮದ ಏರಿಸಲು ಬರಲಿದ್ದಾನೆ ಮದಗಜ – ಟೀಸರ್‌ ಜಲಕ್‌ ಇದೇ ಅಕ್ಟೋಬರ್‌ 14ಕ್ಕೆ

ಸ್ಯಾಂಡಲ್‌ ವುಡ್‌ ನಲ್ಲಿ ಮುಂಬರುತ್ತಿರುವ ಚಿತ್ರಗಳು ಬಹು ಬೇಡಿಕೆ ಹೊಂದಿವೆ . ಅದರಲ್ಲೂ ಶ್ರೀಮುರುಳಿ ಅಭಿನಯಿಸುತ್ತಿರುವ ಮದಗಜ ಸಿನಿಮಾ ಬಹುನಿರೀಕ್ಷೆ ಹುಟ್ಟುಹಾಕಿದೆ.ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದ ಟೀಸರ್  ಅಕ್ಟೋಬರ್‌ 14 ಸಂಜೆ 5:05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಕೇಳುಬಂದಿದೆ. ಕೆಲ ತಿಂಗಳ ಹಿಂದೆ ಈ ಸಿನಿಮಾ ಫಸ್ಟ್ ಲುಕ್ ಟೀಸರ್ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಮಾಡಿದ್ರು. ಟಾಲಿವುಡ್ ಹಾಗೂ ಕಾಲಿವುಡ್ ಸಿನಿಪ್ರೀಯರಿಂದ ಈ ಟೀಸರ್ ಗೆ ಬಹಳಷ್ಟು ಮೆಚ್ಚುಗೆ ಸಿಕ್ಕಿದೆ. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಹವಾ ಅಂದ್ರೆ ಹವಾ ಡಿ ಬಾಸ್‌ ಹವಾ - ಅಕ್ಟೋಬರ್ 15 ರಂದು ದರ್ಶನ್ 'ಕ್ರಾಂತಿ' ಗೆ ಮುಹೂರ್ತ

Tue Oct 12 , 2021
  ಡಿ ಬಾಸ್‌ ಸಿನಿಮಾ ಅಂದ್ರೆನೇ ಹಾಗೆ ಮಾಸ್‌ ಅಭಿಮಾನಿಗಳಿಗೆ ಈ ಮಾಸ್‌ ಹೀರೋ ಅಂದ್ರೆ ಅದೇನೋ ಹುಚ್ಚು. ಇನ್ನು ಇವರ ಸಿನಿಮಾದ ಸಣ್ಣ ಸುಳಿವು ಬಂದ್ರು ಹಬ್ಬದಂತೆ ಸಂಭ್ರಮಿಸುತ್ತಾರೆ. ಹೀಗಾಗಿ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾ ತಂಡ ಗುಡ್ ನ್ಯೂಸ್ ನೀಡಿದೆ. ಈ ಹಿಂದೆ ಕ್ರಾಂತಿ ಚಿತ್ರಕ್ಕೆ D 55 ಎಂಬ ಹೆಸರಿನ ಪೋಸ್ಟ್‌ ಬಿಡುಗಡೆ ಮಾಡಿದ್ರು.ಅಲ್ಲೇ ಶುರುವಾಯ್ತು ನೋಡಿ  ದರ್ಶನ್‌ ಹವಾ .ಇದೀಗ ಅಕ್ಟೋಬರ್ 15 ರ ವಿಜಯದಶಮಿಯ […]

Advertisement

Wordpress Social Share Plugin powered by Ultimatelysocial