ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿ ಒಂದು ಪ್ರಸಿದ್ದವಾದ ಐತಿಹಾಸಿಕ ಸ್ಥಳವಾಗಿತ್ತು!

ಅಲ್ಲಿಗೆ ಕೆಲವೊಂದು ಸಂಶೋಧನಾರ್ಥಿಗಳು ಬಿಟ್ಟರೇ ಯಾರು ಹೋಗುವುದಿಲ್ಲ. ಅಗ್ರಹಾರ ಬಾಚಹಳ್ಳಿಯ ಪುಟ್ಟಸ್ವಾಮಿ ಗೌಡರು ಹೇಳುವಂತೆ ಈ ಕೊಂಪೆಯಲ್ಲಿರುವುದು ಯಾರು ತಾನೇ ನೋಡುತ್ತಾರೆ. ನಮ್ಮ ಹಳ್ಳಿಗೆ ಪ್ರಚಾರದ ಕೊರತೆಯಿದೆ ಅಂತ ಹೇಳಿದರು. ನಿಜ ಈ ಐತಿಹಾಸಿಕ ಸ್ಥಳಕ್ಕೆ ಪ್ರಚಾರದ ಕೊರತೆಯಿದೆ. ಅಗ್ರಹಾರ ಬಾಚಹಳ್ಳಿ ಗ್ರಾಮ, ಕೆಆರ್ ಪೇಟೆಯಿಂದ ೬ ಕಿಮೀ ದೂರದಲ್ಲಿದೆ. ಆದರೂ ಜನ ಇಲ್ಲಿಗೆ ಹೋಗುವುದು ಅಪರೂಪ.ಈ ಅಗ್ರಹಾರ ಬಾಚಹಳ್ಳಿಯಲ್ಲಿ ನಮಗೆ ದೇವಾಲಯಕ್ಕಿಂತ ಹೆಚ್ಚು ಗಮನ ಸೆಳೆಯುವುದು ಅಲ್ಲಿರುವ ಆತ್ಮಾರ್ಪಣೆ ಸ್ಮಾರಕಗಳಾದ ಮೂರು ಸ್ತಂಭಗಳು. ಅಲ್ಲಿರುವ ವೀರಗಲ್ಲುಗಳು. ಇದೆಲ್ಲಾ ನೋಡಿದ ಮೇಲೆ ನಮ್ಮ ಮನಸ್ಸಿನಿಂದ ಮರೆಯಾಗುವುದಿಲ್ಲ ಬದಲಾಗಿ ಎರೆಡು ಮೂರು ದಿನಗಳಾದರೂ ನಮ್ಮ ಮನದಲ್ಲಿ ಅಲ್ಲಿರುವ ಆತ್ಮಾರ್ಪಣೆ ಸ್ಮಾರಕಗಳು. ವೀರಗಲ್ಲುಗಳು ಪದೇ ಪದೇ ಕಾಡುವುದುದಂತೂ ಸತ್ಯ. ನನಗಂತೂ ವಾರ ಕಳೆದರು ಅದೇ ನೆನಪು, ಜೊತೆಗೆ ಹಳೇಬೀಡಿನ ಸಾಸಿರ ಲೆಂಕರ ಆತ್ಮಾರ್ಪಣ ತ್ಯಾಗದ ಇತಿಹಾಸ ಹೇಳುವ ಕುಮಾರ ಲಕ್ಷ್ಮನ ಸ್ಮಾರಕವೂ ನೆನಪು ಆಗುತ್ತದೆ.
ಅಗ್ರಹಾರ ಬಾಚಹಳ್ಳಿಯ ಆತ್ಮಾರ್ಪಣ ಸ್ಮಾರಕಗಳುಹೊಯ್ಸಳರ ಕಾಲದಲ್ಲಿ ರಾಜನಿಗೆ ನಿಷ್ಠರಾಗಿ, ಆತನ ಅಂಗರಕ್ಷಕರಂತಿದ್ದು ರಾಜನಿಗಾಗಿ ತಮ್ಮ ಜೀವನವನ್ನೇ ಬಲಿಕೊಡುವ, ಒಂದು ವೇಳೆ ರಾಜನು ಮರಣಿಸಿದರೆ ತಾವು ಆತ್ಮಾರ್ಪಣೆ ಮಾಡಿಕೊಳ್ಳುವ ಒಂದು ವೀರರ ಗುಂಪು ಇರುತ್ತಿತ್ತು ಇವರನ್ನು ಗರುಡರೆಂದು ಕರೆಯಲಾಗುತ್ತಿತ್ತು. ಗರುಡರು ಕಾಲಿಗೆ ಕಡಗವನ್ನು ತೊಟ್ಟುಕೊಂಡು ಪ್ರತಿಜ್ಞಾಪೂರ್ವಕವಾಗಿ ರಾಜನಿಗೆ ನಿಷ್ಠರಾಗಿರುತ್ತಿದ್ದರು. ವಿಷ್ಣುವಿನ ವಾಹನ ಗರುಡನು ಹೇಗೇ ಸ್ವಾಮಿನಿಷ್ಠೆಯಲ್ಲಿ ಅತ್ಯಂತ ಶ್ರೇಷ್ಠನೋ ಅದೇ ರೀತಿ ಇವರು ತಮ್ಮ ದೊರೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದರು. ಈ ವೀರರನ್ನು ಲೆಂಕರು ಎಂದು ಕರೆಯುತ್ತಿದ್ದರು. ಇವರ ಮಡಿದೀಯರನ್ನು ಲೆಂಕತಿಯಾರೆಂದು ಕರೆಯುತ್ತಿದ್ದರು. ಈ ಗರುಡರ ಆತ್ಮಾರ್ಪಣೆಯ ಸ್ಮಾರಕಗಳಿಗೆ ಸ್ಪಷ್ಟವಾದ ನಿರ್ದಶನ ಅಗ್ರಹಾರ ಬಾಚಹಳ್ಳಿ.

