ರಣಬೀರ್​ ಹಾಗೂ ಆಲಿಯಾ ಭಟ್​ ವಿವಾಹ ದಿನಾಂಕ ಬದಲಿಸಿದ್ದೇವೆ ಎಂದಿದ್ದ ಕುಟುಂಬ !

 

ಮುಂಬೈ: ರಣಬೀರ್​ ಹಾಗೂ ಆಲಿಯಾ ಭಟ್​ ವಿವಾಹ ದಿನಾಂಕ ಬದಲಿಸಿದ್ದೇವೆ ಎಂದಿದ್ದ ಕುಟುಂಬ ಇದೀಗ ಕೊನೆಗೂ ದಿನಾಂಕವನ್ನು ಅಧಿಕೃತಗೊಳಿಸಿದೆ ಎನ್ನಲಾಗಿದೆ.

ಏ.14ರಂದೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಬುಧವಾರವ ಮಧ್ಯಾಹ್ನದಿಂದಲೇ ಮೆಹೆಂದಿ ಶಾಸ್ತ್ರ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.ವಿವಾಹ ಕುರಿತು ಭಾರಿ ಸುದ್ದಿಯಾದ ಹಿನ್ನಲೆಯಲ್ಲಿ ತೀರಾ ಖಾಸಗಿಯಾಗಿಡಲು ಕೇವಲ ಕುಟುಂಬಸ್ಥರು ಹಾಗೂ ಬಾಲಿವುಡ್​ನ ಅತ್ಯಾಪ್ತರನ್ನಷ್ಟೇ ಕರೆಯಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕಾಗಿ ರಣಬೀರ್ ಕಪೂರ್​ ಅವರ ವಾಸ್ತು ಹಾಗೂ ಕೃಷ್ಣರಾಜ್​ಕುಮಾರ್ ನಿವಾಸ ವಿವಿಧ ಹೂವು ಹಾಗೂ ಲೈಟ್​ಗಳಿಂದ ಕಂಗೊಳಿಸುತ್ತಿದೆ. ಈ ಹಿಂದೆ ಏಪ್ರಿಲ್​ 14 ರಂದೇ ವಿವಾಹ ನಡೆಯಲಿದ ಎಂದು ಹೇಳಲಾಗಿತ್ತು, ಆದರೆ ಸೋಮವಾರ ದಿಢೀರ್​ ದಿನಾಂಕವನ್ನು ಬದಲಿಸಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇದೀಗ ಮಾಧ್ಯಮದವರ ದಿಕ್ಕು ತಪ್ಪಿಸಲು ಈ ರೀತಿ ಹೇಳಲಾಗುತ್ತಿದ್ದು, ವಿವಾಹ ಸರಳವಾಗಿಯೇ ನಡೆಯಲಿದೆ ಎಂದು ಕೂಡ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.

Wed Apr 13 , 2022
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಇದಾದ ನಂತರ ಸತ್ಯ ಹೊರಬರಲಿದೆ. ಯಾರೋ ಹೇಳಿದ್ದೆಲ್ಲ ಸತ್ಯವಲ್ಲ ಎಂದು ಸಚಿವ ಈಶ್ವರಪ್ಪ ಪರವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಕಾಲತ್ತು ವಹಿಸಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ತನಿಖೆಯಾಗಬೇಕು. ನಂತರ ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮವಾಗಲಿದೆ ಎಂದರು. ಮಾಧ್ಯಮಗಳಲ್ಲಿ ಈಶ್ವರಪ್ಪ ಹೇಳಿಕೆ ಗಮನಿಸಿದ್ದೇನೆಯೇ ಹೊರತು ಹೆಚ್ಚಿನ ಮಾಹಿತಿಯಿಲ್ಲ. ಸಂತೋಷ್ […]

Advertisement

Wordpress Social Share Plugin powered by Ultimatelysocial