ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ, ವಿಶೇಷತೆಗಳು

ಶಿವಮೊಗ್ಗ, ಡಿಸೆಂಬರ್ 26; ಕರ್ನಾಟಕದ ಎರಡನೇ ವಿಸ್ಟಾಡೋಮ್ ರೈಲು ಬೋಗಿ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿತು. ಮೊದಲ ದಿನವೇ ವಿಸ್ಟಾಡೋಮ್ ಬೋಗಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೈಫೈ ಸೌಲಭ್ಯದ ಜೊತೆಗೆ ರೈಲು ಪ್ರಯಾಣಕ್ಕೆ ಹೊಸ ಅನುಭವ ನೀಡಲಿದೆ.

ಶಿವಮೊಗ್ಗ-(ಯಶವಂತಪುರ) ಇಂಟರ್ ಸಿಟ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದೆ.

ಶನಿವಾರ ಯಶವಂತಪುರದಿಂದ ಶಿವಮೊಗ್ಗಕ್ಕೆ ಆಮಿಸಿದ ರೈಲಿನಲ್ಲಿ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು.

ಮೊದಲ ಟ್ರಿಪ್‌ನಲ್ಲಿ ಶಿವಮೊಗ್ಗಕ್ಕೆ 7 ಪ್ರಯಾಣಿಕರು ವಿಸ್ಟಾಡೋಮ್ ಬೋಗಿಯಲ್ಲಿ ಪ್ರಯಾಣ ಮಾಡಿದ್ದಾರೆ. ಶಿವಮೊಗ್ಗ-ಯಶವಂತಪುರ ನಡುವೆ 8 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಂದು ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಿಸ್ಟಾಡೋಮ್ ಬೋಗಿ ಬಗ್ಗೆ ಸಾರ್ವಜನಿಕರು, ರೈಲ್ವೆ ಇಲಾಖೆ ಸಿಬ್ಬಂದಿ ಕುತೂಹಲ ವ್ಯಕ್ತಪಡಿಸಿದರು. ಶಿವಮೊಗ್ಗಕ್ಕೆ ರೈಲು ಬರುತ್ತಿದ್ದಂತೆ ವಿಸ್ಟಾಡೋಮ್ ಬೋಗಿ ಹತ್ತಿದ ಜನರು, ಅದರ ವಿಶೇಷತೆಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ರೈಲ್ವೆ ಬೋಗಿಯ ತುಂಬೆಲ್ಲ ಓಡಾಡಿ, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಈ ಬೋಗಿಯಲ್ಲಿ ಏನೆಲ್ಲ ವಿಶೇಷತೆಗಳಿವೆ
 ವಿಸ್ಟೋಡಾಮ್ ಬೋಗಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. 44 ಸೀಟರ್ ಬೋಗಿಯಲ್ಲಿ ಎಲ್ಲವೂ ಆಟೋಮೆಟಿಕ್ ವ್ಯವಸ್ಥೆ. ಬೋಗಿಯೊಳಗೆ ಹೋಗುತ್ತಿದ್ದಂತೆ ಗಾಜಿನ ಬಾಗಿಲು ತನ್ನಿಂತಾನೆ ತೆರೆದುಕೊಳ್ಳುತ್ತದೆ. ಲಗೇಜ್ ಇಡಲು ಪ್ರತ್ಯೇಕ ಕಂಪಾರ್ಟ್‌ಮೆಂಟ್ ವ್ಯವಸ್ಥೆ ಇದೆ. ಇನ್ನು, ಎರಡು ಬದಿಯಲ್ಲೂ ಎರಡು ಸೀಟರ್‌ ಸುಖಾಸನಗಳಿವೆ. ಈ ಆಸನಗಳು ರೈಲಿನ ಕಿಟಕಿಯ ಕಡೆಗೆ ತಿರುಗುತ್ತವೆ.

ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ ಇದೆ. ತಿಂಡಿ, ತಿನಿಸಿಗಳನ್ನು ಇಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ. ವಿಸ್ಟಾಡೋಮ್ ಬೋಗಿಯಲ್ಲಿ ದೊಡ್ಡ ಗಾಜಿನ ಕಿಟಕಿಗಳಿವೆ. ಮೇಲ್ಭಾಗದಲ್ಲಿಯೂ ಗಾಜುಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತು ಆಕಾಶದೆಡೆಗೆ ಗಮನ ನೆಡಬಹುದಾಗಿದೆ.

ಪುಟ್ಟ ಕಿಚನ್, ಡಿಫರೆಂಟ್ ವಿನ್ಯಾಸದ ಟಾಯ್ಲೆಟ್:

ವಿಸ್ಟೋಡಾಮ್ ಬೋಗಿಯ ಒಂದು ಕೊನೆಯಲ್ಲಿ ಸಂಪೂರ್ಣ ದೊಡ್ಡ ಗಾಜು ಅಳವಡಿಸಲಾಗಿದೆ. ಹಾಗಾಗಿ ರೈಲು ಚಲಿಸುತ್ತಿದ್ದಾಗ ಬೋಗಿಯ ಕೊನೆಯಲ್ಲಿ ನಿಂತು ಸುತ್ತಮುತ್ತಲ ಪರಿಸರವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ಈ ಜಾಗ ಅತ್ಯಂತ ಪ್ರಿಯವಾಗಲಿದೆ.

