ಕುರುಬರ ಕುಡಿ ಆಲಂಬಾಡಿ ಜುಂಜೇಗೌಡರು, ಮಲೆಮಹದೇಶ್ವರ ದೇವಸ್ಥಾನದ ನಿರ್ಮಾತೃ.

ಸಾಂಸ್ಕ್ರತಿಕ ನಾಯಕ ಅಂದಾಕ್ಷಣ ಒಬ್ಬನೇ ಇತಿಹಾಸ ಪುರುಷನ ಹೆಸರನ್ನು ಹೇಳುವುದು ಇತರೆ ನಾಯಕರಿಗೆ ಮಾಡುವ ಅವಮಾನ. ಅಂತೆಯೇ, ಪಾಳೆಗಾರರನ್ನು ಪ್ರಭು, ಸಣ್ಣ ಭೂ ಪ್ರದೇಶವನ್ನು ಆಳಿದವರನ್ನು ಹೃದಯ ಸಾಮ್ರಾಟ್ ಎನ್ನುವ ನಾವು ಮಿಕ್ಕುಳಿದ ಗಡಿ ಭಾಗದ ಪಾಳೆಗಾರರನ್ನು‌ ಮರೆತಿದ್ದೇವೆ. ಇವತ್ತಿಗೆ ಒಂದು ಕಾಂಪೌಂಡ್ ಗೋಡೆಗೆ ಬಣ್ಣ ಬಳಿಸಿದವನು‌ ತನ್ನ ಹೆಸರನ್ನು‌ ದೊಡ್ಡದಾಗಿ ಬರೆಸಿಕೊಂಡಿರುತ್ತಾನೆ.‌ನಿಮಗೆಲ್ಲಾ ಗೊತ್ತಿರುವ ಹಾಗೆ ಮೈಸೂರು ಪ್ರಾಂತ್ಯದ ಮತ್ತು ರಾಜ್ಯದ ಅತ್ಯಂತ ಶ್ರೀಮಂತ ಮುಜರಾಯಿಗೆ ಒಳಪಟ್ಟ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ. ಅಸಲಿಗೆ ಇದನ್ನು ಕಟ್ಟಿದವರಾರು? ಅದರ ಹಿನ್ನೆಲೆ ಏನು‌ ಎನ್ನುವುದು ಇನ್ನೂ ಬಹುತೇಕ ಮೈಸೂರು ಭಾಗದ ನವ ಪೀಳಿಗೆಗೆ ಗೊತ್ತಿಲ್ಲ! ಇನ್ನೂ ಹಲವು ರಾಜಧಾನಿ‌ ಮಂದಿ ಇದನ್ನು ಪ್ರವಾಸಿ ತಾಣವಾಗಿ ಮಾತ್ರ ನೋಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ನಿರ್ಮಾತೃ ಶ್ರೀಯುತ ಆಲಂಬಾಡಿ ಜುಂಜೇಗೌಡ ಎನ್ನುವ ಪಾಳೇಗಾರ. ಸುಮಾರು ೧೫ನೇ ಶತಮಾನದಲ್ಲಿ ಅತಿ ದೊಡ್ಡ ಪ್ರಾಂತ್ಯವನ್ನೇ ಅಳಿ ಇಂದಿನ ಮಹದೇಶ್ವರ ಬೆಟ್ಟಕಟ್ಟಿ‌ದ್ದ. ಜನಾನುರಾಗಿಯಾಗಿ‌ ಅಂದಿನ ಜನಾಂಗಕ್ಕೆ ಮಾದರಿಯಾಗಿದ್ದ. ಆದರೆ ಕಾಲಘಟ್ಟದಲ್ಲಿ‌ ಇಂದು ನವಪೀಳಿಗೆ ಜಾತಿ-ಧರ್ಮದ ಅಮಲಲ್ಲಿ‌ ಬಿದ್ದ ಪರಿಣಾಮವಾಗಿ ಮೂಲ ಜಾಗ ಆಲಂಬಾಡಿಯಲ್ಲೇ ಆ ಪ್ರಾಂತ್ಯದ ವೈಭವದ ಕುರುಹು ಇತ್ಯಾದಿಗಳು ಅವನತಿ ಹಂಚಿನಲ್ಲಿವೆ.ಒಂದೊಂದು ಅಡ್ಡರಸ್ತೆಗೊಂದೊಂದು ಹೆಸರಿಡುವ ಸರ್ಕಾರ ಅಷ್ಟು ಆದಾಯವನ್ನು ಮಹದೇಶ್ವರ ಬೆಟ್ಟದಿಂದ ಪಡೆದುಕೊಳ್ಳುತ್ತಿದ್ದರೂ, ದೇವಸ್ಥಾನ ಕಟ್ಟಿದ ಆಲಂಬಾಡಿ ಜುಂಜೇಗೌಡರಿಗೊಂದು ಸ್ಥಾನವನ್ನೂ ಅಲ್ಲಿ ಕೊಟ್ಟಿಲ್ಲ. ಕಡೇ ಪಕ್ಷ ಒಂದು ಪ್ರತಿಮೆಯನ್ನೂ ಅಲ್ಲಿ ನಿಲ್ಲಿಸಿಲ್ಲ. ಇನ್ನೂ ಇತಿಹಾಸದಲ್ಲಂತೂ ಪುಸ್ತಕ ಸಾಹಿತ್ಯ ಇತ್ಯಾದಿಗಾಲು ಕನಸು ಬಿಡಿ. ಅದೃಷ್ಟ‌ ಅಂದರೆ ಜಾನಪದದಲ್ಲಿ ಇಂದಿಗೂ ಜೀವಂತವಾಗಿ ಮಾದಪ್ಪನ ಜೊತೆಜೊತೆಗೆ ಜುಂಜೇಗೌಡರೂ ಉಳಿದಿದ್ದಾರೆ.ಆದರೆ ಇತ್ತೀಚೆಗೆ ಎಲ್ಲರನ್ನೂ ಸೇರಿಸಿಕೊಂಡು ಜಾತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದೇವೆ ಎನ್ನುವ ಮತ್ತು ವಿದ್ಯೆಯನ್ನು ನಾವೇ ಕೊಟ್ಟಿದ್ದೇವೆನ್ನುವ ಜಾತಿವಾದಿಗಳು ಹೈಜಾಕ್ ಸಂಸ್ಕೃತಿಗೆ ಮೊರೆಹೋಗಿರೋದು ಗೊತ್ತಿದೆ. ಜಗದ್ಗುರು ರೇವಣ್ಣ ಸಿದ್ದೇಶ್ವರ ಇಂದು ಕುರುಬರಿಗೆ ಗೊತ್ತೇ ಇಲ್ಲ. ವರೇ ಮೂಲ ಗುರು ಎನ್ನುವುದು ಗೊತ್ತಿಲ್ಲದಿರುವವರೂ ಇದ್ದಾರೆ. ಹಾಗೆಯೇ ಮೈಸೂರು ಭಾಗದ ದಾರ್ಶನಿಕ ಪಂಥವಾದ ಬೊಪ್ಪಣಪುರದ ನಿರ್ಮಾತೃ ಬೊಪ್ಪೇಗೌಡರನ್ನು ಕೂಡಾ ಸರ್ಕಾರ ಮತ್ತು ಕುರುಬರು ಮರೆತ ಪರಿಣಾಮ ಈಗ ಇನ್ನೊಂದು ಸಮುದಾಯಕ್ಕೆ ಸೇರಿಸಿಕೊಳ್ಳಲಾಗಿದೆ.ಈಗ ಆಲಂಬಾಡಿ ಜುಂಜೇಗೌಡರನ್ನು ಹೈಜಾಕ್ ಮಾಡಲು ಪ್ರಬಲ ಜಾತಿವಾದಿಗಳು ಕೈ ಇಟ್ಟಿದ್ದಾರೆ. ಇದನ್ನು ಖಂಡಿತವಾಗಿಯೂ ಆಗಲು ಬಿಡಬಾರದು. ಮಲೆ ಮಹದೇಶ್ವರ ಸರ್ವ ಜನಾಂಗದ ದೇವರು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಮುಗ್ಗೊಂಡದ ಮಹದೇಶ್ವರ ಒಲಿದು ಪಾಳೆಗಾರನಾಗಿ ಅಲ್ಲೊಂದು ಶ್ರೀ ಕ್ಷೇತ್ರ ನಿರ್ಮಿಸಿದ ಆಲಂಬಾಡಿ ಜುಂಜೇಗೌಡರ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನಗಳು ನಡೆಯಬೇಕಿದೆ. ಅವರಿಗೆ ಸಿಗಬೇಕಾದ ನೈಜ ಗೌರವ ಸಿಗಲೇ ಬೇಕಿದೆ. ಈ ನಿಟ್ಟಿನಲ್ಲಿ‌ ಜಾಗರೂಕರಾಗಬೇಕಿದೆ.೨೧ನೇ ಶತಮಾನಕ್ಕೆ ನಾವೂ ಬಂದಿದ್ದರೂ ಇಂದಿಗೂ‌ ನಾಗಮಲೆಗೆ ತಲುಪಲು ಆಗುವ ಕಷ್ಟವನ್ನು‌ ಅಲ್ಲಿ ನಡೆದು ಹೋದವರೇ ಬಲ್ಲರು. ಅಂತದ್ರಲ್ಲಿ ೧೫ನೇ ಶತಮಾನದಲ್ಲಿ ಹೇಗಿತ್ತು? ಏನೆಲ್ಲಾ ಅನುಭವಿಸಿ ಅಲ್ಲಿ ಕಟ್ಟಿರಬಹುದು ಕಟ್ಟಿರಬಹುದು ಊಹಿಸಿ?!ಮೈಸೂರಿನ ಸಾಂಸ್ಕೃತಿಕ ನಾಯಕ ಆಲಂಬಾಡಿ ಜುಂಜೇಗೌಡರೇ ಏಕಾಗಬಾರದುಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿ ಒಂದು ಪ್ರಸಿದ್ದವಾದ ಐತಿಹಾಸಿಕ ಸ್ಥಳವಾಗಿತ್ತು!

Thu Feb 17 , 2022
ಅಲ್ಲಿಗೆ ಕೆಲವೊಂದು ಸಂಶೋಧನಾರ್ಥಿಗಳು ಬಿಟ್ಟರೇ ಯಾರು ಹೋಗುವುದಿಲ್ಲ. ಅಗ್ರಹಾರ ಬಾಚಹಳ್ಳಿಯ ಪುಟ್ಟಸ್ವಾಮಿ ಗೌಡರು ಹೇಳುವಂತೆ ಈ ಕೊಂಪೆಯಲ್ಲಿರುವುದು ಯಾರು ತಾನೇ ನೋಡುತ್ತಾರೆ. ನಮ್ಮ ಹಳ್ಳಿಗೆ ಪ್ರಚಾರದ ಕೊರತೆಯಿದೆ ಅಂತ ಹೇಳಿದರು. ನಿಜ ಈ ಐತಿಹಾಸಿಕ ಸ್ಥಳಕ್ಕೆ ಪ್ರಚಾರದ ಕೊರತೆಯಿದೆ. ಅಗ್ರಹಾರ ಬಾಚಹಳ್ಳಿ ಗ್ರಾಮ, ಕೆಆರ್ ಪೇಟೆಯಿಂದ ೬ ಕಿಮೀ ದೂರದಲ್ಲಿದೆ. ಆದರೂ ಜನ ಇಲ್ಲಿಗೆ ಹೋಗುವುದು ಅಪರೂಪ.ಈ ಅಗ್ರಹಾರ ಬಾಚಹಳ್ಳಿಯಲ್ಲಿ ನಮಗೆ ದೇವಾಲಯಕ್ಕಿಂತ ಹೆಚ್ಚು ಗಮನ ಸೆಳೆಯುವುದು ಅಲ್ಲಿರುವ ಆತ್ಮಾರ್ಪಣೆ […]

Advertisement

Wordpress Social Share Plugin powered by Ultimatelysocial