ಚೀನಾ ವಿಮಾನ ನಿಲ್ದಾಣದ ರನ್ ವೇನಲ್ಲಿ ಹೊತ್ತಿ ಉರಿದ ಟಿಬೆಟ್ ಏರ್ ಲೈನ್ಸ್ ವಿಮಾನ!

ಬೀಜಿಂಗ್: ಟಿಬೆಟ್ ಏರ್ ಲೈನ್ಸ್ ವಿಮಾನವೊಂದು ರನ್ ವೇಯಿಂದ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಚೀನಾದ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

113ಮಂದಿ ಪ್ರಯಾಣಿಕರು ಮತ್ತು ಒಂಬತ್ತು ಸಿಬಂದಿಗಳಿದ್ದ ಟಿಬೆಟ್ ಏರ್ ಲೈನ್ಸ್ ವಿಮಾನ ಚೀನಾದ ನೈರುತ್ಯ ನಗರವಾದ ಚಾಂಗ್ ಕ್ವಿಂಗ್ ನಿಂದ ಟಿಬೆಟ್ ನ ನೈಂಗ್ ಚಿಗೆ ತೆರಳಲು ಸಿದ್ದವಾಗಿದ್ದು, ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿರುವುದಾಗಿ ಏರ್ ಲೈನ್ಸ್ ಪ್ರಕಟಣೆಯಲ್ಲಿ ವಿವರಿಸಿದೆ.

ವಿಮಾನದಲ್ಲಿದ್ದ ಎಲ್ಲಾ 113 ಪ್ರಯಾಣಿಕರು, 9 ಸಿಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ವರದಿ ತಿಳಿಸಿದೆ. ಕೆಲವು ವರದಿಗಳ ಪ್ರಕಾರ ಗಾಯಗೊಂಡಿರುವ 40 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟಿಬೆಟ್ ಏರ್ ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ಹೊಗೆ ಉಗುಳುತ್ತಿರುವ ದೃಶ್ಯ ಸೆರೆಯಾಗಿದೆ. ಭೀತಿಗೊಳಗಾಗಿರುವ ಪ್ರಯಾಣಿಕರು ರನ್ ವೇಯಿಂದ ಹೊರಗೆ ಓಡಿ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಪ್ರಧಾನಿಯಾಗಿ 8 ವರ್ಷ, ಬಿಜೆಪಿಯಿಂದ ದೇಶವ್ಯಾಪಿ ಅಭಿಯಾನ!

Thu May 12 , 2022
  ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೇ 26 ಕ್ಕೆ 8 ವರ್ಷ ಪೂರ್ಣಗೊಳ್ಳಲಿದೆ. ಎರಡನೇ ಅವಧಿಯಲ್ಲಿ ಅವರು ಪ್ರಧಾನಿಯಾಗಿ ಮೇ 30 ಕ್ಕೆ 3 ವರ್ಷ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಮೇ 30 ರಿಂದ 15 ದಿನಗಳ ಕಾಲ ದೇಶ ವ್ಯಾಪಿ ಅಭಿಯಾನ ಕೈಗೊಳ್ಳಲಾಗಿದೆ. ಮೋದಿ ಪ್ರಧಾನಿಯಾಗಿ 8 ವರ್ಷ ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ಮೇ 30 ರಿಂದ ಜೂನ್ 15 […]

Advertisement

Wordpress Social Share Plugin powered by Ultimatelysocial