ಇನ್ನು, ರೈಲಿನಲ್ಲಿ ಪುಟ್ಟದೊಂದು ಕಿಚನ್ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜರೇಟರ್, ಮೈಕ್ರೋ ವೇವ್ ವೋವನ್ ಇಡಲಾಗಿದೆ. ಇನ್ನು, ಈ ಬೋಗಿಯಲ್ಲಿನ ಟಾಯ್ಲೆಟ್‌ಗಳ ವಿನ್ಯಾಸವೂ ವಿಭಿನ್ನವಾಗಿದೆ. ಸ್ಲೈಡಿಂಗ್ ಬಾಗಿಲುಗಳು, ಆಟೊಮೆಟೆಡ್ ಲೈಟುಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಗಳು ಪ್ರಯಾಣಿಕರಿಗೆ ಹಿತವಾದ ಅನುಭವ ನೀಡಲಿದೆ.

ನಿತ್ಯ ಸಂಚರಿಸಲಿದೆ ವಿಸ್ಟಾಡೋಮ್ ಬೋಗಿ

ಈವರೆಗೂ ಬೆಂಗಳೂರು – ಮಂಗಳೂರು ರೈಲಿನಲ್ಲಿ ಮಾತ್ರ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಈಗ ಯಶವಂತಪುರ – ಶಿವಮೊಗ್ಗ – ಯಶವಂತಪುರ ಇಂಟರ್ ಸಿಟಿ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಈ ಮೂಲಕ ವಿಸ್ಟಾಡೋಮ್ ಬೋಗಿಯೊಂದಿಗೆ ಸಂಚರಿಸುವ ರಾಜ್ಯದ ಎರಡನೇ ರೈಲು ಇದಾಗಿದೆ. ಈ ರೈಲು ಪ್ರತಿದಿನ ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 1.30ರ ಹೊತ್ತಿಗೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.

ಪ್ರಯಾಣಿಕರಿಗೆ ಹೊಸ ಅನುಭವ:

2022ರ ಮಾರ್ಚ್ 31ರವರೆಗೆ ಈ ರೈಲಿನಲ್ಲಿ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಟೂರಿಸ್ಟ್‌ಗಳಿಗೆ, ಪರಿಸರ ಪ್ರಿಯರಿಗೆ ವಿಸ್ಟಾಡೋಮ್ ಬೋಗಿಯಲ್ಲಿನ ಪ್ರಯಾಣ ಹಿತವಾದ ಅನುಭವ ನೀಡಲಿದೆ. ಹಾಗಾಗಿ ಈ ಬೋಗಿ ಇರುವ ಸಂಚಾರವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸದೆ ತಾಳಗುಪ್ಪದವರೆಗೆ ವಿಸ್ತರಣೆ ಮಾಡಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ. ಮಲೆನಾಡಿನ ನೇಸರವನ್ನು ಕಣ್ತುಂಬಿಕೊಳ್ಳಲು ಈ ಮಾರ್ಗದ ಅವಕಾಶವಿದೆ. ಅಲ್ಲದೆ ಈ ಮಾರ್ಗದಲ್ಲಿ ಮಳೆಗಾಲದ ಹೊತ್ತಿಗೆ ವಿಸ್ಟೋಡಾಮ್ ಬೋಗಿಯ ಪ್ರಯಾಣ ಆಹ್ಲಾದಕರ ಎನಿಸಲಿದೆ.

ಪ್ರವಾಸೋದ್ಯಮಕ್ಕೆ ಅನುಕೂಲ

ವಿಸ್ಟೋಡಾಮ್ ಬೋಗಿಯನ್ನು ತಾಳಗುಪ್ಪದವರೆಗೆ ವಿಸ್ತರಣೆ ಮಾಡಿದರೆ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕಿದೆ. ಮೊದಲ ದಿನದಿಂದಲೇ ಈ ಬೋಗಿಗೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿರುವುದು ರೈಲ್ವೆ ಇಲಾಖೆಗೆ ಸಮಾಧಾನ ತಂದಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುವ ಅಂದಾಜಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಉಡುಪಿಯ ಕೃಷ್ಣ ಮಠ ಸ್ವಾಧೀನಕ್ಕೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು: ಪ್ರಮೋದ್ ಮಧ್ವರಾಜ್ ಸ್ಫೋಟಕ ಮಾಹಿತಿ

Sun Dec 26 , 2021
ಉಡುಪಿ: ಉಡುಪಿಯ ಶ್ರೀಕೃಷ್ಣ ಮಠವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಆಲೋಚಿಸಿತ್ತು. ಆದರೆ ಶ್ರೀ ಕೃಷ್ಣ ಮಠಕ್ಕೆ ತೊಂದರೆಯಾದರೆ ಮೊದಲು ನಾನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೃಷ್ಣಮಠದಲ್ಲಿ ನಡೆದ ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಕಾರ್ಯಕ್ರಮ ‘ವಿಶ್ವಾರ್ಪಣಂ’ನಲ್ಲಿ ಮಾತನಾಡಿದ ಅವರು, ಕೃಷ್ಣಮಠವನ್ನು ಸರ್ಕಾರದ ಅಧೀನಕ್ಕೆ ತರಲು ಸಿದ್ದರಾಮಯ್ಯ ಮುಂದಾಗಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, […]

Advertisement

Wordpress Social Share Plugin powered by Ultimatelysocial