ಪಾಕ್ ಹಾದಿಯಲ್ಲಿ ಅಫ್ಘಾನ್ ಸರ್ವನಾಶವಾಗುತ್ತಾ ಮತ್ತೊಂದು ದೇಶ..?

ಫ್ಘಾನಿಸ್ತಾನದ  ಆರ್ಥಿಕ ಪರಿಸ್ಥಿತಿ  ತೀವ್ರವಾಗಿ ಹದಗೆಟ್ಟಿದ್ದು ಬಡತನದಿಂದ  ಜನರು ಕಂಗೆಟ್ಟುಹೋಗಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ವ ಶಪಡಿಸಿಕೊಂಡ ಮೇಲಂತೂ ಜನರು ಎರಡು ಹೊತ್ತಿನ ಊಟಕ್ಕೂ  ಪರದಾಡುವ ಪರಿಸ್ಥಿತಿ ಬಂದಿದೆ.

ಅದರಲ್ಲೂ ಒಂಟಿ ಮಹಿಳೆಯರು ಹಾಗೂ ವಿಧವೆಯರ  ಪಾಡು ಹೇಳತೀರದಾಗಿದೆ.

ಇಲ್ಲಿನ ಹೆರಾತ್‌ನಲ್ಲಿ ವಾಸಿಸುತ್ತಿರುವ ಮಹಿಳೆ ಜಮೀಲಾ. ಎಂಟು ವರ್ಷದ ಹಿಂದೆ ಆಕೆಯ ಪತಿ ಆತ್ಮಹತ್ಯಾ ದಾಳಿಯೊಂದರಲ್ಲಿ ಸಾವಿಗೀಡಾಗಿದ್ದ. ಆಕೆಗೆ 18 ವರ್ಷದ ಅಂಧ ಮಗಳಿದ್ದಾಳೆ. ಹಾಗೆಯೇ ಮಗ 20 ವರ್ಷದವನಾಗಿದ್ದು ಮೈನಿಂಗ್‌ ಸ್ಫೋಟದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಜಮೀಲಾ ಮನೆಗೆಲಸದವಳಾಗಿ ಜೀವನ ಸಾಗಿಸುತ್ತಿದ್ದಳು. ಕೆಲವಷ್ಟು ಮನೆಗಳಲ್ಲಿ ಬ್ರೆಡ್ ಬೇಯಿಸುತ್ತಿದ್ದಳು.

ಹೆರಾತ್ ವಿಶ್ವವಿದ್ಯಾನಿಲಯದ ಮಾಜಿ ಉಪನ್ಯಾಸಕ ಅಹ್ಮದ್ ನಡೆಸಿದ ಸಂಶೋಧನೆಯ ಪ್ರಕಾರ ಈ ಆದಾಯದಿಂದ ಆಕೆ ತನ್ನ ಮಗಳು ಮತ್ತು ಮಗನನ್ನು ನೋಡಿಕೊಂಡು ಜೀವನ ಸಾಗಿಸಲು ಸಾಧ್ಯವಾಗಿತ್ತು.ಆದ್ರೆ ಸದ್ಯದ ಪರಿಸ್ಥಿತಿಯಿಂದಾಗಿ ಜಮೀಲಾ ತನ್ನ ಗ್ರಾಹಕರನ್ನು ಕಳೆದುಕೊಂಡಿದ್ದಾಳೆ. ಅವಳು ತನ್ನ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದೇ ಹೆಣಗಾಡುತ್ತಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಕಿ ಆರಿಸಲು 8 ಗಂಟೆಗಳ ನಿರಂತರ ಕಾರ್ಯಾಚರಣೆ

Sat Feb 11 , 2023
  ಚಿಕ್ಕಮಗಳೂರು, ಫೆಬ್ರವರಿ 11: ಮೀಸಲು ಅರಣ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೀಸಲು ಅರಣ್ಯ ಚುರ್ಚೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ಪಕ್ಕದಲ್ಲೇ ಇರುವ ರಿಸರ್ವ್ ಫಾರೆಸ್ಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅರಣ್ಯ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. […]

Advertisement

Wordpress Social Share Plugin powered by Ultimatelysocial