ಸುಮಾರು ಹದಿನೈದು ಅಡಿ ಎತ್ತರದ ಕಂಬದ ಮೇಲಿರುವ ಸಮತಟ್ಟಾದ ಪೀಠದ ಮೇಲೆ ಆನೆಗಳ ಮೇಲೆ ಗರುಡ. ವೀರರು ಮತ್ತು ಆತನ ಪತ್ನಿಯರ ಶಿಲ್ಪಗಳಿವೆ. ರಾಜರಿಗಾಗಿ ಏಳು ತಲೆಮಾರುಗಳಿಂದ ಲೆಂಕವಾಳಿಯಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ವಿವರಗಳು ಅಲ್ಲಿರುವ ಶಾಸನಗಳಲ್ಲಿ ಹಾಗೂ ಶಿಲ್ಪಗಳಲ್ಲಿ ದೊರೆಯುತ್ತದೆ. ಶಾಸನದಲ್ಲಿರುವ ಸಮಗ್ರ ಮಾಹಿತಿಯನ್ನು ಶಿಲ್ಪಗಳಲ್ಲಿ ಬಿಂಬಿಸಲಾಗಿದೆ.ಕಬ್ಬಾಹುನಾಡನ್ನು ಅಳುತ್ತಿದ್ದ ಮತ್ತು ಮೂಲಿಗ ಕುಲಕ್ಕೆ ಸೇರಿದ ಮಹಾಪ್ರಭು ಗಂಡನಾರಾಯಣಸೆಟ್ಟಿ ಮತ್ತು ಮಾಕವ್ವೆ. ಅವರ ಮಗ ಮಹಾಪ್ರಭು ಹೊಯ್ಸಳಸೆಟ್ಟಿ ಮತ್ತು ಅವನ ಪತ್ನಿ ಮಾಚವ್ವೆ ನಾಯಕಿತಿ ಹಾಗೂ ಅವರ ಉತ್ತರಾಧಿಕಾರಿಗಳು ಹೊಯ್ಸಳ ಅರಸರ ಲೆಂಕರಾಗಿದ್ದರುಈ ಮೂಲಿಗ ಕುಲಕ್ಕೆ ಸೇರಿದ ಮಹಾಸಾಮಂತ ಗಂಗತಾಯಿಯ ಗಂಡ ನಾರಾಯಣ ಸೆಟ್ಟಿ. ಮಾಕವ್ವೆ ನಾಯಕಿಯ ಜತೆ ಐವರು ಲೆಂಕರು ಹೊಯ್ಸಳ ರಾಜರಾದ ಮೊದಲನೇ ಬಲ್ಲಾಳ ಮತ್ತು ಮುಮ್ಮಡಿ ನರಸಿಂಹ (೧೧೦೦ – ೧೨೯೧) ಆಳ್ವಿಕೆಯಕಾಲದಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವರು. ನಂತರದ ಕಾಲದಲ್ಲಿ ಮಾರಿ ಸೆಟ್ಟಿ ಮಾರವ್ವೆನಾಯಕಿ ಮತ್ತು ಐವರು ಲೆಂಕರು ಕೊರೆಯನಾಯಕ – ಮಾರವ್ವೆ ನಾಯಕಿ. ಚಿಕ್ಕ ಮಾರೆವ್ವೆ ನಾಯಕಿ. ಸಿವೆ ನಾಯಕಿ. ಲಿಖಿಯನಾಯಕ. ಗಂಗಾದೇವಿ. ಕನ್ನೆಯನಾಯ್ಕ ಮತ್ತು ಅವನ ಪತ್ನಿಯರಾದ ವೋಮವ್ವೆ, ಜವ್ವನವ್ವೆ, ಕಲ್ಲವ್ವೆ ಮತ್ತು ಹತ್ತು ಜನ ಲೆಂಕತಿಯರು. ಇಪ್ಪತ್ತೊಂದು ಜನ ಲೆಂಕರು. ರಂಗನಾಯಕ – ಕೇಕವ್ವೆ. ಹೊನ್ನವ್ವೆ, ಮಂಚವ್ವೆ ಮತ್ತು ಹತ್ತು ಜನ ಲೆಂಕತಿಯರು ಇಪ್ಪತ್ತು ಜನ ಲೆಂಕರು ತಮ್ಮ ದೋರೆಗಾಗಿ ಗರುಡ ಪದ್ದತಿಯನ್ನು ಸ್ವೀಕರಿಸಿ ಆತ್ಮಾರ್ಪಣೆ ಮಾಡಿಕೊಡಿರುವುದಕ್ಕೆ ದಾಖಲೆ ಸಿಗುತ್ತದೆ. ಇಡೀ ಕುಟುಂಬವೇ ಪಾರಂಪರಿಕವಾಗಿ ಲೆಂಕವಾಳಿಯಾಗಿ ತಮ್ಮ ಪತ್ನಿಯರ ಸಮೇತರಾಗಿ ಆತ್ಮ ಬಲಿದಾನಗೈದ ಅಪರೂಪದ ದಾಖಲೆಯನ್ನು ಅಗ್ರಹಾರ ಬಾಚಹಳ್ಳಿಯ ಗರುಡ ಸ್ತಂಭಗಳು ಹೊತ್ತಿವೆ. ಇಲ್ಲಿನ ಪ್ರತಿ ಕಂಬದ ಮೇಲಿರುವ ಆನೆಗಳ ಮೇಲೆ ಗರುಡನ ಶಿಲ್ಪವಿದ್ದು. ಆದರ ಎದುರಿಗೆ ವೀರರ ಶಿಲ್ಪಗಳಿವೆ. ಅನೆಯ ಕೆಳಗಿನ ಪೀಠದಲ್ಲಿ ವೀರರ ಯಾವ ರೀತಿ ಆತ್ಮ ಬಲಿದಾನ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸುವ ಶಿಲ್ಪಗಳಿವೆ. ಒಬ್ಬರೂ ಆನೆಯಿಂದ ತುಳಿಸಿಕೊಂಡು ಸತ್ತರೆ. ಮತ್ತೊಬ್ಬ ಭರ್ಜಿಯಿಂದ ಚುಚ್ಚಿಸಿಕೊಂಡು ಮರಣಿಸುತ್ತಾನೆ. ಮಗದೊಬ್ಬ ಗರುಡ ಸ್ತಂಭಕ್ಕೆ ಕತ್ತಿಯನ್ನು ಬಿಗಿದು ಆ ಕತ್ತಿಗೆ ಅಪ್ಪಿಕೊಂಡು ಸಾವನ್ನು ಅಪ್ಪುತ್ತಿರುವುದು ಕಂಡುಬರುತ್ತದೆ. ಇಂತಹ ಅದ್ಬುತವಾದ ಮನ ಮಿಡಿಯುವ ರೋಜಕವಾದ ಇತಿಹಾಸ ಹಿನ್ನಲೆ ಹೊಂದಿದೆ ಅಗ್ರಹಾರ ಬಾಚಹಳ್ಳಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಎಂದರೆ ಬರಿ ಆದಿಲ್ ಶಾಹಿಗಳ ಭವ್ಯವಾದ ಸ್ಮಾರಕಗಳಿಗೆ ಪ್ರಸಿದ್ದಿ !

Thu Feb 17 , 2022
ವಿಜಯಪುರ ಎಂದರೆ ಬರಿ ಆದಿಲ್ ಶಾಹಿಗಳ ಭವ್ಯವಾದ ಸ್ಮಾರಕಗಳಿಗೆ ಪ್ರಸಿದ್ದಿ ಮಾತ್ರವಲ್ಲ,ಅಲ್ಲಿ ಕಲ್ಯಾಣಿ ಚಾಲುಕ್ಯರು ಕಟ್ಟಿರುವ ಅನೇಖ ಸುಂದರ ದೇಗುಲಗಳು ಇವೆ ಅವುಗಳಲ್ಲಿ ಚಟ್ಟರಕಿಯ ಈ ದತ್ತಾತ್ರೇಯ ಗುಡಿಯು ಒಂದು, ಕಲ್ಯಾಣಿ ಚಾಲುಕ್ಯರು ನಾಡಿಗೆ ನೀಡಿದ ಅಮೋಘವಾದ ಕಾಣಿಕೆ̤ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial